ಒಟಿಟಿಗೆ ಬರುತ್ತಿದೆ ‘ಟಾಕ್ಸಿಕ್’ಗೆ ಠಕ್ಕರ್ ಕೊಟ್ಟ ‘ಇರುಮುಡಿ’

ರವಿತೇಜ ನಟನೆಯ ‘ಇರುಮುಡಿ’ ಸಿನಿಮಾ ‘ಟಾಕ್ಸಿಕ್’ ಎದುರು ತೆಲುಗು ರಾಜ್ಯಗಳಲ್ಲಿ ಭರ್ಜರಿ ಪ್ರದರ್ಶನ ಕಂಡಿತ್ತು. ‘ಟಾಕ್ಸಿಕ್’ಗೆ ಠಕ್ಕರ್ ನೀಡಿತ್ತು. ಸರಳವಾದ ಕತೆ, ಸರಳವಾದ ಬಜೆಟ್ ಹೊಂದಿದ್ದ ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಮೊತ್ತ ಗಳಿಕೆ ಮಾಡಿದೆ. ಇದೀಗ ಈ ಸಿನಿಮಾ ಒಟಿಟಿಗೆ ಬರುತ್ತಿದೆ. ಒಟಿಟಿಯೊಂದಿಗೆ ಸಹ ದೊಡ್ಡ ಮೊತ್ತದ ಡೀಲ್ ಅನ್ನು ನಿರ್ಮಾಣ ಸಂಸ್ಥೆ ಕುದುರಿಸಿಕೊಂಡಿದೆ.

ಒಟಿಟಿಗೆ ಬರುತ್ತಿದೆ ‘ಟಾಕ್ಸಿಕ್’ಗೆ ಠಕ್ಕರ್ ಕೊಟ್ಟ ‘ಇರುಮುಡಿ’
Irumudi Movie

Updated on: Sep 10, 2026 | 7:14 PM

ಮುಖ್ಯಾಂಶಗಳು

  • ರವಿತೇಜ ನಟನೆಯ ತೆಲುಗು ಸಿನಿಮಾ ‘ಇರುಮುಡಿ’
  • ಟಾಕ್ಸಿಕ್ ಜೊತೆಯಲ್ಲಿ ರಿಲೀಸ್ ಆಗಿ ಹಿಟ್ ಆದ ಸಿನಿಮಾ ಇರುಮುಡಿ
  • ಇದೀಗ ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ.

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಆಗುವ ಸಮಯದಲ್ಲಿ ಬಾಲಿವುಡ್ ಸಿನಿಮಾಗಳು ಸೇರಿದಂತೆ ಹಲವು ಭಾಷೆಯ ಸಿನಿಮಾಗಳು ರಿಲೀಸ್ ಮುಂದೂಡಿಕೊಂಡಿದ್ದವು. ‘ಟಾಕ್ಸಿಕ್’ ಜೊತೆಗೆ ಅನವಶ್ಯಕ ಸ್ಪರ್ಧೆಯನ್ನು ತಪ್ಪಿಸಿಕೊಂಡಿದ್ದವು. ಆದರೆ ತೆಲುಗಿನ ರವಿತೇಜ ನಟನೆಯ ‘ಇರುಮುಡಿ’ ಸಿನಿಮಾ ಮಾತ್ರ, ‘ಟಾಕ್ಸಿಕ್’ಗೆ ಎದುರಾಗಿ ಬಿಡುಗಡೆ ಆಗಿತ್ತು. ಬಿಡುಗಡೆ ಆಗಿದ್ದು ಮಾತ್ರವೇ ಅಲ್ಲದೆ, ತೆಲುಗು ರಾಜ್ಯಗಳಲ್ಲಿ ‘ಟಾಕ್ಸಿಕ್’ ಸಿನಿಮಾಕ್ಕೆ ಸಖತ್ ಠಕ್ಕರ್ ಅನ್ನು ಸಹ ಕೊಟ್ಟಿತ್ತು. ಇದೀಗ ‘ಇರುಮುಡಿ’ ಸಿನಿಮಾ ಒಟಿಟಿಗೆ ಬರುತ್ತಿದೆ.

