ದಳಪತಿ ವಿಜಯ್ (Thalapathy Vijay) ನಟನೆಯ ತಮಿಳು ಸಿನಿಮಾ ‘ಲಿಯೋ’ ಇಂದು (ಅಕ್ಟೋಬರ್ 19) ರಿಲೀಸ್ ಆಗಿದೆ. ಶಿವರಾಜ್ಕುಮಾರ್ ನಟನೆಯ ‘ಘೋಸ್ಟ್’ (Ghost Movie ) ಕೂಡ ಇಂದೇ ರಿಲೀಸ್ ಆಗಿದ್ದು ಸಾಕಷ್ಟು ಸ್ಪರ್ಧೆ ಏರ್ಪಟ್ಟಿದೆ. ದಸರಾ ಪ್ರಯುಕ್ತ ಸಾಲು ಸಾಲು ರಜೆಗಳಿವೆ. ಇದು ಚಿತ್ರದ ಕಲೆಕ್ಷನ್ ಹೆಚ್ಚಲು ಸಹಕಾರಿ ಆಗಲಿದೆ. ಸದ್ಯ ‘ಘೋಸ್ಟ್’ ಚಿತ್ರಕ್ಕೆ ಎಲ್ಲಾ ಕಡೆಗಳಿಂದ ಮೆಚ್ಚುಗೆ ಸಿಗುತ್ತಿದೆ. ಆದರೆ, ‘ಲಿಯೋ’ ಸಿನಿಮಾಗೆ ಸೋಲಿನ ಮುನ್ಸೂಚನೆ ಸಿಕ್ಕಿದೆ. 2022ರಲ್ಲಿ ರಿಲೀಸ್ ಆಗಿ ಸೋತ ವಿಜಯ್ ನಟನೆಯ ‘ಬೀಸ್ಟ್’ ಚಿತ್ರಕ್ಕಿಂತ ನಾಲ್ಕು ಪಟ್ಟು ಕೆಟ್ಟದಾಗಿ ‘ಲಿಯೋ’ ಇದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ದಳಪತಿ ವಿಜಯ್ ಅವರು ಒಪ್ಪಿಕೊಂಡ ಚಿತ್ರದ ಕೆಲಸವನ್ನು ಆದಷ್ಟು ಬೇಗ ಮುಗಿಸುತ್ತಾರೆ. ಜನವರಿಯಲ್ಲಿ ‘ವಾರಿಸು’ ರಿಲೀಸ್ ಆಗಿ ಹಿಟ್ ಆಯಿತು. ಈಗ ಹತ್ತೇ ತಿಂಗಳಲ್ಲಿ ಅವರ ಮತ್ತೊಂದು ಸಿನಿಮಾ ರಿಲೀಸ್ ಆಗಿದೆ. ‘ಲಿಯೋ’ ಚಿತ್ರವನ್ನು ನೋಡಿದವರು ಟ್ವಿಟರ್ನಲ್ಲಿ ವಿಮರ್ಶೆ ತಿಳಿಸುತ್ತಿದ್ದಾರೆ. ಸಿನಿಮಾ ಉತ್ತಮವಾಗಿಲ್ಲ ಎನ್ನುವ ಅಭಿಪ್ರಾಯಹೊರಹಾಕುತ್ತಿದ್ದಾರೆ.
‘ಬೀಸ್ಟ್ಗಿಂತ ನಾಲ್ಕು ಪಟ್ಟು ಕೆಟ್ಟದಾಗಿದೆ’ ಎಂದು ಅಭಿಮಾನಿಯೋರ್ವ ಹೇಳಿಕೊಂಡಿದ್ದಾನೆ. ಕೆಲವರು ‘ಓವರ್ ಹೈಪ್ ಸಿನಿಮಾ’ ಎಂದಿದ್ದಾರೆ. ‘ಲಿಯೋ ಎಂದರೆ ಸಿಂಹ ಅಲ್ಲ, ಬೆಕ್ಕು’ ಎಂದು ಕೆಲವರು ಟೀಕೆ ಮಾಡಿದ್ದಾರೆ. ಈ ಮೂಲಕ ಸಿನಿಮಾಗೆ ಸೋಲಾಗುವ ಮುನ್ಸೂಚನೆ ಸಿಕ್ಕಿದೆ.
#LEO is 4 times worse than BEAST #LeoReview #LeoDisaster pic.twitter.com/goHr3GA0wa
— Abinesh (@SuriyaAbi6) October 19, 2023
#Leo: ⭐️⭐️
Leo – Meow
||#LeoReview|#LeoFDFS||
Tried to be a lion🦁 but ended up as a cat🐈. Despite a promising premise and some commendable efforts from Joseph Vijay and cast, the end result is a disappointment. Lokesh Kanagaraj’s Leo fails to live up to the expectations or… pic.twitter.com/46TSuaRAI7
— Manobala Vijayabalan (@ManobalaV) October 19, 2023
That over-hyped #LCU connect.😂#LeoReview#LeoFDFS#LeoDisaster pic.twitter.com/oYj2HyE5Of
— Saran I. N. D. I. A (@saran_the_boss) October 19, 2023
ಇದನ್ನೂ ಓದಿ: ‘ಘೋಸ್ಟ್ ಮುಂದೆ ಯಾವ ಲಿಯೋನೂ ಇಲ್ಲ’; ಶಿವಣ್ಣನ ಚಿತ್ರಕ್ಕೆ ಮೆಚ್ಚುಗೆಯ ಮಹಾಪೂರ
‘ಕೈದಿ’, ‘ವಿಕ್ರಮ್’ ಸಿನಿಮಾದಲ್ಲಿ ಡ್ರಗ್ಸ್ ವಿಚಾರ ಹೈಲೈಟ್ ಆಗಿತ್ತು. ‘ಲಿಯೋ’ ಸಿನಿಮಾದಲ್ಲೂ ನಿರ್ದೇಶಕ ಲೋಕೇಶ್ ಕನಗರಾಜ್ ಅವರು ಇದೇ ವಿಚಾರದ ಮೇಲೆ ಫೋಕಸ್ ಮಾಡಿದ್ದಾರೆ. ತ್ರಿಷಾ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಅನಿರುದ್ಧ್ ರವಿಚಂದರ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:01 am, Thu, 19 October 23