ಕೊವಿಡ್​ ಲಸಿಕೆ ವಿಚಾರದಲ್ಲಿ ಗೋಲ್​ಮಾಲ್​ ಮಾಡಿದ್ರಾ ನಯನತಾರಾ? ಫೋಟೋ ತೆರೆದಿಟ್ಟ ಅಸಲಿ ಕಥೆ ಇಲ್ಲಿದೆ

Covid Vaccine: ನಟಿ ನಯನತಾರಾ ಅವರು ಕೊವಿಡ್​ ಲಸಿಕೆ ಪಡೆದ ಬಳಿಕ ಆ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಆ ಫೋಟೋ ಒಂದು ದೊಡ್ಡ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ನಯನತಾರಾಗೆ ಲಸಿಕೆ ಚುಚ್ಚುತ್ತಿರುವ ನರ್ಸ್​ ಕೈಯಲ್ಲಿ ಸಿರೆಂಜ್​ ಇಲ್ಲ ಎಂದು ನೆಟ್ಟಿಗರು ಅನುಮಾನ ಪಟ್ಟಿದ್ದಾರೆ.

ಕೊವಿಡ್​ ಲಸಿಕೆ ವಿಚಾರದಲ್ಲಿ ಗೋಲ್​ಮಾಲ್​ ಮಾಡಿದ್ರಾ ನಯನತಾರಾ? ಫೋಟೋ ತೆರೆದಿಟ್ಟ ಅಸಲಿ ಕಥೆ ಇಲ್ಲಿದೆ
ಕೊವಿಡ್ ಲಸಿಕೆ ಪಡೆದ ನಯನತಾರಾ

Updated on: May 20, 2021 | 8:19 AM

ದೇಶಾದ್ಯಂತ ಕೊರೊನಾ ವೈರಸ್​ ಎರಡನೇ ಅಲೆ ಮಿತಿ ಮೀರಿ ಹಬ್ಬಿದೆ. ಜನಸಾಮಾನ್ಯರು ತುಂಬ ಕಷ್ಟಪಡುತ್ತಿದ್ದಾರೆ. ಸರಿಯಾದ ಸಮಯಕ್ಕೆ ಬೆಡ್​, ಆಕ್ಸಿಜನ್​ ಸಿಲಿಂಡರ್​ ಸಿಗದೇ ಸಾವಿರಾರು ಜನರು ಅಸುನೀಗುತ್ತಿದ್ದಾರೆ. ಸೆಲೆಬ್ರಿಟಿಗಳ ವಲಯದಲ್ಲೂ ಅನೇಕರು ಈ ಮಹಾಮಾರಿಗೆ ಬಲಿ ಆಗಿದ್ದಾರೆ. ಇಂಥ ಸಂದರ್ಭದಲ್ಲಿ ಎಲ್ಲರೂ ವ್ಯಾಕ್ಸಿನ್​ಗಾಗಿ ಮುಗಿಬೀಳುತ್ತಿದ್ದಾರೆ. ಕೊವಿಡ್​ನಿಂದ ರಕ್ಷಿಸಿಕೊಳ್ಳಲು ಲಸಿಕೆ ಪಡೆಯುವುದು ಸೂಕ್ತ ಮಾರ್ಗ ಎಂಬುದು ಎಲ್ಲರಿಗೂ ಅರ್ಥವಾಗಿದೆ. ಸೆಲೆಬ್ರಿಟಿಗಳು ಕೂಡ ಹರಿಬರಿಯಲ್ಲಿ ಲಸಿಕೆ ಪಡೆಯುತ್ತಿದ್ದಾರೆ. ಬಹುಭಾಷಾ ನಟಿ ನಯನತಾರಾ ಕೂಡ ಇತ್ತೀಚೆಗೆ ಲಸಿಕೆ ಪಡೆದುಕೊಂಡರು. ಆದರೆ ಅದು ಸೋಶಿಯಲ್​ ಮೀಡಿಯಾದಲ್ಲಿ ವಿವಾದ ಹುಟ್ಟುಹಾಕಿದೆ.

