Amazon Prime: ಅಮೆಜಾನ್ ಪ್ರೈಮ್​ನಿಂದ ಭರ್ಜರಿ ಆಫರ್; ಶೇ 50ರಷ್ಟು ರಿಯಾಯಿತಿ ಜತೆ ಸಿಗುತ್ತದೆ ಸಬ್​ಸ್ಕ್ರಿಪ್ಷನ್

|

Updated on: May 31, 2021 | 8:59 PM

ಅಮೆಜಾನ್ ಪ್ರೈಮ್​ನಿಂದ ಶೇ 50ರಷ್ಟು ರಿಯಾಯಿತಿ ಸಿಗುವ ಆಫರ್ ಘೋಷಣೆ ಆಗಿದೆ. ಯಾರಿಗೆ ಸಿಗಲಿದೆ, ಷರತ್ತುಗಳೇನು ಇತ್ಯಾದಿ ಮಾಹಿತಿ ಈ ಲೇಖನದಲ್ಲಿದೆ.

Amazon Prime: ಅಮೆಜಾನ್ ಪ್ರೈಮ್​ನಿಂದ ಭರ್ಜರಿ ಆಫರ್; ಶೇ 50ರಷ್ಟು ರಿಯಾಯಿತಿ ಜತೆ ಸಿಗುತ್ತದೆ ಸಬ್​ಸ್ಕ್ರಿಪ್ಷನ್
ಅಮೇಜಾನ್​ ಪ್ರೈಮ್​
Follow us on

18ರಿಂದ 24 ವರ್ಷದೊಳಗಿನ ಯುವ ಜನರಿಗಾಗಿ ಅಮೆಜಾನ್ ಪ್ರೈಮ್​ನಿಂದ ಆಫರ್ ಪರಿಚಯಿಸಲಾಗಿದೆ. ಅರ್ಹ ಚಂದಾದಾರರಿಗೆ 3 ತಿಂಗಳು ಮತ್ತು 1 ವರ್ಷದ ಸಬ್​ಸ್ಕ್ರಿಪ್ಷನ್​ ಮೇಲೆ ಶೇ 50ರಷ್ಟು ರಿಯಾಯಿತಿ ನೀಡುತ್ತಿದೆ. ಇನ್ನೊಂದು ವಿಚಾರ ಏನೆಂದರೆ, ಈ ಆಫರ್ ಇರುವುದು ಆಂಡ್ರಾಯಿಡ್ ಆ್ಯಪ್ ಬಳಸುವವರಿಗೆ ಹಾಗೂ ಇತರ ಆಪರೇಟಿಂಗ್ ಸಿಸ್ಟಮ್​ನ ಮೊಬೈಲ್ ಬ್ರೌಸರ್ ವರ್ಷನ್​ಗೆ. ಐಒಎಸ್​ಗೆ ಮೊಬೈಲ್​ ಆ್ಯಪ್ ಮೂಲಕವಾಗಿ ಈ ಆಫರ್ ಪಡೆಯುವುದಕ್ಕೆ ಸಾಧ್ಯವಿಲ್ಲ. ಆದರೆ ಐಫೋನ್ ಬಳಕೆದಾರರು ಮೊಬೈಲ್ ಬ್ರೌಸರ್ ಮೂಲ ಅಮೆಜಾನ್ ಆ್ಯಪ್​ಗೆ ಲಾಗ್​ ಇನ್ ಆಗಿ ರಿಡೀಮ್ ಮಾಡಿಕೊಳ್ಳಬಹುದು. ಒಂದು ವರ್ಷಕ್ಕೋ ಅಥವಾ 3 ತಿಂಗಳ ಅವಧಿಗೋ ಅರ್ಹ ಚಂದಾದಾರರು ಆಯ್ಕೆ ಮಾಡಿಕೊಂಡ ಮೇಲೆ ಒಂದೇ ಸಲಕ್ಕೆ ಪೂರ್ತಿ ಮೊತ್ತವನ್ನು ಕಟ್ಟಬೇಕು. ಅದು ಕ್ರಮವಾಗಿ 999 ರೂ. ಹಾಗೂ 329 ರೂ. ಆಗುತ್ತದೆ.

ಆ ನಂತರ ಅರ್ಹ ಬಳಕೆದಾರರಿಗೆ ಅಮೆಜಾನ್​ನಿಂದ ರೂ. 500 ಅಥವಾ ರೂ. 165 ಕ್ಯಾಶ್​ಬ್ಯಾಕ್ ಸಿಗುತ್ತದೆ; ಅದು ಕೂಡ ಅವರು ಯಾವ ಪ್ಲಾನ್ ಆರಿಸಿಕೊಂಡಿದ್ದಾರೆ ಎಂಬುದರ ಆಧಾರದಲ್ಲಿ. ಈ ಆಫರ್​ ಅಮೆಜಾನ್​ನ ಹೊಸ ಬಳಕೆದಾರರಿಗೆ ಅನ್ವಯಿಸುತ್ತದೆ. ಈಗ ಅರ್ಹ ವಯಸ್ಸಿನ ಕೆಟಗಿರಿಯೊಳಗೆ ಇರುವ ಸದ್ಯದ ಬಳಕೆದಾರರು ಈ ಆಫರ್​ನ ಪಡೆಯುವುದು ಹೇಗೆ ಎಂಬುದರ ವಿವರ ಇಲ್ಲಿದೆ.

-ಮೊದಲಿಗೆ ಅಮೆಜಾನ್ ಪ್ರೈಮ್ ಆ್ಯಪ್ ಡೌನ್​ಲೋಡ್​ ಮಾಡಿ ಹಾಗೂ ಮಾಹಿತಿಯೊಂದಿಗೆ ಸೈನ್ ಅಪ್​ ಮಾಡಿ.

