AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳು ನಿರ್ದೇಶಕನ ಜೊತೆಗೆ ಯಶ್ ಹೊಸ ಸಿನಿಮಾ: ಯಾರು ಆ ನಿರ್ದೇಶಕ?

Yash Next movie: ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಇದೇ ವರ್ಷ ಅವರ ನಟನೆಯ ಮತ್ತೊಂದು ಸಿನಿಮಾ ‘ರಾಮಾಯಣ’ ರಿಲೀಸ್ ಆಗಲಿದೆ. ಇದರ ನಡುವೆ ‘ಟಾಕ್ಸಿಕ್’ ಬಳಿಕ ಮುಂದೇನು? ಎಂಬ ಪ್ರಶ್ನೆಯೂ ಅಭಿಮಾನಿಗಳಲ್ಲಿ ಕಾಡುತ್ತಿದೆ. ಆದರೆ ಯಶ್ ಈಗಾಗಲೇ ತಮ್ಮ ಮುಂದಿನ ಸಿನಿಮಾಕ್ಕೆ ರೆಡಿ ಆಗಿದ್ದಾರೆ. ಯಶ್ ಅವರು ತಮಿಳಿನ ಪ್ರತಿಭಾವಂತ ನಿರ್ದೇಶಕರೊಬ್ಬರ ಜೊತೆಗೆ ಕೈ ಜೋಡಿಸಲಿದ್ದಾರೆ ಎನ್ನಲಾಗಿದೆ. ಯಾರು ಆ ನಿರ್ದೇಶಕ?

ತಮಿಳು ನಿರ್ದೇಶಕನ ಜೊತೆಗೆ ಯಶ್ ಹೊಸ ಸಿನಿಮಾ: ಯಾರು ಆ ನಿರ್ದೇಶಕ?
Yash Next Movie
ಮಂಜುನಾಥ ಸಿ.
|

Updated on:Sep 08, 2026 | 3:04 PM

Share

ಮುಖ್ಯಾಂಶಗಳು

  • ಯಶ್ ನಟನೆಯ ‘ಟಾಕ್ಸಿಕ್’ ರಿಲೀಸ್ ಆಗಿದೆ.
  • ಟಾಕ್ಸಿಕ್ ಬಳಿಕ ಯಶ್ ಮುಂದಿನ ಸಿನಿಮಾ ಯಾವುದು?
  • ಯಶ್, ತಮಿಳು ನಿರ್ದೇಶಕನ ಸಿನಿಮಾನಲ್ಲಿ ನಟಿಸಲಿದ್ದಾರೆ.

ಯಶ್ ‘ಕೆಜಿಎಫ್ 2’ ಸಿನಿಮಾದ ಬಳಿಕ ನಾಲ್ಕು ವರ್ಷ ಸಮಯ ತೆಗೆದುಕೊಂಡು ‘ಟಾಕ್ಸಿಕ್’ ಸಿನಿಮಾ ಮಾಡಿದರು. ಇತ್ತೀಚೆಗಷ್ಟೆ ಬಿಡುಗಡೆ ಆದ ‘ಟಾಕ್ಸಿಕ್’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಒಳ್ಳೆಯ ಗಳಿಕೆ ಮಾಡಿದೆ. ಆದರೆ ಅದರ ಜೊತೆಗೆ ಮಿಶ್ರ ಪ್ರತಿಕ್ರಿಯೆಗಳನ್ನು ಸಹ ಪಡೆದುಕೊಂಡಿದೆ. ಕೆಲವರಿಗೆ ಸಿನಿಮಾ ಬಹಳ ಇಷ್ಟವಾದರೆ ಕೆಲವರಿಗೆ ಇಷ್ಟವಾಗಿಲ್ಲ. ಯಶ್ ಅಭಿಮಾನಿಗಳೂ ಸಹ ‘ಕೆಜಿಎಫ್’ ರೀತಿ ‘ಟಾಕ್ಸಿಕ್’ ಸಿನಿಮಾವನ್ನು ಸಂಭ್ರಮಿಸುತ್ತಿಲ್ಲ. ‘ಟಾಕ್ಸಿಕ್’ ಬಳಿಕ ಇದೇ ನವೆಂಬರ್​​ನಲ್ಲಿ ಯಶ್ ಅವರ ‘ರಾಮಾಯಣ’ ಬಿಡುಗಡೆ ಆಗುವುದು ಖಾತ್ರಿ ಆಗಿದೆ. ಆದರೆ ಅದು ಸಂಪೂರ್ಣವಾಗಿ ಯಶ್ ಸಿನಿಮಾ ಅಲ್ಲ. ಆದರೆ ಯಶ್ ತಮ್ಮ ಮುಂದಿನ ಸಿನಿಮಾಕ್ಕೆ ಈಗಾಗಲೇ ಕತೆ ಹುಡುಕಿಟ್ಟುಕೊಂಡಿದ್ದಾರೆ. ತಮಿಳು ನಿರ್ದೇಶಕರೊಬ್ಬರ ಕತೆಗೆ ಎಸ್ ಹೇಳಿದ್ದಾರಂತೆ ಯಶ್.

