ಡಾಕ್ಯುಮೆಂಟರಿ ಹಾಗೂ ವೆಬ್ ಸೀರೀಸ್ ಮೂಲಕ ಒಟಿಟಿ ಕ್ಷೇತ್ರದಲ್ಲಿ ವಿಶೇಷ ಪ್ರಯತ್ನಗಳನ್ನು ಮಾಡುತ್ತಿರುವ ನೆಟ್ಫ್ಲಿಕ್ಸ್, ಇದೀಗ ಹೊಸ ಸರಣಿಯ ಮುಖಾಂತರ ವಿಶೇಷ ಕಥಾ ವಸ್ತುವನ್ನು ಪ್ರೇಕ್ಷಕರಿಗೆ ಕಟ್ಟಿಕೊಡಲು ಸಿದ್ಧತೆ ನಡೆಸಿದೆ. ಬೆಂಗಳೂರಿನ ಅಪರಾಧ ಜಗತ್ತಿನ ನಾಲ್ಕು ವಿಶೇಷ ಪ್ರಕರಣಗಳನ್ನು ತೆರೆಯ ಮೇಲೆ ತರಲು ನೆಟ್ಫ್ಲಿಕ್ಸ್ ತಯಾರಾಗಿದ್ದು, ಅದರ ಬಿಡುಗಡೆಗೂ ಮುಹೂರ್ತ ನಿಗದಿ ಮಾಡಿದೆ. ಸಾಕ್ಷ್ಯಚಿತ್ರದ ಮಾದರಿಯಲ್ಲಿ ಈ ಸೀರೀಸ್ ಮೂಡಿಬರಲಿದ್ದು, ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾಗುವ ಭಾರತದ ಮೊದಲ ನೈಜ ಘಟನೆ ಆಧಾರಿತ ಕ್ರೈಮ್ ಸೀರೀಸ್ ಇದಾಗಿದೆ. ಈ ಚಿತ್ರಕ್ಕೆ ‘ಕ್ರೈಂ ಸ್ಟೋರೀಸ್: ಇಂಡಿಯಾ ಡಿಟೆಕ್ಟೀವ್ಸ್’ ಎಂದು ಹೆಸರಿಡಲಾಗಿದೆ.
ಈ ಸಾಕ್ಷ್ಯಚಿತ್ರವು ಸೆಪ್ಟೆಂಬರ್ 13ರಂದು ಬಿಡುಗಡೆ ಮಾಡಲಾಗುವುದು ಎಂದು ನೆಟ್ಫ್ಲಿಕ್ಸ್ ತಿಳಿಸಿದೆ. ಈ ಸಾಕ್ಷ್ಯಚಿತ್ರದ ಮೂಲಕ ಬೆಂಗಳೂರಿನ ಪೊಲೀಸರು ಸಂಕೀರ್ಣ ಪ್ರಕರಣಗಳ ಹಿಂದೆ ಬಿದ್ದು, ಅವನ್ನು ಭೇಧಿಸುವುದನ್ನು ಎಳೆಎಳೆಯಾಗಿ ತೋರಿಸಲಾಗುವುದು. ಹಾಗೂ ಈ ಸರಣಿ ನಾಲ್ಕು ಪ್ರಮುಖ ಪ್ರಕರಣಗಳನ್ನು ಒಳಗೊಂಡಿದೆ ಎಂದು ನೆಟ್ಫ್ಲಿಕ್ಸ್ ತಿಳಿಸಿದೆ. ಈ ಚಿತ್ರದ ಕುರಿತಂತೆ ಇನ್ನುಳಿದ ಮಾಹಿತಿಯನ್ನು ನೆಟ್ಫ್ಲಿಕ್ಸ್ ಸದ್ಯದಲ್ಲೇ ಬಿಡುಗಡೆಗೊಳಿಸುವುದಾಗಿ ತಿಳಿಸಿದೆ.
ನೆಟ್ಫ್ಲಿಕ್ಸ್ನಲ್ಲಿ ಈ ಮಾಸಾಂತ್ಯದಲ್ಲಿ ಬಿಡುಗಡೆಯಾಗುವ ಚಿತ್ರಗಳು:
ಆಗಸ್ಟ್ 25:
Clickbait: Season 1
The Old Ways
Really Love
The River Runner
ಆಗಸ್ಟ್ 26:
EDENS ZERO: Season 1
Family Reunion: Part 4
ಆಗಸ್ಟ್ 27:
He’s All That
I Heart Arlo: Season 1
King of Boys: The Return of the King: Limited Series
SAS: Rise of the Black Swan
Titletown High: Season 1
ಆಗಸ್ಟ್ 28:
Hometown Cha-Cha-Cha: Season 1
ಆಗಸ್ಟ್ 31:
Sparking Joy: Season 1
Untold: Crime and Penalties
ಇದನ್ನೂ ಓದಿ:
Abhishek Bachchan: ಚಿತ್ರೀಕರಣದ ವೇಳೆ ಖ್ಯಾತ ನಟ ಅಭಿಷೇಕ್ ಬಚ್ಚನ್ಗೆ ಗಾಯ, ಆಸ್ಪತ್ರೆಗೆ ದಾಖಲು
ಮತ್ತೆ ಒಂದಾದ ರಕ್ಷಿತ್ ಶೆಟ್ಟಿ-ಅನಂತ್ ನಾಗ್; ಈ ಬಾರಿ ನಡೆಯಲಿದೆ ‘ಆಬ್ರಕಡಾಬ್ರ’
(Netflix will release new documentary series on real Bangalore crime investigations)