– ವಯಸ್ಸು ದೃಢೀಕರಣಕ್ಕೆ ಐ.ಡಿ. ಪ್ರೂಫ್- ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಮತ್ತು ಒಂದು ಸೆಲ್ಫಿ.

– ಬಳಕೆದಾರರು ಎಲೆಕ್ಟ್ರಾನಿಕ್ ವಿಧಾನದಲ್ಲಿ ಪಾವತಿ ಮಾಡಬೇಕು- ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ಅಮೆಜಾನ್ ಪೇ ಬ್ಯಾಲೆನ್ಸ್​ನೊಂದಿಗೆ.

ಒಂದು ಸಲ ಖಾತ್ರಿಯಾದ ಮೇಲೆ ಮುಂದಿನ 48 ಗಂಟೆಯೊಳಗಾಗಿ ರೂ. 500 ಅಥವಾ ರೂ. 165 ಗ್ರಾಹಕರ ಅಮೆಜಾನ್ ಪೇ ಬಾಕಿ ಖಾತೆಗೆ ಜಮೆ ಆಗುತ್ತದೆ. ಆರ್​ಬಿಐನ ಹೊಸ ಮಾರ್ಗದರ್ಶಿ ಸೂತ್ರದ ಪ್ರಕಾರ, ಒಂದು ತಿಂಗಳ ಉಚಿತ ಸಬ್​ಸ್ಕ್ರಿಪ್ಷನ್​ ನೀಡುವುದನ್ನು ಅಮೆಜಾನ್ ನಿಲ್ಲಿಸಿದೆ. ಈಗೇನಿದ್ದರೂ 3 ತಿಂಗಳ ಅವಧಿಗೆ ರೂ. 329 ಹಾಗೂ ಒಂದು ವರ್ಷದ ಅವಧಿಗೆ ರೂ. 999ರ ಪ್ಲಾನ್ ಆರಿಸಿಕೊಳ್ಳಬೇಕು. ಏರ್​ಟೆಲ್ ಬಳಕೆದಾರರಿಗೆ 349 ರೂಪಾಯಿಯ ಪ್ರೀಪೇಯ್ಡ್ ಪ್ಲಾನ್​ನೊಂದಿಗೆ ಉಚಿತವಾಗಿ ಒಂದು ತಿಂಗಳ ಅವಧಿಗೆ ಪ್ರೈಮ್ ಸದಸ್ಯತ್ವ ದೊರೆಯುತ್ತದೆ. ಈ ಪ್ಲಾನ್​ನಲ್ಲಿ ದಿನಕ್ಕೆ 2GB ಡೇಟಾ, 28 ದಿನಗಳ ವ್ಯಾಲಿಡಿಟಿ, ಅನಿಯಮಿತ ಕಾಲಿಂಗ್ ಸಿಗುತ್ತದೆ. ಇದರ ಜತೆಗೆ ಏರ್​ಟೆಲ್ ಬಳಕೆದಾರರಿಗೆ ಪ್ರೈಮ್ ವಿಡಿಯೋ ಮೊಬೈಲ್ ಎಡಿಷನ್ ಬಳಸಲು ಅವಕಾಶ ಸಿಗುತ್ತದೆ.

ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಎಡಿಷನ್ ಸಂಪರ್ಕಕ್ಕೆ ಈ ಹಂತಗಳನ್ನು ಅನುಸರಿಸಬೇಕು:
– ಏರ್​ಟೆಲ್ ಥ್ಯಾಂಕ್ಸ್ ಆ್ಯಪ್ ತೆರೆಯಬೇಕು.

– ಎಕ್ಸ್​ಪ್ಲೋರ್ ಫೀಡ್ ಎಂಬುದನ್ನು ಹುಡುಕಲು ಸ್ಕ್ರಾಲ್ ಡೌನ್ ಮಾಡಿ.

– ಪ್ರೈಮ್ ವಿಡಿಯೋ ಮೊಬೈಲ್ ಎಡಿಷನ್ ಫ್ರೀ ಟ್ರಯಲ್ ಕಾರ್ಡ್ ಎಂಬುದು ಕಾಣಿಸುವ ತನಕ ಸ್ಕ್ರಾಲ್ ಮಾಡುತ್ತಿರಿ.

– ಕ್ಲೇಮ್ ನೌ- ಆ್ಯಕ್ಟಿವೇಟ್- ಆ್ಯಕ್ಟಿವೇಟ್ ನೌ ಆರಿಸಿ.

– ಟ್ರಯಲ್ ಆಫರ್ ಆ್ಯಕ್ಟಿವೇಷನ್ ಖಾತ್ರಿ ಮಾಡಿ.

– ಸಬ್​ಸ್ಕ್ರಿಪ್ಷನ್ ಸಂಪರ್ಕಕ್ಕಾಗಿ ಪ್ರೈಮ್ ವಿಡಿಯೋ ಆ್ಯಪ್ ಡೌನ್​ಲೋಡ್ ಮಾಡಿ.

ಇದನ್ನೂ ಓದಿ:  ಡಿಜಿಟಲ್, ಒಟಿಟಿ ವೇದಿಕೆಗಳ ನಿಯಂತ್ರಣಕ್ಕೆ ಕೇಂದ್ರದ ಕ್ರಮ: ಸ್ವಾತಂತ್ರ್ಯ ಜವಾಬ್ದಾರಿಯೊಂದಿಗೆ ಇರಬೇಕು ಎಂದ ಸಚಿವ ಪ್ರಕಾಶ್​ ಜಾವಡೇಕರ್​

(OTT platform Amazon announces 50% discount on subscription of 18 to 24 age group youth. Here is the complete details of the offer)