ನೈಜ ಘಟನೆ ಆಧರಿತ ಬಿಗ್ ಬಜೆಟ್ ಸಿನಿಮಾ ಮಾಡಲಿರುವ ನಾಗಶೇಖರ್, ದೀಪಿಕಾ ಪಡುಕೋಣೆಯ ಕರೆತರುವ ವಿಶ್ವಾಸ

|

Updated on: Sep 10, 2023 | 1:41 PM

Nagashekhar: 'ಸಂಜು ವೆಡ್ಸ್ ಗೀತಾ 2' ಸಿನಿಮಾ ಘೋಷಣೆ ಮಾಡಿದ ಕೆಲವೇ ದಿನಗಳಲ್ಲಿ ಭಾರಿ ಬಜೆಟ್ ಸಿನಿಮಾ ಒಂದನ್ನು ನಿರ್ದೇಶಕ ನಾಗಶೇಖರ್ ಘೋಷಣೆ ಮಾಡಿದ್ದಾರೆ. ಮಾತ್ರವಲ್ಲದೆ ತಮ್ಮ ಸಿನಿಮಾಕ್ಕೆ ನಾಯಕಿಯಾಗಿ ದೀಪಿಕಾ ಪಡುಕೋಣೆಯನ್ನು ಕರೆತರುವುದಾಗಿ ಹೇಳಿದ್ದಾರೆ.

ಕೆಲವು ದಿನಗಳ ಹಿಂದಷ್ಟೆ ಶ್ರೀನಗರ ಕಿಟ್ಟಿ (Srinagar Kitty) ಹಾಗೂ ರಚಿತಾ ರಾಮ್ (Rachita Ram) ನಟನೆಯ ‘ಸಂಜು ವೆಡ್ಸ್ ಗೀತಾ 2’ ಸಿನಿಮಾ ಘೋಷಣೆ ಮಾಡಿದ ನಿರ್ದೇಶಕ ನಾಗಶೇಖರ್, ಇದೀಗ ಪ್ಯಾನ್ ಇಂಡಿಯಾ ಸಿನಿಮಾ ಒಂದಕ್ಕೆ ಕೈ ಹಾಕಿದ್ದಾರೆ. ‘ಭೀಮಾ ಕೋರೆಗಾಂವ್’ ಹೆಸರಿನ ಸಿನಿಮಾ ಘೋಷಿಸಿರುವ ನಾಗಶೇಖರ್, ಈ ಸಿನಿಮಾದಲ್ಲಿ ಕನ್ನಡದ ಸ್ಟಾರ್ ನಟ ನಾಯಕನಾಗಿ ನಟಿಸಲಿದ್ದಾರೆ. ನಾಯಕಿಯಾಗಿ ದೀಪಿಕಾ ಪಡುಕೋಣೆಯನ್ನು ಕರೆದುಕೊಂಡು ಬರುವ ಆಸೆಯಿದೆ. ಖಂಡಿತ ಕರೆದುಕೊಂಡು ಬರುತ್ತೀನಿ ಎಂದಿದ್ದಾರೆ. ಸಿನಿಮಾಕ್ಕೆ 120 ಕೋಟಿ ಬಜೆಟ್ ಆಗಲಿದ್ದು, ಸಿನಿಮಾದ ನಿರ್ಮಾಣವನ್ನು ಛಲವಾದಿ ಕುಮಾರ್ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Sep 10, 2023 01:39 PM