
ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್’ ಸಿನಿಮಾ ಇಂದು (ಜನವರಿ 25) ರಿಲೀಸ್ ಆಗಿದೆ. ಈ ಚಿತ್ರವನ್ನು ಶಾರುಖ್ ಅಭಿಮಾನಿಗಳು ಕಣ್ತುಂಬಿಕೊಳ್ಳುತ್ತಿದ್ದಾರೆ. ಅನೇಕ ಕಡೆಗಳಲ್ಲಿ ಮುಂಜಾನೆಯಿಂದಲೇ ಶೋಗಳನ್ನು ಆಯೋಜನೆ ಮಾಡಲಾಗಿದೆ. ‘ಪಠಾಣ್’ ಚಿತ್ರವನ್ನು (Pathan Twitter Review) ನೋಡಿದ ಪ್ರೇಕ್ಷಕರು ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ಶಾರುಖ್ ಖಾನ್ ಹಾಗೂ ಜಾನ್ ಅಬ್ರಾಹಂ ಅವರ ಮುಖಾಮುಖಿಯನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ.
ಶಾರುಖ್ ಖಾನ್ ಅವರು ನಾಲ್ಕು ವರ್ಷಗಳ ಬಳಿಕ ದೊಡ್ಡ ಪರದೆಗೆ ಮರಳಿದ್ದಾರೆ. ಅವರು ಮಾಸ್ ಅವತಾರದಲ್ಲಿ ಮರಳಿದ್ದಾರೆ ಎಂಬುದಕ್ಕೆ ಟ್ರೇಲರ್ ಸಾಕ್ಷ್ಯಸಿಕ್ಕಿತ್ತು. ಸಿನಿಮಾ ಕೂಡ ಅದೇ ರೀತಿ ಇದೆ. ಚಿತ್ರ ನೋಡಿದ ನೆಟ್ಟಿಗರು ತಮ್ಮ ವಿಮರ್ಶೆ ತಿಳಿಸುತ್ತಿದ್ದಾರೆ.
‘ಪಠಾಣ್ ಹೈವೋಲ್ಟೇಜ್ ಆ್ಯಕ್ಷನ್ ಸಿನಿಮಾ. ಸಿದ್ದಾರ್ಥ್ ಆನಂದ್ ಅವರ ನಿರೂಪಣೆ ಉತ್ತಮವಾಗಿದೆ. ಶಾರುಖ್ ಖಾನ್ ಅವರ ಪರ್ಫಾರ್ಮೆನ್ಸ್ ಅದ್ಭುತವಾಗಿದೆ. ಜಾನ್ ಅಬ್ರಾಹಂ ಹಾಗೂ ದೀಪಿಕಾ ಪಡುಕೋಣೆ ಅವರು ಉತ್ತಮ ನಟನೆ ತೋರಿದ್ದಾರೆ. ಹಲವು ಟ್ವಿಸ್ಟ್ಗಳಿವೆ. ಪಠಾಣ್ ಎಂಟರ್ಟೇನಿಂಗ್ ಆಗಿದೆ’ ಎಂದು ಅಭಿಮಾನಿಯೋರ್ವ ಬರೆದುಕೊಂಡಿದ್ದಾನೆ.
ಇದನ್ನೂ ಓದಿ: Pathaan: ‘ಪಠಾಣ್’ ಚಿತ್ರದಲ್ಲಿ ಡಿಲೀಟ್ ಆಗಿಲ್ಲ ಕೇಸರಿ ಬಿಕಿನಿ ದೃಶ್ಯ: ಶಾರುಖ್ ಚಿತ್ರದ ಮೊದಲಾರ್ಧ ಹೇಗಿದೆ?
‘ಒಂದೊಳ್ಳೆಯ ಸಿನಿಮಾ. ಇತ್ತೀಚಿನ ವರ್ಷಗಳಲ್ಲಿ ಶಾರುಖ್ ಖಾನ್ ಅವರ ಬೆಸ್ಟ್ ಸಿನಿಮಾ. ಜಾನ್ ಅಬ್ರಾಹಂ-ದೀಪಿಕಾ ಒಳ್ಳೆಯ ಪರ್ಫಾರ್ಮೆನ್ಸ್ ನೀಡಿದ್ದಾರೆ. ಕೆಲವು ಅತಿಥಿ ಪಾತ್ರಗಳು ಸರ್ಪ್ರೈಸಿಂಗ್ ಆಗಿವೆ. ನಂಬಲಾರದ ಕ್ಲೈಮ್ಯಾಕ್ಸ್’ ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರಿಗೆ ಸಿನಿಮಾ ಇಷ್ಟವಾಗಿಲ್ಲ. ಅದೇ ಹಳೆಯ ಕಥೆ, ಹಳೆಯ ಟೆಕ್ನಿಕ್ ಎಂದು ಹೇಳಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:56 am, Wed, 25 January 23