Lust Stories 2: ವೈರಲ್​ ಆಯ್ತು ‘ಲಸ್ಟ್​ ಸ್ಟೋರೀಸ್​ 2’ ಟ್ರೇಲರ್​; ಇದರಲ್ಲಿದೆ ಲೈಂಗಿಕತೆ ಬಗೆಗಿನ ಬಣ್ಣದ ಕಥೆಗಳು

Lust Stories 2 Trailer: ಬಹುತಾರಾಗಣ ಇರುವ ‘ಲಸ್ಟ್​ ಸ್ಟೋರೀಸ್​ 2’ ಸಿನಿಮಾದ ಟ್ರೇಲರ್​ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಲೈಂಗಿಕತೆ ಬಗ್ಗೆ ನೀನಾ ಗುಪ್ತಾ ಹೇಳುವ ಡೈಲಾಗ್​ಗಳು ಈ ಟ್ರೇಲರ್​ನಲ್ಲಿ ಹೈಲೈಟ್​ ಆಗಿವೆ.

Lust Stories 2: ವೈರಲ್​ ಆಯ್ತು ‘ಲಸ್ಟ್​ ಸ್ಟೋರೀಸ್​ 2’ ಟ್ರೇಲರ್​; ಇದರಲ್ಲಿದೆ ಲೈಂಗಿಕತೆ ಬಗೆಗಿನ ಬಣ್ಣದ ಕಥೆಗಳು
ತಮನ್ನಾ ಭಾಟಿಯಾ, ವಿಜಯ್​ ವರ್ಮಾ

Updated on: Jun 21, 2023 | 6:54 PM

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ‘ಲಸ್ಟ್​ ಸ್ಟೋರೀಸ್​ 2’ (Lust stories 2) ಕೂಡ ಇದೆ. ಬೋಲ್ಡ್​ ಕಥಾಹಂದರ ಹೊಂದಿರುವ ಈ ಸಿನಿಮಾ ಬಗ್ಗೆ ಸಿನಿಪ್ರಿಯರು ಕುತೂಹಲ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ. ಸದ್ಯಕ್ಕಂತೂ ಒಟಿಟಿಗೆ ಸೆನ್ಸಾರ್​ ಹಂಗಿಲ್ಲ. ತುಂಬ ಬೋಲ್ಡ್​ ಆದಂತಹ ಕಥಾವಸ್ತುವನ್ನು ಪ್ರೇಕ್ಷಕರಿಗೆ ತಲುಪಿಸಲು ನಿರ್ದೇಶಕರು ಒಟಿಟಿ ಮೊರೆ ಹೋಗುತ್ತಾರೆ. ‘ಲಸ್ಟ್​ ಸ್ಟೋರೀಸ್​ 2’ ಸಿನಿಮಾದಲ್ಲೂ ಲೈಂಗಿಕತೆಗೆ ಸಂಬಂಧಿಸಿದ 4 ಡಿಫರೆಂಟ್​ ಕಥೆಗಳು ಇವೆ. ಜೂನ್​ 29ರಂದು ‘ನೆಟ್​ಫ್ಲಿಕ್ಸ್​’ (Netflix) ಮೂಲಕ ಈ ಸಿನಿಮಾ ಬಿಡುಗಡೆ ಆಗಲಿದೆ. ಬಾಲಿವುಡ್​ನ ಅನೇಕ ಸ್ಟಾರ್​ ಕಲಾವಿದರು ಇದರಲ್ಲಿ ನಟಿಸಿದ್ದಾರೆ. ಇಂದು (ಜೂನ್​ 21) ‘ಲಸ್ಟ್​ ಸ್ಟೋರೀಸ್​ 2’ ಟ್ರೇಲರ್​ (Lust stories 2 Trailer) ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ. ಕೆಲವೇ ಗಂಟೆಗಳಲ್ಲಿ ಇದು ಮಿಲಿಯನ್​ ವೀವ್ಸ್​ ಪಡೆದುಕೊಂಡಿದೆ.

‘ಲಸ್ಟ್​ ಸ್ಟೋರೀಸ್​’ ಚಿತ್ರ 2018ರಲ್ಲಿ ರಿಲೀಸ್​ ಆಗಿತ್ತು. ಬೋಲ್ಡ್​ ಆದಂತಹ ಕಥಾಹಂದರ ಅದರಲ್ಲಿ ಇತ್ತು. 4 ಬೇರೆ ಬೇರೆ ಕಹಾನಿಗಳನ್ನು ಅದು ಒಳಗೊಂಡಿತ್ತು. ಈಗ ‘ಲಸ್ಟ್​ ಸ್ಟೋರಿಸ್​ 2’ ಚಿತ್ರ ರಿಲೀಸ್​ಗೆ ಸಜ್ಜಾಗಿದೆ. ತಮನ್ನಾ ಭಾಟಿಯಾ, ವಿಜಯ್​ ವರ್ಮಾ, ಕಾಜೋಲ್​, ನೀನಾ ಗುಪ್ತಾ, ಮೃಣಾಲ್​ ಠಾಕೂರ್​, ಕುಮುದ್​ ಮಿಶ್ರಾ, ಅಂಗದ್​ ಬೇಡಿ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ‘ಲಸ್ಟ್​ ಸ್ಟೋರಿಸ್​’ ರೀತಿ ‘ಲಸ್ಟ್​ ಸ್ಟೋರಿಸ್​ 2’ ಚಿತ್ರದಲ್ಲೂ ನಾಲ್ಕು ಕಥೆಗಳಿವೆ. ಈ ಕಥೆಗಳಿಗೆ ಆರ್​. ಬಾಲ್ಕಿ, ಕೊಂಕಣ ಸೇನ್​ ಶರ್ಮಾ, ಅಮಿತ್​ ರವಿಂದರ್​ನಾಥ್​ ಶರ್ಮಾ ಹಾಗೂ ಸುಜಯ್​ ಘೋಷ್​ ಅವರು ನಿರ್ದೇಶನ ಮಾಡಿದ್ದಾರೆ. ಬಾಲಿವುಡ್​ನ ಹೆಸರಾಂತ ಕಲಾವಿದರು ಈ ಚಿತ್ರದಲ್ಲಿ ನಟಿಸಿರುವ ಕಾರಣದಿಂದ ಹೈಪ್​ ಹೆಚ್ಚಾಗಿದೆ.

