
ರಜನೀಕಾಂತ್ ನಟನೆಯ ಬ್ಲಾಕ್ ಬಸ್ಟರ್ ಸಿನಿಮಾ ‘ಜೈಲರ್ 2’ ಈ ವಾರ ಒಟಿಟಿಗೆ ಬಂದಿದೆ. ಚಿತ್ರಮಂದಿರದಲ್ಲಿ ಬಿಡುಗಡೆ ಆದ ಒಂದೇ ತಿಂಗಳಿಗೆ ಈ ಸಿನಿಮಾ ಒಟಿಟಿಗೆ ಕಾಲಿಟ್ಟಿದೆ. ಕೆಲವೆಡೆ ಈ ಸಿನಿಮಾ ಇನ್ನೂ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಅಷ್ಟರಲ್ಲೇ ಒಟಿಟಿಗೆ ಕಾಲಿರಿಸಿದೆ. ಸಿನಿಮಾ ಪ್ರೈಂ ವಿಡಿಯೋನಲ್ಲಿ ವೀಕ್ಷಣೆಗೆ ಲಭ್ಯವಿದೆ
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಒಟ್ಟಿಗೆ ನಟನೆ ಮಾಡಿದ ಸಿನಿಮಾ ‘ರಣಬಾಲಿ’ ಈ ವಾರ ಒಟಿಟಿಗೆ ಬಂದಿದೆ. ಸ್ವಾತಂತ್ರ್ಯ ಪೂರ್ವದ ಕತೆ ಹೊಂದಿರುವ ಈ ಸಿನಿಮಾ ಅನ್ನು ನೆಟ್ಫ್ಲಿಕ್ಸ್ನಲ್ಲಿ ವೀಕ್ಷಣೆ ಮಾಡಬಹುದಾಗಿದೆ. ಈ ಸಿನಿಮಾ ಚಿತ್ರಮಂದಿರದಲ್ಲಿ ಸಾಧಾರಣ ಪ್ರದರ್ಶನ ಕಂಡಿತ್ತು.
ನಟ ಕುನಾಲ್ ಖೇಮು ನಟಿಸಿ, ನಿರ್ದೇಶನವನ್ನೂ ಮಾಡಿರುವ ಹಾಸ್ಯಪ್ರಧಾನ ಸಿನಿಮಾ ‘ವೈಬ್’ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿ ಉತ್ತಮ ಗಳಿಕೆ ಕಂಡಿತ್ತು. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದೆ. ಈ ಹಾಸ್ಯ ಪ್ರಧಾನ ಸಿನಿಮಾ ಅನ್ನು ಪ್ರೈಂ ವಿಡಿಯೋನಲ್ಲಿ ವೀಕ್ಷಣೆ ಮಾಡಬಹುದಾಗಿದೆ.
ಕರೀನಾ ಕಪೂರ್, ಪೃಥ್ವಿರಾಜ್ ಸುಕುಮಾರನ್ ಒಟ್ಟಿಗೆ ನಟಿಸಿರುವ ಕ್ರೈಂ ಥ್ರಿಲ್ಲರ್ ಕತೆಯುಳ್ಳ ಹಿಂದಿ ಸಿನಿಮಾ ಇದಾಗಿದ್ದು, ವಕೀಲೆ ಮತ್ತು ಪೊಲೀಸ್ ಅಧಿಕಾರಿಯ ನಡುವೆ ನಡೆಯುವ ಕತೆಯನ್ನು ಒಳಗೊಂಡಿದೆ. ಸಿನಿಮಾದ ಕತೆಯಲ್ಲಿ ಸಾಕಷ್ಟು ತಿರುವುಗಳಿವೆ. ಸಿನಿಮಾ ಅನ್ನು ನೆಟ್ಫ್ಲಿಕ್ಸ್ನಲ್ಲಿ ವೀಕ್ಷಣೆ ಮಾಡಬಹುದಾಗಿದೆ.
‘ದಿ ಲಾರ್ಡ್ ಆಫ್ ದಿ ರಿಂಗ್’ ಅತ್ಯಂತ ಜನಪ್ರಿಯ ಮತ್ತು ಆಸ್ಕರ್ ವಿಜೇತ ಸಿನಿಮಾ ಸರಣಿ. ಈ ಹಿಂದೆ ಇದೇ ಕತೆಯನ್ನು ವೆಬ್ ಸರಣಿ ಮಾಡಲಾಗಿತ್ತು. ಆ ವೆಬ್ ಸರಣಿಯ ಮೂರನೇ ಸೀಸನ್ ಇದೀಗ ಅಮೆಜಾನ್ ಪ್ರೈಂನಲ್ಲಿ ರಿಲೀಸ್ ಆಗಿದೆ.
‘ಪಾರಿವಾರಿಕ್ ಮನೊರಂಜನ್’ ಒಂದು ಸರಳ, ಸುಂದರ ಪ್ರೇಮಕತೆಯನ್ನು ಒಳಗೊಂಡಿರುವ ಸಿನಿಮಾ. ಪಂಕಜ್ ಥ್ರಿಪಾಠಿ ಮತ್ತು ಅದಿತಿ ರಾವ್ ಹೈದರಿ ಮುಖ್ಯ ಪಾತ್ರಗಳಲ್ಲಿ ನಟನೆ ಮಾಡಿರುವ ಈ ಸಿನಿಮಾ ಇದೀಗ ಸೋನಿ ಲಿವ್ನಲ್ಲಿ ತೆರೆ ಕಂಡಿದ್ದು, ಒಳ್ಳೆಯ ವಿಮರ್ಶೆಗಳನ್ನು ಗಿಟ್ಟಿಸಿಕೊಳ್ಳುತ್ತಿದೆ.
ಕರಣ್ ಜೋಹರ್ ನಿರ್ಮಿಸುವ ‘ಸ್ಟುಡೆಂಟ್ ಆಫ್ ದಿ ಇಯರ್’ ಸಿನಿಮಾದ ಸ್ಪಿನ್ ಆಫ್ ರೀತಿಯ ವೆಬ್ ಸರಣಿ ‘ಸ್ಟೂಡೆಂಟ್ ಆಫ್ ದಿ ಇಯರ್: ಡಾರ್ಕ್’ ಹೆಸರೇ ಸೂಚಿಸುತ್ತಿರುವಂತೆ ಇದೊಂದು ಕ್ರೈಂ ಥ್ರಿಲ್ಲರ್ ವೆಬ್ ಸರಣಿ. ಇದರ ಮೊದಲ ಸೀಸನ್ ಜಿಯೋ ಹಾಟ್ಸ್ಟಾರ್ನಲ್ಲಿ ರಿಲೀಸ್ ಆಗಿದೆ.