AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ

ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ

ಮಂಗಳ ರಾಜಗೋಪಾಲ್​
| Edited By: |

Updated on: Oct 08, 2026 | 8:38 PM

Share

ಹಿಂದಿ ಹಾಗೂ ಮರಾಠಿ ಚಿತ್ರರಂಗದ ಖ್ಯಾತ ನಟ ನಾನಾ ಪಾಟೇಕರ್ ಅವರು ಇಂದು (ಅಕ್ಟೋಬರ್ 8) ನಿಧನರಾಗಿದ್ದಾರೆ. ಅವರ ಜೊತೆ ಕನ್ನಡದ ನಟ ಕರಿ ಸುಬ್ಬು ಅವರು ಆಪ್ತ ಒಡನಾಟ ಹೊಂದಿದ್ದರು. ಅವರಿಬ್ಬರ ನಡುವೆ ಸ್ನೇಹ ಬೆಳೆದಿದ್ದು ಹೇಗೆ ಎಂಬುದನ್ನು ಕರಿ ಸುಬ್ಬು ಅವರು ವಿವರಿಸಿದ್ದಾರೆ.

ಹಿಂದಿ ಹಾಗೂ ಮರಾಠಿ ಚಿತ್ರರಂಗದ ಖ್ಯಾತ ನಟ ನಾನಾ ಪಾಟೇಕರ್ ಅವರು ಇಂದು (ಅಕ್ಟೋಬರ್ 8) ನಿಧನರಾಗಿದ್ದಾರೆ. ಅವರ ಜೊತೆ ಕನ್ನಡದ ನಟ ಕರಿ ಸುಬ್ಬು ಅವರು ಆಪ್ತ ಒಡನಾಟ ಹೊಂದಿದ್ದರು. ಅವರಿಬ್ಬರ ನಡುವೆ ಸ್ನೇಹ ಬೆಳೆದಿದ್ದು ಹೇಗೆ ಎಂಬುದನ್ನು ಕರಿ ಸುಬ್ಬು ಅವರು ವಿವರಿಸಿದ್ದಾರೆ. ‘ನಾನಾ ಪಾಟೇಕರ್ ಅವರಂತಹ ನಟರಿಗೆ ಸಾಟಿ ಯಾರೂ ಇರುವುದಿಲ್ಲ. ಅವರ ಜಾಗವನ್ನು ತುಂಬುವವರು ಯಾರೂ ಇಲ್ಲ. ರಂಗಭೂಮಿ ಮತ್ತು ಚಿತ್ರರಂಗದಲ್ಲಿ ನಾನು ತೊಡಗಿಕೊಂಡಿದ್ದೆ. ನಮ್ಮ ಗುರುಗಳಾದ ಟಿ.ಎಸ್. ರಂಗ ಅವರ ಕಾರಣದಿಂದ ನಾನಾ ಪಾಟೇಕರ್ ಅವರ ಪರಿಚಯ ಆಯಿತು’ ಎಂದು ಕರಿ ಸುಬ್ಬು ಅವರು ಹೇಳಿದರು. ಆ ದಿನಗಳನ್ನು ಅವರು ಸ್ಮರಿಸಿಕೊಂಡಿದ್ದಾರೆ. ಅವರು ಮಾತನಾಡಿದ ವಿಡಿಯೋ ಇಲ್ಲಿದೆ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮಂಗಳ ರಾಜಗೋಪಾಲ್​
ಮಂಗಳ ರಾಜಗೋಪಾಲ್​

ಮಂಗಳ ರಾಜಗೋಪಾಲ್​

Read More