ರೊಮ್ಯಾಂಟಿಕ್ ಕಾಮಿಡಿ ‘ಬೆತ್ಲಹೆಮ್ ಕುಟುಂಬ ಯುನಿಟ್’ ಈಗ ಒಟಿಟಿಗೆ; ಕನ್ನಡದಲ್ಲೂ ಲಭ್ಯ

ಮಲಯಾಳಂ ಚಿತ್ರರಂಗದ ಸಾರ್ವಕಾಲಿಕ ಹಿಟ್ 'ಬೆತ್ಲಹೆಮ್ ಕುಟುಂಬ ಯುನಿಟ್' ಸಿನಿಮಾ ಈಗ ಒಟಿಟಿಗೆ ಕಾಲಿಡಲು ಸಜ್ಜಾಗಿದೆ. ನಿವಿನ್ ಪೌಳಿ ಹಾಗೂ ಮಮಿತಾ ಬೈಜು ನಟನೆಯ ಈ ಸೂಪರ್ ಹಿಟ್ ಚಿತ್ರವು ಕನ್ನಡ ಭಾಷೆಯಲ್ಲೂ ಲಭ್ಯವಿರಲಿದ್ದು, ಚಿತ್ರಪ್ರೇಮಿಗಳು ತಮ್ಮ ನೆಚ್ಚಿನ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಈ ಸಿನಿಮಾವನ್ನು ವೀಕ್ಷಿಸಬಹುದಾಗಿದೆ.

ರೊಮ್ಯಾಂಟಿಕ್ ಕಾಮಿಡಿ ಬೆತ್ಲಹೆಮ್ ಕುಟುಂಬ ಯುನಿಟ್ ಈಗ ಒಟಿಟಿಗೆ; ಕನ್ನಡದಲ್ಲೂ ಲಭ್ಯ
ನಿವೀನ್-ಮಮಿತಾ

Updated on: Sep 29, 2026 | 10:32 AM

ಮುಖ್ಯಾಂಶಗಳು

  • ಒಟಿಟಿಗೆ ಲಗ್ಗೆ ಇಡಲು ಸಜ್ಜಾದ 'ಬೆತ್ಲಹೆಮ್ ಕುಟುಂಬ ಯುನಿಟ್'
  • ಸಾರ್ವಕಾಲಿಕ ದಾಖಲೆ ಬರೆದ ನಿವಿನ್ ಸಿನಿಮಾ
  • ಬಾಕ್ಸ್ ಆಫೀಸ್‌ನಲ್ಲಿ ಸೃಷ್ಟಿಸಿತ್ತು ಹೊಸ ಇತಿಹಾಸ

ಮಲಯಾಳಂ ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ‘ಬೆತ್ಲಹೆಮ್ ಕುಟುಂಬ ಯುನಿಟ್‘ ಸಿನಿಮಾ ಈಗ ಒಟಿಟಿಗೆ ಬರಲು ಸಜ್ಜಾಗಿದೆ. ನಿವಿನ್ ಪೌಳಿ ಹಾಗೂ ಮಮಿತಾ ಬೈಜು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ ಚಿತ್ರಮಂದಿರಗಳಲ್ಲಿ ಪ್ರಚಂಡ ಯಶಸ್ಸು ಕಂಡಿತ್ತು. ಈಗ ಸಿನಿಮಾ ಜಿಯೋ ಹಾಟ್​ಸ್ಟಾರ್​ಗೆ  ಬರಲಿದೆ. ಮಲಯಾಳಂ ಜೊತೆ ಕನ್ನಡ ಭಾಷೆಯಲ್ಲೂ ಈ ಸೂಪರ್ ಹಿಟ್ ಸಿನಿಮಾ ವೀಕ್ಷಣೆಗೆ ಲಭ್ಯವಾಗುತ್ತಿರುವುದು ವಿಶೇಷ.

