
‘ಥಗ್ ಲೈಫ್’ (Thug Life Movie) ರಿಲೀಸ್ ಸಿನಿಮಾ ಸಂದರ್ಭದಲ್ಲಿ ಕನ್ನಡಿಗರ ವಿರೋಧ ಕಟ್ಟಿಕೊಂಡು ತಮಿಳಿನಾಡಿನಿಂದ ಒಂದೇ ಎಲ್ಲಾ ದುಡ್ಡು ಬಾಚಿಕೊಳ್ಳುತ್ತೇನೆ ಎಂದು ಧಿಮಾಕು ತೋರಿಸಿಕೊಂಡು ಹೋಗಿದ್ದ ಕಮಲ್ ಹಾಸನ್ಗೆ ತಮಿಳಿಗರೇ ಉಗಿದು ಉಪ್ಪಿನ ಕಾಯಿ ಹಾಕುತ್ತಿದ್ದಾರೆ. ಅವರ ನಟನೆಯ ‘ಥಗ್ ಲೈಫ್’ ಚಿತ್ರ ಇಂದು (ಜೂನ್ 5) ರಿಲೀಸ್ ಆಗಿದೆ. ಈ ಸಿನಿಮಾನ ನೋಡಲು ಕನ್ನಡಿಗರೂ ಈ ಮೊದಲು ಕಾದಿದ್ದರು. ಆದರೆ, ಕಮಲ್ ಹಾಸನ್ ಅವರು ಯಾವಾಗ ‘ಕನ್ನಡ ಹುಟ್ಟಿದ್ದು ತಮಿಳಿನಿಂದ’ ಎಂದರೋ ಆ ಕ್ಷಣಕ್ಕೆ ಅವರು ಕನ್ನಡಿಗರ ವಿರೋಧ ಕಟ್ಟಿಕೊಂಡರು. ಈ ಚಿತ್ರವನ್ನು ಕರ್ನಾಟಕದಲ್ಲಿ ರಿಲೀಸ್ ಮಾಡಲು ಅವಕಾಶ ನೀಡಿಲ್ಲ. ಹೀಗಿರುವಾಗಲೇ ಚಿತ್ರಕ್ಕೆ ನೆಗೆಟಿವ್ ವಿಮರ್ಶೆ ಸಿಕ್ಕಿದೆ.
‘ಥಗ್ ಲೈಫ್’ ಚಿತ್ರದ ಈವೆಂಟ್ನಲ್ಲಿ ಮಾತನಾಡಿದ್ದ ಕಮಲ್ ಹಾಸನ್ ಅವರು ‘ಕನ್ನಡ ಹುಟ್ಟಿದ್ದು ತಮಿಳಿನಿಂದ’ ಎಂದು ಹೇಳಿದ್ದರು. ಆ ಬಳಿಕ ಅವರು ಕ್ಷಮೆ ಕೇಳಿಯೇ ಇಲ್ಲ. ಏನೇ ಆದರೂ ನಾನು ಕನ್ನಡಿಗರ ಬಳಿ ಕ್ಷಮೆ ಕೇಳಲ್ಲ, ನಾನು ತಪ್ಪೇ ಮಾಡಿಲ್ಲ ಎಂದು ಧಿಮಾಕು ತೋರಿಸುತ್ತಿದ್ದರು. ಈ ಸಮಯದಲ್ಲಿ ತಮಿಳಿಗರ ಓಲೈಕೆ ಮಾಡಲು ಕೂಡ ಪ್ರಯತ್ನಿಸಿದ್ದರು. ಈಗ ಅವರಿಗೆ ತಮಿಳಿಗರೇ ಪಾಠ ಕಲಿಸಿದ್ದಾರೆ.