Lust Stories 2 | Official Trailer | Netflix India

2018ರ ‘ಲಸ್ಟ್​ ಸ್ಟೋರೀಸ್​’ ಸಿನಿಮಾದಲ್ಲಿನ ಕಥೆಗಳಿಗೆ ಜೋಯಾ ಅಖ್ತರ್​, ದಿಬಾಕರ್​ ಬ್ಯಾನರ್ಜಿ, ಕರಣ್​ ಜೋಹರ್​ ಮತ್ತು ಅನುರಾಗ್​ ಕಶ್ಯಪ್​ ಅವರು ನಿರ್ದೇಶನ ಮಾಡಿದ್ದರು. ಆದರೆ ಈಗ 2ನೇ ಪಾರ್ಟ್​ನಲ್ಲಿ ಸಂಪೂರ್ಣ ಬೇರೆಯದೇ ನಿರ್ದೇಶಕರ ತಂಡ ಕೆಲಸ ಮಾಡಿದೆ. ಪಾತ್ರವರ್ಗ ಕೂಡ ಸಂಪೂರ್ಣ ಬದಲಾಗಿದೆ. ಬಾಲಿವುಡ್​ ಸಿನಿಮಾಗಳು ಚಿತ್ರಮಂದಿರದಲ್ಲಿ ಗೆಲ್ಲುತ್ತಿಲ್ಲ. ಈ ಸಂದರ್ಭದಲ್ಲಿ ಒಟಿಟಿಯಲ್ಲಾದರೂ ‘ಲಸ್ಟ್​ ಸ್ಟೋರೀಸ್​ 2’ ಸಿನಿಮಾ ಜನಮೆಚ್ಚುಗೆ ಗಳಿಸಲಿದೆಯೇ ಎಂಬುದನ್ನು ತಿಳಿಯುವ ಸಮಯ ಹತ್ತಿರ ಆಗುತ್ತಿದೆ.

ಇದನ್ನೂ ಓದಿ: Vijay Varma: ‘ನಾನು ಖುಷಿಯಾಗಿದ್ದೇನೆ’: ತಮನ್ನಾ ಭಾಟಿಯಾ ಪ್ರೀತಿ ಒಪ್ಪಿಕೊಂಡ ಬಳಿಕ ವಿಜಯ್​ ವರ್ಮಾ ಪ್ರತಿಕ್ರಿಯೆ

ತಮನ್ನಾ ಭಾಟಿಯಾ ಮತ್ತು ವಿಜಯ್​ ವರ್ಮಾ ಅವರು ನಿಜ ಜೀವನದಲ್ಲಿ ಡೇಟಿಂಗ್​ ಮಾಡುತ್ತಿದ್ದಾರೆ. ಅವರಿಬ್ಬರು ‘ಲಸ್ಟ್​ ಸ್ಟೋರೀಸ್​ 2’ ಸಿನಿಮಾದಲ್ಲಿ ತೆರೆಹಂಚಿಕೊಂಡಿದ್ದಾರೆ. ಇಬ್ಬರೂ ಕೂಡ ಬೋಲ್ಡ್​ ದೃಶ್ಯಗಳಲ್ಲಿ ನಟಿಸಿದ್ದಾರೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸಾಕ್ಷಿ ಸಿಕ್ಕಿದೆ. ಅವರ ಅಭಿಮಾನಿಗಳಿಗೆ ಈ ಸಿನಿಮಾ ವಿಶೇಷವಾಗಿರಲಿದೆ. ಕಾಜೋಲ್​ ಅವರು ಈ ಚಿತ್ರದಲ್ಲಿ ಡಿಗ್ಲಾಮ್​ ಪಾತ್ರ ಮಾಡಿದ್ದಾರೆ. ಲೈಂಗಿಕತೆ ಬಗ್ಗೆ ನೀನಾ ಗುಪ್ತಾ ಹೇಳುವ ಡೈಲಾಗ್​ಗಳು ಟ್ರೇಲರ್​ನಲ್ಲಿ ಹೈಲೈಟ್​ ಆಗಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us