AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ ಫಲಿತಾಂಶದ ಬಗ್ಗೆ ಯಶ್ ಮೊದಲ ರಿಯಾಕ್ಷನ್ ಏನು? ಕೊನೆಗೂ ಸಿಕ್ಕಿತು ಉತ್ತರ

ಬಾಕ್ಸ್ ಆಫೀಸ್‌ನಲ್ಲಿ ಹಿನ್ನಡೆ ಅನುಭವಿಸಿದ 'ಟಾಕ್ಸಿಕ್' ಸಿನಿಮಾದ ಸೋಲಿನ ಕುರಿತು ರಾಕಿಂಗ್ ಸ್ಟಾರ್ ಯಶ್ ಕೊನೆಗೂ ಮೌನ ಮುರಿದಿದ್ದಾರೆ. ಈ ಚಿತ್ರದ ಫಲಿತಾಂಶದ ಬಗ್ಗೆ ಯಶ್ ತಮ್ಮ ಆಪ್ತ ಜೈದೇವ್ ಮೋಹನ್ ಜೊತೆ ದೂರವಾಣಿಯಲ್ಲಿ ಹಂಚಿಕೊಂಡ ಭಾವುಕ ಮಾತುಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

‘ಟಾಕ್ಸಿಕ್’ ಫಲಿತಾಂಶದ ಬಗ್ಗೆ ಯಶ್ ಮೊದಲ ರಿಯಾಕ್ಷನ್ ಏನು? ಕೊನೆಗೂ ಸಿಕ್ಕಿತು ಉತ್ತರ
ಯಶ್
ರಾಜೇಶ್ ದುಗ್ಗುಮನೆ
| Edited By: |

Updated on:Sep 10, 2026 | 8:58 AM

Share

ಮುಖ್ಯಾಂಶಗಳು

  • 'ಟಾಕ್ಸಿಕ್' ಸೋಲಿನ ಬಗ್ಗೆ ಯಶ್ ಮೊದಲ ಮಾತು
  • ಆಪ್ತ ಜೈದೇವ್‌ಗೆ ಫೋನ್ ಮಾಡಿ ಧೈರ್ಯ ತುಂಬಿದ ನಟ
  • ಸಿನಿಮಾ ಸೋಲಿಸಲು ಹುನ್ನಾರ ನಡೀತಾ?

‘ಟಾಕ್ಸಿಕ್’ ಸಿನಿಮಾದ ಫಲಿತಾಂಶ ತಂಡದವರು ನಿರೀಕ್ಷೆ ಮಾಡಿದಂತೆ ಬರಲಿಲ್ಲ. ಸಿನಿಮಾದ ಬಜೆಟ್​ಗೂ, ಆಗಿರೋ ಗಳಿಕೆಗೂ ಅಜಗಜಾಂತರ ಇದೆ. ಈ ಸಿನಿಮಾ ಸೋಲಿನ ಬಗ್ಗೆ ಯಶ್ ಅವರು ಈವರೆಗೆ ಮಾತನಾಡಿಲ್ಲ. ಆದರೆ, ಸಿನಿಮಾದ ರಿಸಲ್ಟ್ ಬಗ್ಗೆ ಅವರ ಉತ್ತರ ಏನಿತ್ತು ಎಂಬುದನ್ನು ‘ಟಾಕ್ಸಿಕ್’ ಸಿನಿಮಾದ ಡಬ್ಬಿಂಗ್ ಸೂಪರ್​ವೈಸರ್, ಯಶ್ ಆಪ್ತ, ನಟ ಜೈದೇವ್ ಮೋಹನ್ ಮಾತನಾಡಿದ್ದಾರೆ.

ಮಾಧ್ಯಮ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಜೈದೇವ್ ಈ ಬಗ್ಗೆ ಮಾತನಾಡಿದ್ದಾರೆ. ‘ಟಾಕ್ಸಿಕ್’ ಸಿನಿಮಾ ರಿಲೀಸ್ ಆದ ಬಳಿಕ ಲಕ್ಷಾಂತರ ಲಿಂಕ್​​ಗಳನ್ನು ತೆಗೆಸಲಾಗಿದೆಯಂತೆ. ಇಷ್ಟೇ ಅಲ್ಲ, ಸಿನಿಮಾ ಸೋಲಿಸಬೇಕೆಂದು ಹುನ್ನಾರ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ. ಇನ್ನು, ‘ಟಾಕ್ಸಿಕ್’ ರಿಲೀಸ್ ಬಗ್ಗೆ ಯಶ್​ ಜೊತೆ ಕರೆ ಮಾಡಿ ಮಾತನಾಡಿದ್ದಾಗಿ ಅವರು ವಿವರಿಸಿದ್ದಾರೆ.

