ತೆಲುಗು ಚಿತ್ರರಂಗದ ನಟ ನರೇಶ್ (Naresh) ಹಾಗೂ ಪವಿತ್ರಾ ಲೋಕೇಶ್ (Pavitra Lokesh) ಸಂಬಂಧ ಕಳೆದ ಕೆಲ ತಿಂಗಳಿನಿಂದಲೂ ಚರ್ಚೆಯಲ್ಲಿತ್ತು. ನರೇಶ್ರ ಮೂರನೇ ಪತ್ನಿ ರಮ್ಯಾ ರಘುಪತಿಯ ವಿರೋಧ, ಪ್ರತಿಭಟನೆಗಳಿಂದಾಗಿ ಇವರಿಬ್ಬರ ಸಂಬಂಧದ ಸುದ್ದಿ ವಿವಾದಕ್ಕೆ ಸಿಲುಕಿತ್ತು. ಕೊನೆಗೂ ನರೇಶ್ ಹಾಗೂ ಪವಿತ್ರಾ ಮಾರ್ಚ್ 10 ರಂದು ವಿವಾಹವಾಗಿದ್ದು ಅದರ ಮರುದಿನವೇ ಹನಿಮೂನ್ಗೆಂದು ದುಬೈಗೆ (Dubai) ಹಾರಿದ್ದಾರೆ.
ನರೇಶ್ ಹಾಗೂ ಪವಿತ್ರಾ ಪ್ರಸ್ತುತ ದುಬೈನಲ್ಲಿದ್ದು ತಮ್ಮ ಹನಿಮೂನ್ (Honeymoon) ಎಂಜಾಯ್ ಮಾಡುತ್ತಿದ್ದಾರೆ. ನರೇಶ್ ಹಾಗೂ ಪವಿತ್ರಾ ಕೈ-ಕೈ ಹಿಡಿದುಕೊಂಡು ದುಬೈನ ಬೀದಿಗಳಲ್ಲಿ, ಮರುಭೂಮಿಯಲ್ಲಿ ಓಡಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಮಾರ್ಚ್ 10 ರಂದು ತಮ್ಮ ವಿವಾಹದ ವಿಡಿಯೋ ತುಣುಕು ಹಂಚಿಕೊಂಡಿದ್ದ ನರೇಶ್, ‘ಹೊಸ ಪಯಣ. ಶಾಂತಿ ಮತ್ತು ನೆಮ್ಮದಿಯ ಜೀವನಕ್ಕೆ ನಿಮ್ಮ ಆಶೀರ್ವಾದ ಇರಲಿ. ಒಂದು ಪವಿತ್ರ ಬಂಧ. ಎರಡು ಮನಸ್ಸುಗಳು, ಏಳು ಹೆಜ್ಜೆಗಳು, ನಿಮ್ಮ ಆಶೀರ್ವಾದವನ್ನು ಕೋರಿ. ನಿಮ್ಮ ಪವಿತ್ರಾ ನರೇಶ್’ ಎಂದು ಟ್ವೀಟ್ ಮಾಡಿದ್ದರು.
62 ವರ್ಷದ ನಟ ನರೇಶ್ಗೆ ಇದು ನಾಲ್ಕನೇ ಮದುವೆಯಾದರೆ ಪವಿತ್ರಾ ಲೋಕೇಶ್ಗೆ ಇದು ಮೂರನೇಯ ಮದುವೆ. ನರೇಶ್, ತಮ್ಮ ಮೂರನೇ ಪತ್ನಿ ರಮ್ಯಾ ರಘುಪತಿಗೆ ವಿಚ್ಚೇದನ ನೀಡುವ ಮೊದಲೇ ಪವಿತ್ರಾ ಲೋಕೇಶ್ ಅವರನ್ನು ವಿವಾಹವಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ನರೇಶ್-ಪವಿತ್ರಾರ ಮದುವೆ ಬಗ್ಗೆ ರಮ್ಯಾ ರಘುಪತಿ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.
ನರೇಶ್ ಹಾಗೂ ಪವಿತ್ರಾ ಲೋಕೇಶ್ ಹತ್ತಿರವಾಗುತ್ತಲೇ ನರೇಶ್ರ ಮೂರನೇ ಪತ್ನಿ ರಮ್ಯಾ ರಘಪತಿ ಮಾಧ್ಯಮಗಳ ಮುಂದೆ ಬಂದು ತಮಗೆ ನರೇಶ್ ಅನ್ಯಾಯ ಮಾಡಿದ್ದಾರೆಂದು ಅವಲತ್ತುಕೊಂಡಿದ್ದರು. ಬಳಿಕ ನರೇಶ್ ಸಹ ಬೆಂಗಳೂರಿಗೆ ಬಂದು ಪತ್ರಿಕಾಗೋಷ್ಠಿ ನಡೆಸಿ ರಮ್ಯಾ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಬಳಿಕ ನರೇಶ್ ಹಾಗೂ ಪವಿತ್ರ ಉಳಿದುಕೊಂಡಿದ್ದ ಮೈಸೂರಿನ ಹೋಟೆಲ್ಗೆ ತೆರಳಿ ರಮ್ಯಾ ರಘುಪತಿ ನೇರವಾಗಿ ನರೇಶ್ ಅನ್ನು ಅಡ್ಡಹಾಕಿ ಬೈಗುಳಗಳ ಸುರಿಮಳೆ ಮಾಡಿದ್ದರಲ್ಲದೆ ಚಪ್ಪಲಿ ಪ್ರದರ್ಶಿಸಿ ಹೈಡ್ರಾಮಾ ಸೃಷ್ಟಿಸಿದ್ದರು.
ಎಲ್ಲ ವಿವಾದಗಳ ಬಳಿಕ ಇದೀಗ ನರೇಶ್ ಹಾಗೂ ಪವಿತ್ರಾ ಲೋಕೇಶ್ ವಿವಾಹವಾಗಿದ್ದಾರೆ. ಇದೀಗ ದುಬೈಗೆ ತೆರಳಿ ಹನಿಮೂನ್ ಎಂಜಾಯ್ ಮಾಡುತ್ತಿದ್ದಾರೆ.