ಬಿಗ್ ಬಾಸ್ ಅವಾಂತರ:  ಲೈವ್​ನಲ್ಲಿ ಸಹ ಸ್ಪರ್ಧಿಯ ಬಾಡಿನ ಬೇಕಾಬಿಟ್ಟಿ ಮುಟ್ಟಿದ ಮಾಡೆಲ್ ವಿರುದ್ಧ ಟೀಕೆ

ಈ ಬಾರಿ ಹಲವು ಸೆಲೆಬ್ರಿಟಿಗಳು ಬಿಗ್ ಬಾಸ್ ಮನೆ ಒಳಗೆ ತೆರಳಿದ್ದಾರೆ. ಮಾಡೆಲ್​ಗಳು, ನಟರು ಕೂಡ ಇದ್ದಾರೆ. ಈ ಪೈಕಿ ಮಾಡೆಲ್ ಜದ್ ಹದೀದ್ ಅವರ ವರ್ತನೆ ಬಗ್ಗೆ ಅನೇಕರಿಂದ ಟೀಕೆ ವ್ಯಕ್ತವಾಗಿದೆ.

ಬಿಗ್ ಬಾಸ್ ಅವಾಂತರ:  ಲೈವ್​ನಲ್ಲಿ ಸಹ ಸ್ಪರ್ಧಿಯ ಬಾಡಿನ ಬೇಕಾಬಿಟ್ಟಿ ಮುಟ್ಟಿದ ಮಾಡೆಲ್ ವಿರುದ್ಧ ಟೀಕೆ
ಆಕಾಂಕ್ಷಾ-ಜದ್

Updated on: Jun 27, 2023 | 8:55 AM

‘ಬಿಗ್ ಬಾಸ್’ (Bigg Boss) ಅನ್ನೋದು ಸದಾ ವಿವಾದಗಳ ಮೂಲಕ ಸುದ್ದಿ ಆಗುತ್ತಲೇ ಇರುತ್ತದೆ. ಈ ಮೊದಲು ಹಲವು ರೀತಿಯಲ್ಲಿ ವಿವಾದಗಳು ಸೃಷ್ಟಿ ಆಗಿವೆ. ಆದಾಗ್ಯೂ ಈ ಶೋ ನೋಡುವವರ ಸಂಖ್ಯೆ ಕಡಿಮೆ ಆಗಿಲ್ಲ. ಒಂದು ವರ್ಗದ ಜನರು ಈಗಲೂ ಬಿಗ್ ಬಾಸ್ ವೀಕ್ಷಣೆ ಮಾಡುತ್ತಾರೆ. ಈಗ ‘ಹಿಂದಿ ಬಿಗ್ ಬಾಸ್ ಒಟಿಟಿ 2’ (Bigg Boss OTT 2) ಆರಂಭ ಆಗಿದೆ. ಎರಡನೇ ವಾರಕ್ಕೆ ಕಾಲಿಟ್ಟಿರುವ ಈ ಶೋ ಸಾಕಷ್ಟು ಸುದ್ದಿ ಆಗುತ್ತಿದೆ. ಮನೆಯಲ್ಲಿ ಹೈಡ್ರಾಮಾ ನಡೆಯುತ್ತಿದೆ. ಈ ಮಧ್ಯೆ ಮಹಿಳಾ ಸ್ಪರ್ಧಿಯ ಖಾಸಗಿ ಭಾಗವನ್ನು ಮುಟ್ಟಿದ ಆರೋಪ ಪುರುಷ ಸ್ಪರ್ಧಿಯ ಮೇಲೆ ಬಂದಿದೆ. ಈ ವಿಡಿಯೋ ವೈರಲ್ ಆಗುತ್ತಿದೆ.

ಈ ಬಾರಿ ಹಲವು ಸೆಲೆಬ್ರಿಟಿಗಳು ಬಿಗ್ ಬಾಸ್ ಮನೆ ಒಳಗೆ ತೆರಳಿದ್ದಾರೆ. ಮಾಡೆಲ್​ಗಳು, ನಟರು ಕೂಡ ಇದ್ದಾರೆ. ಈ ಪೈಕಿ ಮಾಡೆಲ್ ಜದ್ ಹದೀದ್ ಅವರ ವರ್ತನೆ ಬಗ್ಗೆ ಅನೇಕರಿಂದ ಟೀಕೆ ವ್ಯಕ್ತವಾಗಿದೆ. ಅವರು ಆಕಾಂಕ್ಷಾ ಪುರಿಗೆ  ಮುಜುಗರ ಆಗುವ ರೀತಿಯಲ್ಲಿ ಮುಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ. ಈ ಬಗ್ಗೆ ಅನೇಕರು ಅಪಸ್ವರ ತೆಗೆದಿದ್ದಾರೆ.

ಜದ್ ಹಾಗೂ ಆಕಾಂಕ್ಷಾ ಮಧ್ಯೆ ಯಾವುದೋ ವಿಚಾರಕ್ಕೆ ಮಾತುಕತೆ ನಡೆಯುತ್ತಾ ಇತ್ತು. ಈ ವೇಳೆ ಆಕಾಂಕ್ಷಾ ಅವರನ್ನು ಜದ್ ಎಳೆದುಕೊಂಡಿದ್ದಾರೆ. ಜದ್ ಅವರ ಕೈ ಎಲ್ಲೆ ಮೀರಿದ್ದು ಆಕಾಂಕ್ಷಾಗೆ ಅರ್ಥವಾಗಿದೆ. ‘ಆ ರೀತಿ ಮಾಡಬೇಡಿ. ನನಗೆ ಯಾರಾದರೂ ಮುಟ್ಟಿದರೆ ಆಗುವುದಿಲ್ಲ’ ಎಂದು ಹೇಳಿದ್ದಾರೆ.


ಇದನ್ನೂ ಓದಿ: ಡ್ರಗ್​ ಕೇಸ್​ನಲ್ಲಿ ಅರೆಸ್ಟ್ ಆದ ನಿರ್ಮಾಪಕನಿಗೆ ಚಿತ್ರರಂಗದವರೇ ಗ್ರಾಹಕರು? ಬಿಗ್ ಬಾಸ್ ಸ್ಪರ್ಧಿಯ ಹೆಸರು ರಿವೀಲ್

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಇದನ್ನು ನೋಡಿ ಹಲವರು ಜದ್ ವಿರುದ್ಧ ಕಿಡಿಕಾರಿದ್ದಾರೆ. ಅನೇಕರು ಬಿಗ್ ಬಾಸ್ ಶೋ ವಿರುದ್ಧ ಕೋಪಗೊಂಡಿದ್ದಾರೆ. ಶೋ ಆರಂಭಕ್ಕೂ ಮೊದಲು ಮಾತನಾಡಿದ್ದ ಸಲ್ಮಾನ್ ಖಾನ್ ಯಾವುದೂ ಮಿತಿ ಮೀರದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದರು. ಅನೇಕರು ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us