‘ಇರುಮುಡಿ’ ಸಿನಿಮಾ ಆಗಸ್ಟ್ 21 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಬಿಡುಗಡೆ ಆಗಿ ಮೂರು ವಾರಗಳಾಗಿದ್ದು ಇನ್ನೂ ಸಹ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾದ ಬಾಕ್ಸ್ ಆಫೀಸ್ ಗಳಿಕೆ ಈಗಾಗಲೇ 250 ಕೋಟಿ ರೂಪಾಯಿ ಗಳಿಕೆ ದಾಟಿದೆ. ಇನ್ನೂ ಸಹ ಒಳ್ಳೆಯ ಪ್ರದರ್ಶನಗಳನ್ನು ಸಹ ಕಾಣುತ್ತಿದೆ. ಅಷ್ಟರಲ್ಲೇ ಇದೀಗ ಸಿನಿಮಾ ಒಟಿಟಿಗೆ ಬರಲು ಸಜ್ಜಾಗಿದೆ.

ಯಾವುದೇ ಸಿನಿಮಾವೊಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ನಾಲ್ಕೈದು ವಾರಗಳಲ್ಲಿ ಓಟಿಟಿಗೆ ಬರುತ್ತದೆ. ಅತ್ಯಂತ ದೊಡ್ಡ ಸಿನಿಮಾಗಳಾದರೆ ಆರು ವಾರಗಳು ಬೇಕಾಗಬಹುದು. ಭಾರಿ ಬ್ಲಾಕ್‌ಬಸ್ಟರ್ ಆಗಿರುವ ‘ಇರುಮುಡಿ’ ಯಾವಾಗ ಓಟಿಟಿಗೆ ಬರಲಿದೆ ಎಂದು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಪ್ರಮುಖ ಓಟಿಟಿ ದಿಗ್ಗಜ ‘ನೆಟ್‌ಫ್ಲಿಕ್ಸ್’ ಸಂಸ್ಥೆಯು ಭಾರಿ ಮೊತ್ತಕ್ಕೆ ‘ಇರುಮುಡಿ’ ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿದೆ ಎನ್ನಲಾಗುತ್ತಿದೆ. ಈ ಸಿನಿಮಾ ಸೆಪ್ಟೆಂಬರ್ 18ಕ್ಕೆ ಒಟಿಟಿಗೆ ಬರಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ತಮಿಳು ನಿರ್ದೇಶಕನ ಜೊತೆಗೆ ಯಶ್ ಹೊಸ ಸಿನಿಮಾ: ಯಾರು ಆ ನಿರ್ದೇಶಕ?

ರವಿತೇಜ ನಾಯಕನಾಗಿ ನಟಿಸಿರುವ ‘ಇರುಮುಡಿ’ ಸಿನಿಮಾವನ್ನು ಶಿವ ನಿರ್ವಾಣ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಪ್ರಿಯಾ ಭವಾನಿ ಶಂಕರ್ ನಾಯಕಿ. ತಂದೆ-ಮಗಳ ಭಾವನಾತ್ಮಕ ಸೆಂಟಿಮೆಂಟ್ ಜೊತೆಗೆ ಅಯ್ಯಪ್ಪ ಸ್ವಾಮಿಯ ಹಿನ್ನೆಲೆ ಇರುವುದರಿಂದ ಬಾಕ್ಸಾಫಿಸ್‌ನಲ್ಲಿ ‘ಇರುಮುಡಿ’ ಭರ್ಜರಿ ಗಳಿಕೆ ಮಾಡಿದೆ. ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದು, ಸಿನಿಮಾ ಈಗಾಗಲೇ ಭಾರಿ ಗಳಿಕೆಯನ್ನು ಬಾಕ್ಸ್ ಆಫೀಸ್​​ನಲ್ಲಿ ಗಳಿಕೆ ಮಾಡಿದೆ. ಈಗ ಒಟಿಟಿಯಲ್ಲೂ ಭರ್ಜರಿ ಡೀಲ್ ಪಡೆದುಕೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us