ಗಂಗೂಬಾಯಿ ಹಾನಗಲ್ ಕಚೇರಿ ಹಾಳು ಮಾಡಲು ಹೋಗಿ ಅವರ ಸಂಗೀತಕ್ಕೆ ಫಿದಾ ಆಗ್ಬಿಟ್ಟಿದ್ರು ನಾನಾ ಪಾಟೇಕರ್

ಖ್ಯಾತ ನಟ ನಾನಾ ಪಾಟೇಕಾರ ಬಾರದ ಲೋಕಕ್ಕೆ ಹೋಗಿದ್ದಾರೆ. ಮಹಾನ್ ನಟನಿಗೆ ಖ್ಯಾತ ಹಿಂದೂಸ್ಥಾನಿ ಗಾಯಕಿ ಗಂಗೂಬಾಯಿ ಹಾನಗಲ್ ತಾಯಿ ಸಮಾನರಾಗಿದ್ದರು. ಗಂಗೂಬಾಯಿ ಹಾನಗಲ್ ಅವರ ಸಂಗೀತ ಕಚೇರಿ ಹಾಳು ಮಾಡಲು ಹೋಗಿದ್ದ ನಾನಾ ಪಾಟೇಕರ್, ಅವರ ಸಂಗೀತ ಕೇಳಿ ಮೂಕವಿಸ್ಮಿತರಾಗಿದ್ದು, ಬಳಿಕ ನಾನಾ ಪಾಟೇಕರ್, ಗಂಗೂಬಾಯಿ ಅವರ ಫ್ಯಾನ್ ಆಗ್ಬಿಟ್ಟಿದ್ದರು. ತದನಂತರ ಗಂಗೂಬಾಯಿ ಹಾನಗಲ್ ಹಾಗೂ ನಾನಾ ಪಾಟೇಕರ್ ಅನ್ಯೂನ್ಯತೆ ಹೇಗಿತ್ತು ಎನ್ನುವುದನ್ನು ನೋಡಿ.

ಗಂಗೂಬಾಯಿ ಹಾನಗಲ್ ಕಚೇರಿ ಹಾಳು ಮಾಡಲು ಹೋಗಿ ಅವರ ಸಂಗೀತಕ್ಕೆ ಫಿದಾ ಆಗ್ಬಿಟ್ಟಿದ್ರು  ನಾನಾ ಪಾಟೇಕರ್
Gangubai Hangal Nana Patekar
Edited By:

Updated on: Oct 08, 2026 | 9:56 PM

ಹುಬ್ಬಳ್ಳಿ, (ಅಕ್ಟೋಬರ್ 08): ತಮ್ಮ ನಟನೆ ಹಾಗೂ ಅನೇಕ ಸಮಾಜಮುಖಿ ಕೆಲಸಗಳಿಂದ ದೊಡ್ಡ ಹೆಸರು ಮಾಡಿದ್ದು ನಾನಾ ಪಾಟೇಕರ್, ಇಂದು (ಅ.08) ಅವರು ಬಾರದ ಲೋಕಕ್ಕೆ ಹೋಗಿದ್ದಾರೆ. ಆದ್ರೆ ಅವರ ನಟನೆ, ಮಾಡಿದ ಕೆಲಸಗಳು, ಅನೇಕರ ಜೊತೆ ಅವರು ತೋರಿದ ಪ್ರೀತಿ, ಮಮತೆ ಚಿರಸ್ಥಾಯಿಯಾಗಿವೆ. ಇನ್ನು ನಾನಾ ಪಾಟೇಕರ್ ಗೂ ಖ್ಯಾತ ಹಿಂದೂಸ್ಥಾನಿ ಗಾಯಕಿ ದಿವಂಗತ ಗಂಗೂಬಾಯಿ ಹಾನಗಲ್ ಅವರ ನಡುವೆ ಉತ್ತಮ ಬಾಂಧವ್ಯವಿತ್ತು. ಗಂಗೂಬಾಯಿ ಹಾನಗಲ್ ರನ್ನು ನಾನಾ ಪಾಟೇಕರ್ ತಾಯಿ ಅಂತಲೇ ಪ್ರೀತಿಯಿಂದ ಕರೆಯುತ್ತಿದ್ದರಂತೆ.

