ಭಾನುವಾರ ಆಗಿದ್ದು ಡಬಲ್ ಎಲಿಮಿನೇಷನ್ ಅಲ್ಲ; ಇಲ್ಲಿದೆ ಬಿಗ್ ಬಾಸ್ ಟ್ವಿಸ್ಟ್

|

Updated on: Dec 25, 2023 | 8:18 AM

ತ್ರ. ಅವಿನಾಶ್ ಹಾಗೂ ಮೈಕಲ್​ನ​ ಗಾರ್ಡನ್ ಏರಿಯಾಗೆ ಬಂದ ಕಾರಿನಲ್ಲಿ ಕೂರಿಸಲಾಯಿತು. ಆ ಬಳಿಕ ಎರಡೂ ಕಾರುಗಳು ಹೊರ ಹೋದವು. ಇಲ್ಲಿಗೆ ಎಪಿಸೋಡ್ ಪೂರ್ಣಗೊಂಡಿದೆ. ಇಂದಿನ ಎಪಿಸೋಡ್​ನಲ್ಲಿ ಮೈಕಲ್ ಮರಳಿ ಬರೋದನ್ನು ತೋರಿಸಲಾಗುತ್ತದೆ ಎನ್ನಲಾಗುತ್ತಿದೆ.

ಭಾನುವಾರ ಆಗಿದ್ದು ಡಬಲ್ ಎಲಿಮಿನೇಷನ್ ಅಲ್ಲ; ಇಲ್ಲಿದೆ ಬಿಗ್ ಬಾಸ್ ಟ್ವಿಸ್ಟ್
ಅವಿನಾಶ್-ಅಜಯ್
Follow us on

ಬಿಗ್ ಬಾಸ್ (Bigg Boss) ಮನೆಯಲ್ಲಿ ಟ್ವಿಸ್ಟ್​ಗಳು ಸಾಮಾನ್ಯ. ಆಗಾಗ ವೀಕ್ಷಕರಿಗೆ ಸರ್​ಪ್ರೈಸ್ ಸಿಗುತ್ತಲೇ ಇರುತ್ತದೆ. ಭಾನುವಾರ (ಡಿಸೆಂಬರ್ 24) ನಡೆದ ಎಲಿಮಿನೇಷನ್​ನಲ್ಲಿ ಇಬ್ಬರು ಮನೆಯಿಂದ ಹೊರ ಹೋದಂತೆ ತೋರಿಸಲಾಗಿದೆ. ಆದರೆ ಇದರ ಅಸಲಿಯತ್ತು ಬೇರೆಯದೇ ಇದೆ ಎನ್ನಲಾಗಿದೆ. ಮೈಕಲ್ ಅವರು ಕಾರಿನಲ್ಲಿ ಹೊರ ಹೋದಂತೆ ತೋರಿಸಲಾಗಿದೆ ನಿಜ. ಆದರೆ, ಅವರು ಮರಳಿ ದೊಡ್ಮನೆಗೆ ಬಂದಿದ್ದಾರಂತೆ. ಹೀಗಾಗಿ ಕಳೆದ ವಾರ ಆಗಿದ್ದು ಡಬಲ್ ಎಲಿಮಿನೇಷನ್ ಅಲ್ಲ, ಸಿಂಗಲ್ ಎಲಿಮಿನೇಷನ್.

ಕಳೆದ ವೀಕೆಂಡ್​​ನಲ್ಲಿ ಸುದೀಪ್ ಅವರು ಬಂದಿರಲಿಲ್ಲ. ಅದಕ್ಕೆ ಕಾರಣ ಕೆಸಿಸಿ. ಹೀಗಾಗಿ ಶನಿವಾರದ ಎಪಿಸೋಡ್​ನ ಶ್ರುತಿ ಅವರು ನಡೆಸಿಕೊಟ್ಟಿದ್ದಾರೆ. ಭಾನುವಾರದ ಎಪಿಸೋಡ್​ಗೆ ಅತಿಥಿಗಳಾಗಿ ಬಿಗ್ ಬಾಸ್ ಸೀಸನ್ 7ರ ವಿನ್ನರ್ ಶೈನ್ ಶೆಟ್ಟಿ ಹಾಗೂ ಸೀಸನ್ 8ರ ಸ್ಪರ್ಧಿ ಶುಭಾ ಪೂಂಜಾ ಬಂದಿದ್ದರು. ಇಬ್ಬರೂ ಸಖತ್ ಮನರಂಜನೆ ನೀಡಿದ್ದಾರೆ.

ಇನ್ನು ನಾಮಿನೇಟ್ ಆದವರ ಪೈಕಿ ಸೇವ್ ಮಾಡಲು ಬಿಗ್ ಬಾಸ್ ವಿವಿಧ ರೀತಿಯ ಚಟುವಟಿಕೆ ನೀಡುತ್ತಾ ಹೋದರು. ಈ ವೇಳೆ ಕೊನೆಯಲ್ಲಿ ಉಳಿದುಕೊಂಡಿದ್ದು ಮೈಕಲ್ ಹಾಗೂ ಅವಿನಾಶ್ ಮಾತ್ರ. ಅವಿನಾಶ್ ಹಾಗೂ ಮೈಕಲ್​ನ​ ಗಾರ್ಡನ್ ಏರಿಯಾಗೆ ಬಂದ ಕಾರಿನಲ್ಲಿ ಕೂರಿಸಲಾಯಿತು. ಆ ಬಳಿಕ ಎರಡೂ ಕಾರುಗಳು ಹೊರ ಹೋದವು. ಇಲ್ಲಿಗೆ ಎಪಿಸೋಡ್ ಪೂರ್ಣಗೊಂಡಿದೆ. ಇಂದಿನ ಎಪಿಸೋಡ್​ನಲ್ಲಿ ಮೈಕಲ್ ಮರಳಿ ಬರೋದನ್ನು ತೋರಿಸಲಾಗುತ್ತದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ‘ಪ್ರತಾಪ್​ ಬೆನ್ನಿಗೆ ನಮ್ರತಾ ಚೂರಿ ಹಾಕಿದ್ರು’; ಬಿಗ್ ಬಾಸ್ ಪ್ರೋಮೋ ನೋಡಿ ಫ್ಯಾನ್ಸ್ ಶಾಕ್

ಇನ್ನು, ಲೈವ್​ನಲ್ಲಿ ಸಿರಿ ಆಡಿದ ಮಾತು ಗಮನ ಸೆಳೆದಿದೆ. ಪಾತ್ರೆ ತೊಳೆಯೋದು ಯಾರು ಎನ್ನುವ ವಿಚಾರವನ್ನು ಅವರು ಮಾತನಾಡುತ್ತಿದ್ದರು. ಈ ವೇಳೆ ಸಿರಿ ಅವರು ಮೈಕಲ್ ಹೆಸರನ್ನು ಸೇರಿಸಿದ್ದರು. ಇದು ಕೂಡ ಮೈಕಲ್ ದೊಡ್ಮನೆಗೆ ಮರಳಿದ್ದಾರೆ ಎನ್ನುವುದಕ್ಕೆ ಸಿಕ್ಕಿರೋ ಸಾಕ್ಷಿ. ಇಂದು (ಡಿಸೆಂಬರ್ 25) ಈ ಎಪಿಸೋಡ್ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರ ಕಾಣಲಿದೆ. 24 ಗಂಟೆ ಲೈವ್ ನೋಡೋಕೆ ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:14 am, Mon, 25 December 23