ಲಸಿಕೆ ಪಡೆದುಕೊಂಡ ಬಹುತೇಕರು ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಫೋಟೋಗಳನ್ನು ಹಾಕಿ ವಿಷಯ ಹಂಚಿಕೊಳ್ಳುತ್ತಿದ್ದಾರೆ. ಇತರರಿಗೂ ಲಸಿಕೆ ಪಡೆಯುವಂತೆ ಮನವೊಲಿಸುತ್ತಿದ್ದಾರೆ. ನಯನತಾರಾ ಕೂಡ ಅದನ್ನೇ ಮಾಡಿದರು. ಆದರೆ ಅವರು ಹಂಚಿಕೊಂಡ ಫೋಟೋ ಒಂದು ದೊಡ್ಡ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ನಯನತಾರಾಗೆ ಲಸಿಕೆ ಚುಚ್ಚುತ್ತಿರುವ ನರ್ಸ್​ ಕೈಯಲ್ಲಿ ಸಿರೆಂಜ್​ ಇಲ್ಲ ಎಂದು ನೆಟ್ಟಿಗರು ಅನುಮಾನ ಪಟ್ಟಿದ್ದಾರೆ.

ಲಸಿಕೆ ಪಡೆದುಕೊಂಡೆ ಎಂದು ನಯನತಾರ ನಟಿಸಿದ್ದಾರೆ. ನರ್ಸ್​ ಕೈಯಲ್ಲಿ ಸಿರೆಂಜ್​ ಇಲ್ಲ ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ. ನಯನತಾರಾ ಜೊತೆ ಅವರ ಬಾಯ್​ಫ್ರೆಂಡ್​ ವಿಘ್ನೇಶ್​ ಶಿವನ್​ ಕೂಡ ಲಸಿಕೆ ಪಡೆದುಕೊಂಡಿದ್ದಾರೆ. ಅವರ ಫೋಟೋದಲ್ಲಿ ಸ್ಪಷ್ಟವಾಗಿ ಕಾಣುತ್ತಿರುವ ಸಿರೆಂಜ್​, ನಯನತಾರಾ ಫೋಟೋದಲ್ಲಿ ಕಾಣುತ್ತಿಲ್ಲ. ಹಾಗಾಗಿ ಈ ಬಗ್ಗೆ ಎಲ್ಲರಿಗೂ ಅನುಮಾನ ಮೂಡಿದೆ. ಆದರೆ ನಯನತಾರಾ ಅಭಿಮಾನಿಗಳು ಅವರನ್ನು ಬಿಟ್ಟುಕೊಟ್ಟಿಲ್ಲ.

ಆ ಫೋಟೋವನ್ನು ಜೂಮ್​ ಮಾಡಿ ನೋಡಿದಾಗ ಅದರಲ್ಲಿ ಸೂಜಿ ಕಾಣುತ್ತಿದೆ. ಸಿರೆಂಜ್​ ಚಿಕ್ಕದಾಗಿರುವುದರಿಂದ ಅದು ನರ್ಸ್​ ಕೈಯೊಳಗೆ ಅವಿತುಕೊಂಡಂತಿದೆ. ಹಾಗಾಗಿ ನಯನತಾರಾ ಹಂಚಿಕೊಂಡ ಫೋಟೋದಲ್ಲಿ ಸಿರೆಂಜ್​ ಕಾಣಿಸಿಲ್ಲ. ಅವರ ಬಾಯ್​ಫ್ರೆಂಡ್​ ಫೋಟೋವನ್ನು ಇನ್ನೊಂದು ಬದಿಯಿಂದ ಕ್ಲಿಕ್ಕಿಸಿರುವ ಕಾರಣ ಅದರಲ್ಲಿ ಸಿರೆಂಜ್​ ಸ್ಪಷ್ಟವಾಗಿ ಕಾಣುತ್ತಿದೆ ಎಂಬ ವಾದವನ್ನು ನಯನತಾರ ಅಭಿಮಾನಿಗಳು ಮುಂದಿಟ್ಟಿದ್ದಾರೆ. ಅಲ್ಲಿಗೆ ಎಲ್ಲ ಅನುಮಾನಗಳಿಗೆ ತೆರೆ ಎಳೆದಂತಾಗಿದೆ.

ಇದನ್ನೂ ಓದಿ:

ಅಭಿಮಾನಿಗಳಿಗೆ ಗುಟ್ಟಾಗಿ ಸಿಹಿ ಸುದ್ದಿ ನೀಡಿದ ನಯನತಾರಾ-ವಿಘ್ನೇಶ್​ ಶಿವನ್​!

ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಜೋಡಿ.. ವೈವಾಹಿಕ ಜೀವನಕ್ಕೆ ಕಾಲಿಡಲು ರೆಡಿಯಾದ ನಯನತಾರಾ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us