ಟ್ರೇಲರ್ ಇಲ್ಲದೆ ಬರ್ತಿದೆ ‘ಪ್ಯಾರಡೈಸ್’ ಸಿನಿಮಾ; ಪ್ರೇಕ್ಷಕರು ಇದನ್ನು ಒಪ್ಪುತ್ತಾರಾ?

ನಟ ನಾನಿ ಅಭಿನಯದ 'ಪ್ಯಾರಡೈಸ್' ಸಿನಿಮಾ ಸೆಪ್ಟೆಂಬರ್ 24ರಂದು ಬಿಡುಗಡೆಯಾಗಲಿದ್ದು, ಚಿತ್ರತಂಡ ಟ್ರೇಲರ್ ಬಿಡುಗಡೆ ಮಾಡದಿರಲು ನಿರ್ಧರಿಸಿದೆ. ಚಿತ್ರೀಕರಣ ಹಾಗೂ ಅಂತಿಮ ಹಂತದ ಕೆಲಸಗಳು ಬಾಕಿ ಇರುವುದೇ ಇದಕ್ಕೆ ಕಾರಣ ಎನ್ನಲಾಗಿದ್ದು, ಟ್ರೇಲರ್ ಇಲ್ಲದೆ ಪ್ರಚಾರಕ್ಕಿಳಿಯುತ್ತಿರುವುದು ಸಿನಿಮಾ ವಲಯದಲ್ಲಿ ದೊಡ್ಡ ಮಟ್ಟದ ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದೆ.

ಟ್ರೇಲರ್ ಇಲ್ಲದೆ ಬರ್ತಿದೆ ‘ಪ್ಯಾರಡೈಸ್’ ಸಿನಿಮಾ; ಪ್ರೇಕ್ಷಕರು ಇದನ್ನು ಒಪ್ಪುತ್ತಾರಾ?
ನಾನಿ ಸಿನಿಮಾ
Edited By:

Updated on: Sep 12, 2026 | 11:43 AM

ಮುಖ್ಯಾಂಶಗಳು

  • 'ಪ್ಯಾರಡೈಸ್' ಟ್ರೇಲರ್ ಬಿಡುಗಡೆ ಕ್ಯಾನ್ಸಲ್
  • ನಟ ನಾನಿ ನೀಡಿದ ಶಾಕಿಂಗ್ ಕಾರಣವೇನು?
  • ಸಮಯದ ಕೊರತೆ ಹಾಗೂ ಕೆಲಸದ ಒತ್ತಡವೇ ಕಾರಣ

ನಟ ನಾನಿ ಹಾಗೂ ನಿರ್ದೇಶಕ ಶ್ರೀಕಾಂತ್ ಒಡೇಲ ಕಾಂಬಿನೇಷನ್‌ನ ಬಹುನಿರೀಕ್ಷಿತ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ‘ಪ್ಯಾರಡೈಸ್’ ಸೆಪ್ಟೆಂಬರ್ 24ರಂದು ವಿಶ್ವದಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ. ಆದರೆ, ಸಿನಿಮಾ ಬಿಡುಗಡೆಗೆ ಕೇವಲ ಎರಡು ವಾರಗಳಷ್ಟೇ ಬಾಕಿ ಇದೆ. ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡದಿರಲು ಚಿತ್ರತಂಡ ನಿರ್ಧರಿಸಿದೆ. ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ವತಃ ನಟ ನಾನಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.

ಸಿನಿಮಾದ ಅಂತಿಮ ಹಂತದ ಕೆಲಸಗಳು ಹಾಗೂ ಕೆಲವು ಪ್ರಮುಖ ಭಾಗಗಳ ಚಿತ್ರೀಕರಣ ಇನ್ನೂ ಬಾಕಿ ಇರುವುದೇ ಟ್ರೇಲರ್ ಬಿಡುಗಡೆ ಮಾಡದಿರಲು ಮುಖ್ಯ ಕಾರಣವಾಗಿದೆ. ಈ ಹಂತದಲ್ಲಿ ಟ್ರೇಲರ್ ಸಿದ್ಧಪಡಿಸಲು ಹೋದರೆ ನಿರ್ದೇಶಕರು ಹಾಗೂ ಸಂಗೀತ ನಿರ್ದೇಶಕರ ಗಮನ ಬೇರೆಡೆಗೆ ಹರಿಯುತ್ತದೆ ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ.
ಈ ಬಗ್ಗೆ ಮಾತನಾಡಿದ ನಾನಿ, ‘ಟ್ರೇಲರ್ ಮತ್ತು ಸಿನಿಮಾ – ಇವೆರಡರಲ್ಲಿ ನಮಗೆ ಸಿನಿಮಾನೇ ಮುಖ್ಯ. ವೈಯಕ್ತಿಕವಾಗಿ ನನಗೆ ಟ್ರೇಲರ್ ಬಿಡುಗಡೆ ಮಾಡಲು ಇಷ್ಟವಿತ್ತು. ಆದರೆ ಅನಿವಾರ್ಯ ಪರಿಸ್ಥಿತಿಯಿಂದಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಇದು ಚಿತ್ರತಂಡದ ಅತಿಯಾದ ಆತ್ಮವಿಶ್ವಾಸವಲ್ಲ. ಸಮಯದ ನಿರ್ವಹಣೆ ಸರಿಯಾಗಿ ಆಗದಿದ್ದಕ್ಕೆ ನಿರ್ದೇಶಕ ಶ್ರೀಕಾಂತ್ ಒಡೇಲ ಕ್ಷಮೆ ಕೇಳಿದ್ದಾರೆ’ ಎಂದು ತಿಳಿಸಿದ್ದಾರೆ.