#RetroReview – Kanguva was better than this #ThugLifeReview – Indian2 was better than this#ThugLife #KamalHaasan #STR #Trisha pic.twitter.com/aznlG6kkZl
— செல்வி பவித்ரா (@VLinsta) June 5, 2025
#ThugLifeReview : A Miss Fire & tests patience
OUR RATING : 1.5/5#KamalHaasan and #Simbu performance good and #TrishaKrishnan role no value to the narrative pic.twitter.com/jlgf3DzqDs
— CHITRAMBHALARE (@chitrambhalareI) June 5, 2025
#ThugLifeReview #KamalHaasan #SilambarasanTR
Thug Life Movie Review =
– Absolutely Disappointed 💯😔Overall = 2.15/5
Story = 2.25/5
🎶/BGM = 2.5/5 👎
Visuals =3/5 🫶
1st Half = 2.65/5
Interval = 2.5/5
2nd Half = 2/5 😣
Emotion = 2.25/5
Actings = 3.5/5 ❤️
-Team 👏… pic.twitter.com/BM7qCLBd0n— Reviewer_Bossu (@ReviewerBossu) June 5, 2025
#ThugLifeFDFS #ThugLifeFromToday #ThugLifeDisaster #ThugLifeReview#ThugLife Expectation. Reality pic.twitter.com/tnXFNlQhlt
— Elon 3.0 (@Elon90Elon) June 5, 2025
Vairsu Was better than this 😑#GoodBadUglyReview –
VidaaMuyarchi was better than this 😮💨#RetroReview –
Kanguva was better than this 🥱#ThugLifeReview –
Indian2 was better than this🤫
— ❤️🔥 (@ramu4866) June 5, 2025
‘ಅತಿ ಕೆಟ್ಟ ಸಿನಿಮಾ’ ಎಂದು ಕೆಲವರು ಹೇಳಿಕೊಂಡಿದ್ದಾರೆ. ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ ಚಿತ್ರವು ಈ ಮೊದಲು ರಿಲೀಸ್ ಆಗಿ ಅಟ್ಟರ್ ಫ್ಲಾಪ್ ಆಗಿತ್ತು. ಈಗ ಅನೇಕರು ‘ಥಗ್ ಲೈಫ್’ ನೋಡಿ ‘ಇಂಡಿಯನ್ 2’ ಚಿತ್ರವೇ ಚೆನ್ನಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಅಂದರೆ ‘ಥಗ್ ಲೈಫ್’ ಚಿತ್ರ ಅದೆಷ್ಟು ಕೆಟ್ಟದಾಗಿ ಇರಬಹುದು ಎಂದು ಅನೇಕರು ಊಹಿಸುತ್ತಿದ್ದಾರೆ.
ಇದನ್ನೂ ಓದಿ: ‘ಥಗ್ ಲೈಫ್’ ಸಿನಿಮಾ ರಿಲೀಸ್ ವೇಳೆ ಬೆಂಗಳೂರಿಗರ ನೆನೆದು ಮರುಗಿದ ಕಮಲ್ ಹಾಸನ್
‘ಥಗ್ ಲೈಫ್’ ಚಿತ್ರಕ್ಕೆ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನ ಇದೆ. ಈ ಚಿತ್ರದಲ್ಲಿ ಕತೆ ಹಾಗೂ ನಿರೂಪಣೆ ಯಾವುದೂ ಉತ್ತಮವಾಗಿಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಮೊದಲ ದಿನದ ಗಳಿಕೆ ಮೇಲೆ ಈ ವಿಮರ್ಶೆ ಸಾಕಷ್ಟು ಪರಿಣಾಮ ಬೀರಲಿದೆ. ಇನ್ನು, ಕಮಲ್ ಕ್ಷಮೆ ಕೇಳಿ ಕರ್ನಾಟಕದಲ್ಲಿ ಸಿನಿಮಾ ರಿಲೀಸ್ ಆದರೂ ಯಶಸ್ಸು ಕಾಣೋದು ಅನುಮಾನವೇ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:52 pm, Thu, 5 June 25