ಇನ್ನು ಗಂಗೂಬಾಯಿ ಹಾನಗಲ್ ಅವರ ಸಂಗೀತದ ಆರಾಧಕರಾಗಿದ್ದ ನಾನಾ ಪಾಟೇಕರ್, ಒಂದು ಸಮಯದಲ್ಲಿ ಗಂಗೂಬಾಯಿ ಹಾನಗಲ್ ಅವರ ಸಂಗೀತ ಕಚೇರಿಯನ್ನು ಹಾಳು ಮಾಡಲು ಹೋಗಿದ್ದರಂತೆ. ಹೌದು… ಇದು ಅಚ್ಚರಿಯಾದರೂ ಸಹ ಸತ್ಯ. ಮುಂಬೈ ನ ಜೆ ಜೆ ಕಾಲೇಜಿನಲ್ಲಿ ನಾನಾ ಪಾಟೇಕರ್ ಓದುತ್ತಿದ್ದಾಗ, ಅಲ್ಲಿಯೇ ಗಂಗೂಬಾಯಿ ಹಾನಗಲ್ ಅವರ ಸಂಗೀತ ಕಚೇರಿ ಮಾಡಿಕೊಂಡಿದ್ದರು. ಆದ್ರೆ, ಹಿಂದೂಸ್ಥಾನಿ ಸಂಗೀತದ ಬಗ್ಗೆ ಒಲವಿಲ್ಲದ ನಾನಾ ಪಾಟೇಕರ್, ತಮ್ಮ ಸ್ನೇಹಿತರ ಜೊತೆ ಸೇರಿ ಸಂಗೀತ ಕಚೇರಿಯನ್ನು ಹಾಳು ಮಾಡಲು ಯತ್ನಿಸಿದ್ದರಂತೆ. ಆದ್ರೆ ಇದೇ ಸಮಯದಲ್ಲಿ ಗಂಗೂಬಾಯಿ ಹಾನಗಲ್ ಅವರ ಹಿಂದೂಸ್ಥಾನಿ ಸಂಗೀತ ಕೇಳಿ ಮಂತ್ರಮುಗ್ದರಾಗಿ ಮಾಡಲು ಹೊರಟ್ಟಿದ್ದ ಕೆಲಸ ಬಿಟ್ಟಿದ್ದಾರಂತೆ. ಅಲ್ಲಿಂದ ಗಂಗೂಬಾಯಿ ಹಾನಗಲ್ ರ ಬಗ್ಗೆ ಗೌರವ, ಪ್ರಿತಿಯನ್ನು ಹೊಂದಿದ್ದರು. ನಾನಾ ಪಾಟೇಕರ್, ಮುಂಬೈ, ಪುಣೆಯಲ್ಲಿ ಗಂಗೂಬಾಯಿ ಹಾನಗಲ್ ಅವರ ಸಂಗೀತ ಕಾರ್ಯಕ್ರಮ ಇದ್ರೆ ತಪ್ಪದೇ ಹೋಗಿ ಸಂಗೀತ ಕೇಳ್ತಿದ್ದರಂತೆ.

ಇದನ್ನೂ ನೋಡಿ: ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ

ಇನ್ನು 2006 ರಲ್ಲಿ ಗಂಗೂಬಾಯಿ ಹಾನಗಲ್ ಅವರ 96ನೇ ಜನ್ಮದಿನ ಕಾರ್ಯಕ್ರಮವನ್ನು ಹುಬ್ಬಳ್ಳಿ ಸವಾಯಿ ಗಂದರ್ವ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದ್ದು, ನಾನಾ ಪಾಟೇಕರ್ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು. ಗಂಗೂಬಾಯಿ ಹಾನಗಲ್ ಜನ್ಮದಿನ ಕಾರ್ಯಕ್ರಮಕ್ಕೆ ಬರಬೇಕು ಅಂತ ಮಾಹಿತಿ ನೀಡಿದಾಗ, ಅತ್ಯಂತ ಖುಷಿಯಿಂದ ಹುಬ್ಬಳ್ಳಿಗೆ ಬಂದು ಕಾರ್ಯಕ್ರಮಕ್ಕೆ ಹಾಜರಾಗಿದ್ದು, ಗಂಗೂಬಾಯಿ ಹಾನಗಲ್ ಅವರಿಗೆ ಕೇಕ್ ತಿನ್ನಿಸಿ, ಜನ್ಮದಿನದ ಶುಭಾಷಯ ಹೇಳಿದ್ದರಂತೆ. ಇದೇ ಸಮಯದಲ್ಲಿ ಹುಬ್ಬಳ್ಳಿ ನಗರದ ದೇಶಪಾಂಡೆ ನಗರದಲ್ಲಿರುವ ಗಂಗೂಬಾಯಿ ಹಾನಗಲ್ ನಿವಾಸಕ್ಕೆ ಭೇಟಿ ನೀಡಿದ್ದರು.