ಇಂದಿನ ಪ್ರಚಾರದ ದಿನಗಳಲ್ಲಿ ಬೃಹತ್ ಸಿನಿಮಾವೊಂದಕ್ಕೆ ಟ್ರೇಲರ್ ಇಲ್ಲದೆ ಬರುವುದು ದೊಡ್ಡ ಸಾಹಸವೇ ಸರಿ. ಆದರೆ ಟ್ರೇಲರ್ ಇಲ್ಲದಿರುವುದು ಪ್ರೇಕ್ಷಕರಲ್ಲಿ ಸಿನಿಮಾ ಬಗ್ಗೆ ಕ್ಯೂರಿಯಾಸಿಟಿ ಹೆಚ್ಚಿಸಲು ನೆರವಾಗಲಿದೆ. ಹಿಂದೆ ನಾನಿ ಮತ್ತು ಶ್ರೀಕಾಂತ್ ಒಡೇಲ ಜೋಡಿಯ ‘ದಸರಾ’ ಸಿನಿಮಾ ಸೂಪರ್ ಹಿಟ್ ಆಗಿರುವುದರಿಂದ, ಈ ಚಿತ್ರದ ಮೇಲೆಯೂ ಈಗಾಗಲೇ ಭಾರಿ ನಿರೀಕ್ಷೆ ವ್ಯಕ್ತವಾಗಿದೆ.

ಅದೇ ಸಮಯದಲ್ಲಿ ಟ್ರೇಲರ್ ಇಲ್ಲದಿರುವುದು ಚಿತ್ರತಂಡಕ್ಕೆ ಕೆಲವು ಸವಾಲುಗಳನ್ನೂ ತಂದೊಡ್ಡಲಿದೆ. ಪ್ರೇಕ್ಷಕರನ್ನು ಹಾಗೂ ಇತರ ಭಾಷೆಯ ಅಭಿಮಾನಿಗಳನ್ನು ಥಿಯೇಟರ್‌ಗೆ ಸೆಳೆಯಲು ಟ್ರೇಲರ್ ಪ್ರಮುಖ ಅಸ್ತ್ರವಾಗಿತ್ತು. ಹೀಗಾಗಿ ಟ್ರೇಲರ್ ಇಲ್ಲದಿರುವುದರಿಂದ ಮೊದಲ ದಿನದ ಅಡ್ವಾನ್ಸ್ ಬುಕಿಂಗ್ ಮೇಲೆ ಸ್ವಲ್ಪ ಮಟ್ಟಿಗೆ ಪರಿಣಾಮ ಬೀರುವ ಸಾಧ್ಯತೆಯಿದೆ. ಸಿನಿಮಾ ಬಿಡುಗಡೆಯಾದ ಮೊದಲ ಪ್ರದರ್ಶನದ ವಿಮರ್ಶೆಗಳು ಮತ್ತು ಮಾತಿನ ಪ್ರಚಾರವೇ ಈ ಚಿತ್ರದ ಯಶಸ್ಸನ್ನು ನಿರ್ಧರಿಸಲಿವೆ.

ಇದನ್ನೂ ಓದಿ: ‘ಪ್ಯಾರಡೈಸ್’ನಲ್ಲಿ ನಾನಿ ಮಾಸ್ ಅವತಾರ; ರಕ್ತಸಿಕ್ತ ಟೀಸರ್ ರಿಲೀಸ್

ಈ ‘ಪ್ಯಾರಡೈಸ್’ ಸಿನಿಮಾ 1980ರ ದಶಕದ ಸಿಿಕಂದರಾಬಾದ್ ಹಿನ್ನೆಲೆಯಲ್ಲಿ ನಡೆಯುವ ಕಥೆಯಾಗಿದೆ. ಹಿಂದುಳಿದ ಸಮುದಾಯದಲ್ಲಿ ಜನಿಸಿದ ‘ಜಾಡಲ್’ ಎಂಬ ಯುವಕ ಸಾಮಾಜಿಕ ಅನ್ಯಾಯದ ವಿರುದ್ಧ ಹೋರಾಡುವ ಕಥಾಹಂದರ ಇಲ್ಲಿದೆ. ಹೊರನೋಟಕ್ಕೆ ಭಾರಿ ಹಿಂಸಾತ್ಮಕ ಆಕ್ಷನ್ ಸಿನಿಮಾದಂತೆ ಕಂಡರೂ, ಇದು ತಾಯಿ-ಮಗನ ಸುಂದರ ಬಾಂಧವ್ಯದ ಕಥೆಯನ್ನು ಹೊಂದಿದೆ. ನಾನಿ ತಾಯಿಯ ಪಾತ್ರದಲ್ಲಿ ಸೋನಾಲಿ ಕುಲಕರ್ಣಿ ನಟಿಸಿದ್ದು, ಕಾಯಾಡು ಲೋಹರ್, ಮೋಹನ್ ಬಾಬು ಮತ್ತು ಸಂಪೂರ್ಣೇಶ್ ಬಾಬು ಪ್ರಮುಖ ಪಾತ್ರಗಳಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

TV9 Web

TV9 Kannada

Read More
Loading...
Unable to load recommendations.
Follow Us