ತಮಿಳು ಸಿನಿಮಾ ನಿರ್ದೇಶಕ ಪಿಎಸ್ ಮಿತ್ರನ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ತಾವು ಯಶ್​​ಗೆ ಕತೆಯೊಂದನ್ನು ಹೇಳಿದ್ದು, ಯಶ್ ಅವರಿಗೆ ಸಹ ಕತೆ ಇಷ್ಟವಾಗಿದೆ. ‘ಟಾಕ್ಸಿಕ್’ ಬಳಿಕ ಸಿನಿಮಾ ಶುರು ಮಾಡುವುದಾಗಿ ಯಶ್ ಅವರೇ ಖುದ್ದು ಹೇಳಿದ್ದಾರೆ ಎಂದಿದ್ದಾರೆ. ಆ ಮೂಲಕ ತಾವೇ ಯಶ್ ಅವರ ಮುಂದಿನ ಸಿನಿಮಾದ ನಿರ್ದೇಶಕ ಎಂದು ಖಾತ್ರಿ ಪಡಿಸಿದ್ದಾರೆ.

ಪಿಎಸ್ ಮಿತ್ರನ್, ತಮಿಳಿನ ಸೂಪರ್ ಹಿಟ್ ಸಿನಿಮಾ ‘ಇರುಂಬು ತಿರಯ್’, ‘ಸರ್ದಾರ್’, ‘ಹೀರೋ’ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಅವರೊಬ್ಬ ಒಳ್ಳೆಯ ನಿರ್ದೇಶಕ ಎಂಬುದನ್ನು ಅವರ ಹಿಂದಿನ ಸಿನಿಮಾಗಳು ಸಾರಿ ಹೇಳಿವೆ. ಇದೀಗ ಅವರ ನಿರ್ದೇಶನದ ‘ಸರ್ದಾರ್ 2’ ಸಿನಿಮಾ ಸೆಪ್ಟೆಂಬರ್ 10 ರಂದು ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ಕಾರ್ತಿ ಹಾಗೂ ಕನ್ನಡದ ಹುಡುಗಿ ಆಶಿಕಾ ರಂಗನಾಥ್ ನಟಿಸಿದ್ದಾರೆ. ‘ಸರ್ದಾರ್ 2’ ಸಿನಿಮಾದ ಪ್ರಚಾರ ಸಂದರ್ಭದಲ್ಲಿ, ತಾವು ಯಶ್ ಅವರಿಗೆ ಕತೆ ಹೇಳಿರುವ ವಿಷಯವನ್ನು ಮಿತ್ರನ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:‘ರಾಮನಾಗಿ ರಣಬೀರ್ ಕಪೂರ್ ನನಗೆ ಸರಿ ಹೊಂದುತ್ತಿಲ್ಲ, ಯಶ್ ಬೆಸ್ಟ್’