ಈ ವರ್ಷದ ಆಗಸ್ಟ್ ತಿಂಗಳಲ್ಲಿ ತೆರೆಕಂಡ ‘ಬೆತ್ಲಹೆಮ್ ಕುಟುಂಬ ಯುನಿಟ್’ ರೊಮ್ಯಾಂಟಿಕ್ ಕಾಮಿಡಿ ಚಿತ್ರಕ್ಕೆ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಗಿರೀಶ್ ಎಡಿ ನಿರ್ದೇಶನದ ಈ ಸಿನಿಮಾ ಮಲಯಾಳಂ ಚಿತ್ರರಂಗದ ಹಲವು ಪ್ರಮುಖ ದಾಖಲೆಗಳನ್ನು ಪುಡಿಪುಡಿ ಮಾಡಿದೆ. ‘ಲೋಕಃ: ಚಾಪ್ಟರ್ 1 ಚಂದ್ರ’ ಮುಂತಾದ ಬ್ಲಾಕ್‌ಬಸ್ಟರ್ ಸಿನಿಮಾಗಳ ದಾಖಲೆಯನ್ನು ಮುರಿದು ಸಾರ್ವಕಾಲಿಕ ದಾಖಲೆ ಬರೆದಿದೆ.

ಭಾವನಾ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ದಿಲೀಶ್ ಪೋತನ್, ಫಹಾದ್ ಫಾಸಿಲ್ ಮತ್ತು ಶ್ಯಾಮ್ ಪುಷ್ಕರನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಗಿರೀಶ್ ಎಡಿ ಮತ್ತು ಕಿರಣ್ ಜೋಶೀ ಜೊತೆಯಾಗಿ ಈ ಸಿನಿಮಾಗೆ ಕಥೆ ಬರೆದಿದ್ದಾರೆ. ಪ್ರೇಮ, ಕುಟುಂಬದ ಭಾವನೆಗಳು ಹಾಗೂ ನೆನಪುಗಳ ಸಮ್ಮಿಶ್ರಣವಾಗಿ ಈ ಸಿನಿಮಾ ಮೂಡಿಬಂದಿದೆ.

ಚಿತ್ರದ ಕಥೆಯಲ್ಲಿ ಆಶ್ಲಿ (ಮಮಿತಾ ಬೈಜು) ಎಂಬ ಹುಡುಗಿ ತನ್ನ ಕುಟುಂಬದೊಂದಿಗೆ ಮುಂಡಕಾಯಂನಿಂದ ಕರುಕುಟ್ಟಿಗೆ ಸ್ಥಳಾಂತರಗೊಳ್ಳುತ್ತಾಳೆ. ಅಲ್ಲಿ ತನಗಿಂತ 12-13 ವರ್ಷ ಹಿರಿಯನಾದ ನೆರೆಯ ಜಸ್ಟಿನ್ (ನಿವಿನ್ ಪೌಳಿ) ಎಂಬುವವನ ಪರಿಚಯವಾಗುತ್ತದೆ. ಅವರಿಬ್ಬರ ನಡುವಿನ ಬಂಧ, ಪ್ರೀತಿ ಮತ್ತು ಹೊಸ ಜೀವನದ ಪಯಣವೇ ಈ ಚಿತ್ರದ ಮುಖ್ಯ ಕಥಾವಸ್ತು.

ಇದನ್ನೂ ಓದಿ: ಬೆತ್ಲಹೆಮ್ ಕುಟುಂಬ ಯೂನಿಟ್ ಹೊಸ ದಾಖಲೆ; ಮಲಯಾಳಂ ಸಿನಿಮಾ ರಂಗದಲ್ಲೇ ಅತಿ ಹೆಚ್ಚು ಗಳಿಸಿದ ಸಿನಿಮಾ

ಚಿತ್ರಮಂದಿರಗಳಲ್ಲಿ ರಿಲೀಸ್ ಆದಾಗ ಇದು ಮಲಯಾಳಂನಲ್ಲಿ ಮಾತ್ರ ಇತ್ತು. ಆ ಬಳಿಕ ತೆಲುಗಿನಲ್ಲಿ ಚಿತ್ರ ತೆರೆಗೆ ಬಂತು. ಈಗ ಒಟಿಟಿಯಲ್ಲಿ ಕನ್ನಡ ಆಡಿಯೋ ಜೊತೆ ಸಿನಿಮಾ ವೀಕ್ಷಿಸಬಹುದಾಗಿದೆ. ಈ ಮೂಲಕ ಚಿತ್ರವನ್ನು ಸಂಪೂರ್ಣವಾಗಿ ಎಂಜಾಯ್ ಮಾಡಬಹುದಾಗಿದೆ. ಈ ಚಿತ್ರಕ್ಕೆ ಒಟಿಟಿಯಲ್ಲಿ ಯಾವ ರೀತಿ ಪ್ರತಿಕ್ರಿಯೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:29 am, Tue, 29 September 26

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us