‘ಯಶ್ ಕಾಲ್ ಮಾಡಿದ್ದರು. ಹೆಚ್ಚು ಮನಸ್ಸಿಗೆ ಹಚ್ಚಿಕೊಳ್ಳಬೇಡ ಜೈದೇವ್, ನಾವು ಪ್ರಾಮಾಣಿಕವಾಗಿ ಶ್ರಮಪಟ್ಟು ಸಿನಿಮಾ ಮಾಡಿ ಪ್ರೇಕ್ಷಕರಿಗೆ ತಲುಪಿಸಿದ್ದೇವೆ. ಮುಂದೆ ಮಾಡಬೇಕಾದ ಕೆಲಸಗಳು ಸಾಕಷ್ಟಿವೆ, ಸಿಗೋಣ ಎಂದು ಸಮಾಧಾನ ಹೇಳಿದ್ದರು. ಯಶ್‌ ಅವರು ಮೇಲ್ನೋಟಕ್ಕೆ ತಮಗೆ ಧೈರ್ಯ ತುಂಬಿದರೂ, ಅವರ ಧ್ವನಿಯಲ್ಲಿ ಆ ನೋವು ಸ್ಪಷ್ಟವಾಗಿ ಎದ್ದು ಕಾಣುತ್ತಿತ್ತು’ ಎಂದು ಜೈದೇವ್ ಹಂಚಿಕೊಂಡಿದ್ದಾರೆ.

‘ಸುಮಾರು 4 ವರ್ಷಗಳ ಕಾಲ ಆರಂಭದ ಹಂತದಿಂದಲೂ ಈ ಚಿತ್ರಕ್ಕಾಗಿ ಶ್ರಮಿಸಿದ್ದರಿಂದ ಬೇಸರವಾಗುವುದು ಸಹಜ. ಆದರೆ ಅಂತಿಮವಾಗಿ ಪ್ರೇಕ್ಷಕರ ತೀರ್ಪನ್ನು ಗೌರವದಿಂದ ಒಪ್ಪಿಕೊಳ್ಳಲೇಬೇಕು. ನಾವು ಚೆನ್ನಾಗಿ ಮಾಡಿದ್ದೇವೆ, ಪ್ರೇಕ್ಷಕರು ಒಪ್ಪಿಲ್ಲ’ ಎನ್ನುವ ಥಿಯರಿ ನಮ್ಮದಲ್ಲ ಎಂದು ಜೈದೇವ್ ಹೇಳಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್’ ನಿರ್ದೇಶಕಿಯನ್ನು ಅನ್​ಫಾಲೋ ಮಾಡಿದ್ದಕ್ಕೆ ನಟಿ ಪಾರ್ವತಿ ಪ್ರತಿಕ್ರಿಯೆ

600 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾದ ‘ಟಾಕ್ಸಿಕ್’ ಸಿನಿಮಾ 350 ಕೋಟಿ ರೂಪಾಯಿ ಕಲೆಕ್ಷನ್ ಮಾಡಲು ಕಷ್ಟಪಡುತ್ತಿದೆ. ಮೊದಲ ದಿನದ ಗಳಿಕೆ ನಂತರ ಸಿನಿಮಾ ಡಲ್ ಹೊಡೆದಿದೆ. ಆ ಬಳಿಕ ಸಿನಿಮಾಗೆ ಚೇತರಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ.

ಟಾಕ್ಸಿಕ್​ ಸಿನಿಮಾ ಬಗ್ಗೆ ಸಾಮಾನ್ಯವಾಗಿ ಕೇಳಲಾದ ಪ್ರಶ್ನೆ ಉತ್ತರಗಳು

ಪ್ರಶ್ನೆ: ಟಾಕ್ಸಿಕ್ ಅಸಲಿ ಗಳಿಕೆ ಎಷ್ಟು ಕೋಟಿ?

ಉತ್ತರ: 320 ಕೋಟಿ ರೂಪಾಯಿ

ಪ್ರಶ್ನೆ: ಟಾಕ್ಸಿಕ್ ಸಿನಿಮಾ ರಿಲೀಸ್ ಆಗಿದ್ದು ಯಾವಾಗ?

ಉತ್ತರ: ಆಗಸ್ಟ್ 26

ಪ್ರಶ್ನೆ: ‘ಟಾಕ್ಸಿಕ್’ ಚಿತ್ರದಲ್ಲಿ ಯಶ್ ಪಾತ್ರವೇನು?

ಉತ್ತರ: ನಟ, ನಿರ್ಮಾಣ ಹಾಗೂ ಬರಹಗಾರ

Published On - 7:41 am, Thu, 10 September 26

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