ಸೂಪರ್‌ಸ್ಟಾರ್ ಯಶ್ ಜೊತೆ ಸಿನಿಮಾ ಮಾಡುವ ತಮ್ಮ ಯೋಜನೆಗಳು ಸದ್ಯಕ್ಕೆ ಮುಂದೂಡಲ್ಪಟ್ಟಿವೆ ಎಂದು ನಿರ್ದೇಶಕ ಪಿಎಸ್ ಮಿತ್ರನ್ ತಿಳಿಸಿದ್ದಾರೆ. ತಾವು ಯಶ್‌ಗಾಗಿ ಒಂದು ಆಸಕ್ತಿದಾಯಕ ಕಥೆಯನ್ನು ಸಿದ್ಧಪಡಿಸಿದ್ದು, ಆ ಕಥೆ ಯಶ್‌ಗೆ ತುಂಬಾ ಇಷ್ಟವಾಗಿತ್ತು ಎಂದೂ ಅವರು ಹೇಳಿದರು. ಆದರೆ, ಯಶ್ ತಮ್ಮ ದೊಡ್ಡ ಪ್ರಾಜೆಕ್ಟ್ ಆದ ‘ಟಾಕ್ಸಿಕ್’ ಸಿನಿಮಾದಲ್ಲಿ ನಿರತವಾಗಿದ್ದರು, ಹಾಗಾಗಿ ಆ ಸಿನಿಮಾ ವಿಳಂಬ ಆಯ್ತು’ ಎಂದು ಅವರು ಹೇಳಿದ್ದಾರೆ. 2023ರ ಫೆಬ್ರವರಿಯಲ್ಲೇ ಯಶ್ ಅವರು ‘ಟಾಕ್ಸಿಕ್’ ಸಿನಿಮಾಕ್ಕೆ ಕಮಿಟ್ ಆಗಿದ್ದರು. ಇದರಿಂದಾಗಿ, ಅವರು ‘ಟಾಕ್ಸಿಕ್’ ಚಿತ್ರೀಕರಣ ಮುಗಿದ ನಂತರವೇ ಮುಂದಿನ ಪ್ರಾಜೆಕ್ಟ್‌ಗಳಲ್ಲಿ ತೊಡಗಿಕೊಳ್ಳುವೆ ಎಂದು ಸ್ಪಷ್ಟವಾಗಿ ಹೇಳಿದ್ದರು ಎಂದಿದ್ದಾರೆ ಮಿತ್ರನ್.