ಇನ್ನು ಮನೆಗೆ ಬಂದಿದ್ದ ನಾನಾ ಪಾಟೇಕರ್ ನೆಲದ ಮೇಲೆ ಕೂತರಂತೆ. ಆಗ ಗಂಗೂಬಾಯಿ ಅವರು ನೆಲದ ಮೇಲೆ ಯಾಕೆ ಕೂರ್ತಿ, ಕುರ್ಚಿ ಮೇಲೆ ಕೂರು ಅಂತ ಹೇಳಿದ್ದರಂತೆ. ಆಗ ನಿಮ್ಮ ಸರಿಸಮ ಕೂರುವಷ್ಟ ಅರ್ಹತೆ ನನಗಿಲ್ಲ. ನೀವು ಮೇಲೆ ಇರಿ. ನಾನು ನಿಮ್ಮ ಕೆಳಗೆ ಕೂರುತ್ತೇನೆಂದು ಹೇಳಿ, ನೆಲದ ಮೇಲೆಯೇ ಕೂತಿದ್ದರಂತೆ. ಇನ್ನು ಜನ್ಮದಿನದ ಕಾರ್ಯಕ್ರಮದಲ್ಲಿ ಬಾಗಿಯಾದಾಗ, ಗಂಗೂಬಾಯಿ ಹಾನಗಲ್ ಅವರ ಬಗ್ಗೆ ಅನೇಕ ಮೆಚ್ಚುಗೆಯ ಮಾತುಗಳನ್ನು ಹೇಳಿದ್ದರಂತೆ ನಾನಾ ಪಾಟೇಕರ್. ಇನ್ನು ಗಂಗೂಬಾಯಿ ಹಾನಗಲ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾಗ, ಅನೇಕ ಬಾರಿ ಕುಟುಂಬದವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದರಂತೆ. ಅವರ ಅಗಲಿಕೆ ತಮಗೆ ನೋವು ತಂದಿದೆ ಅಂತಿದ್ದಾರೆ ಗಂಗೂಬಾಯಿ ಹಾನಗಲ್ ಅವರ ಮೊಮ್ಮಗಳಾದ ವೈಷ್ಣವಿ ಹಾನಗಲ್.
ಗಂಗೂಬಾಯಿ ಹಾನಗಲ್​ರ ಮೇಲೆ ನಾನಾಪಾಟೇಕರ್​ಗೆ ಇದ್ದ ಗೌರವದ ಕತೆ ಹೇಳಿದ ಮೊಮ್ಮಗಳು | #TV9D
ಗಂಗೂಬಾಯಿ ಹಾನಗಲ್ ಅವರ ವ್ಯಕ್ತಿತ್ವ ಮತ್ತು ಅವರ ಸಂಗೀತದ ಅಭಿಮಾನಿಯಾಗಿದ್ದ ನಾನಾ ಪಾಟೇಕರ್, ಗಂಗೂಬಾಯಿ ಹಾನಗಲ್ ಅಜ್ಜಿಯನ್ನು ಬಹಳ ಗೌರವದಿಂದ ಕಾಣ್ತಿದ್ದಂತೆ. ಅವರು ಜೀವಂತ ಇದ್ದಾಗ, ಅವರನ್ನು ಬೇಟಿಯಾಗುವದು, ಪೋನ್ ನಲ್ಲಿ ಮಾತನಾಡುತ್ತಿದ್ದ ನಾನಾ ಪಾಟೇಕರ್, ಇದೀಗ ಅವರೇ ಬಾರದ ಲೋಕಕ್ಕೆ ಹೋಗಿದ್ದಾರೆ. ಆದ್ರೆ ಅವರ ಅಭಿನಯ, ಮಾಡಿದ ಕೆಲಸಗಳು,ಅನೇಕರ ಜೊತೆ ಅವರ ಒಡನಾಟ ಮಾತ್ರ ಚಿರಸ್ಥಾಯಿಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:54 pm, Thu, 8 October 26

ಸಂಜಯ್ಯಾ ಚಿಕ್ಕಮಠ

ಸಂಜಯ್ಯಾ ಚಿಕ್ಕಮಠ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 14 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್​ನಿಂದ ಆರಂಭವಾದ ವೃತ್ತಿ ಬದುಕು, ಕಲಬುರಗಿ, ಕೊಪ್ಪಳದಿಂದ ಇದೀಗ ಹುಬ್ಬಳ್ಳಿಗೆ ಬಂದಿದ್ದು, ಉತ್ತರ ಕರ್ನಾಟಕ ಪ್ರಮುಖ ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಕೃಷಿ ನನ್ನಿಷ್ಟ.ಆದ್ರೆ ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
Loading...
Unable to load recommendations.
Follow Us