ಯಶ್ ಅವರನ್ನು ನಾಯಕರಾಗಿ ‘ಇಂಡಿಯಾನಾ ಜೋನ್ಸ್’ ರೀತಿಯ ಸಾಹಸಮಯ ಕಥೆಯನ್ನು ಸಿದ್ಧಪಡಿಸಿಕೊಂಡಿದ್ದೇನೆ. ಅದು ನನ್ನ ಕನಸಿನ ಪ್ರಾಜೆಕ್ಟ್. ಯಶ್‌ಗೆ ಕತೆ ಇಷ್ಟವಾಯಿತು, ಆದರೆ ಸಮಯದ ಮಿತಿಗಳಿಂದಾಗಿ ಸ್ವಲ್ಪ ವಿಳಂಬವಾಗುತ್ತಿದೆ. ‘ಟಾಕ್ಸಿಕ್’ ಮುಗಿದ ನಂತರ ಪ್ರಾರಂಭಿಸೋಣ ಎಂದು ಯಶ್ ಹೇಳಿದ್ದರು’ ಎಂದು ಮಿತ್ರನ್ ತಿಳಿಸಿದ್ದಾರೆ. ಅಲ್ಲಿಗೆ ಯಶ್ ಅವರು ಪಿಎಸ್ ಮಿತ್ರನ್ ಅವರೊಟ್ಟಿಗೆ ಸಿನಿಮಾ ಮಾಡುವ ಭರವಸೆ ನೀಡಿದ್ದಾರೆ ಎಂಬುದು ಖಾತ್ರಿ ಆಗಿದೆ. ಸಿನಿಮಾ ಯಾವಾಗ ಸೆಟ್ಟೇರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:11 pm, Tue, 8 September 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್​
ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್​
ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ವಿವಿಧ ತಳಿಯ ಜಾನುವಾರು!
ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ವಿವಿಧ ತಳಿಯ ಜಾನುವಾರು!
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!
ಚುನಾವಣಾ ಆಯೋಗದ ವಿರುದ್ಧ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ
ಚುನಾವಣಾ ಆಯೋಗದ ವಿರುದ್ಧ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ
ಕೆಪಿಎಸ್​ಸಿ ಅಕ್ರಮ: ಬಸವರಾಜ್ ಕನ್ನಾಳೆ ಡೈರಿಯಲ್ಲಿ ಸಿಕ್ತು ಸ್ಫೋಟಕ ಮಾಹಿತಿ
ಕೆಪಿಎಸ್​ಸಿ ಅಕ್ರಮ: ಬಸವರಾಜ್ ಕನ್ನಾಳೆ ಡೈರಿಯಲ್ಲಿ ಸಿಕ್ತು ಸ್ಫೋಟಕ ಮಾಹಿತಿ
ಬಿಜೆಪಿ ಶಾಸಕ ಮುನಿರತ್ನ ಮನೆ ಬಳಿ ಭಾರಿ ಹೈಡ್ರಾಮಾ
ಬಿಜೆಪಿ ಶಾಸಕ ಮುನಿರತ್ನ ಮನೆ ಬಳಿ ಭಾರಿ ಹೈಡ್ರಾಮಾ
ಛತ್ತೀಸ್​ಗಢ: 48 ಗಂಟೆಗಳ ಮಳೆಗೆ ಕುಸಿದ ಬೆಟ್ಟ
ಛತ್ತೀಸ್​ಗಢ: 48 ಗಂಟೆಗಳ ಮಳೆಗೆ ಕುಸಿದ ಬೆಟ್ಟ
ಲಾರಿ ಅಡ್ಡಗಟ್ಟಿದ ಗಜಪಡೆ: ಛಂಗನೆ ನೆಗೆದು ರಸ್ತೆ ದಾಟಿದ ಬೃಹತ್ ಚಿರತೆ!
ಲಾರಿ ಅಡ್ಡಗಟ್ಟಿದ ಗಜಪಡೆ: ಛಂಗನೆ ನೆಗೆದು ರಸ್ತೆ ದಾಟಿದ ಬೃಹತ್ ಚಿರತೆ!
'ಮನೆಯಲ್ಲಿ ಅಮ್ಮ ಇರಲಿಲ್ಲ, ಹೀಗಾಗಿ ಬರೋದು ತಡವಾಯ್ತು': ಸಚಿವ ಯತೀಂದ್ರ
'ಮನೆಯಲ್ಲಿ ಅಮ್ಮ ಇರಲಿಲ್ಲ, ಹೀಗಾಗಿ ಬರೋದು ತಡವಾಯ್ತು': ಸಚಿವ ಯತೀಂದ್ರ
ಸಮಯ ಪ್ರಜ್ಞೆ ಇಲ್ವೇನ್ರೀ: ಯತೀಂದ್ರ ಬಗ್ಗೆ ತನ್ವೀರ್ ಸೇಠ್ ಬಹಿರಂಗ ಅಸಮಾಧಾನ
ಸಮಯ ಪ್ರಜ್ಞೆ ಇಲ್ವೇನ್ರೀ: ಯತೀಂದ್ರ ಬಗ್ಗೆ ತನ್ವೀರ್ ಸೇಠ್ ಬಹಿರಂಗ ಅಸಮಾಧಾನ