ಈ ವಾರ ಒಟಿಟಿಗೆ ಬಂದಿವೆ ಸೂಪರ್ ಹಿಟ್ ಸಿನಿಮಾಗಳು, ಪಟ್ಟಿ ಇಲ್ಲಿದೆ

Updated on: Aug 22, 2026 | 3:26 PM

OTT release: ಪ್ರತಿ ವಾರದಂತೆ ಈ ವಾರವೂ ಒಟಿಟಿಗೆ ಕೆಲ ಒಳ್ಳೆಯ ಸಿನಿಮಾ, ವೆಬ್ ಸರಣಿಗಳು ಲಗ್ಗೆ ಇಟ್ಟಿವೆ. ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಎನಿಸಿಕೊಂಡ ಕೆಲ ಸಿನಿಮಾಗಳು ಸಹ ಈ ವಾರ ಒಟಿಟಿಗೆ ಬಂದಿದ್ದು, ಪ್ರೇಕ್ಷಕರು ತಮಗೆ ಇಷ್ಟವಾದ ಭಾಷೆಗಳಲ್ಲಿ ಸಿನಿಮಾ, ವೆಬ್ ಸರಣಿಗಳನ್ನು ವೀಕ್ಷಿಸಬಹುದಾಗಿದೆ. ಈ ವಾರ ಒಟಿಟಿಗೆ ಬಂದಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ...

1 / 5
ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿತ್ತು. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದೆ. ವಿಜಯ್ ಅವರ ಕೊನೆಯ ಸಿನಿಮಾ ಇದೆನ್ನಲಾಗಿದ್ದು, ಸಿನಿಮಾವನ್ನು ಜೀ5ನಲ್ಲಿ ವೀಕ್ಷಿಸಬಹುದಾಗಿದೆ.

2 / 5
‘ಫೇಸಿಂಗ್ ಎಲ್ ಚಾಪೊ’ ನೆಟ್​​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಿರುವ ವೆಬ್ ಸರಣಿ. ವಿಶ್ವದ ಕುಖ್ಯಾತ ಡ್ರಗ್ ಲಾರ್ಡ್ ಎಲ್ ಚಾಪೋನ ವಿರುದ್ಧ ಇಬ್ಬರು ಪೊಲೀಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯನ್ನು ಈ ವೆಬ್ ಸರಣಿ ಬಿಚ್ಚಿಡುತ್ತದೆ. 36 ಸಾವಿರ ಜನರ ಸಾವಿಗೆ ಕಾರಣವಾದ ಡಾನ್ ಅನ್ನು ಹೆಡೆಮುರಿ ಕಟ್ಟಿದ್ದು ಹೇಗೆಂದು ಇದರಲ್ಲಿ ತೋರಿಸಲಾಗಿದೆ.

3 / 5
ಕಿರಣ್ ಅಬ್ಬವರನ್ ಮತ್ತು ಗೌರಿ ನಟಿಸಿರುವ ‘ಚೆನ್ನೈ ಲವ್ ಸ್ಟೋರಿ’ ಸಿನಿಮಾ ಕೆಲವೇ ವಾರಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾಕ್ಕೆ ಭರ್ಜರಿ ಪ್ರಚಾರ ಮಾಡಲಾಗಿತ್ತು. ಸಿನಿಮಾದ ಬಗ್ಗೆ ಒಳ್ಳೆಯ ವಿಮರ್ಶೆಗಳು ಕೇಳಿ ಬಂದಿದ್ದವು. ಇದೀಗ ಈ ಸಿನಿಮಾ ಸೋನಿ ಲಿವ್​​ನಲ್ಲಿ ಬಿಡುಗಡೆ ಆಗಲಿದೆ.

4 / 5
‘ಟಾಯ್ ಸ್ಟೋರಿ’ ಸರಣಿಯ ಐದನೇ ಸಿನಿಮಾ ‘ಟಾಯ್ ಸ್ಟೋರಿ 5’ ಈ ವಾರ ಒಟಿಟಿಗೆ ಬಂದಿದೆ. ಆಸ್ಕರ್ ಸೇರಿ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದಿರುವ ಸರಣಿ ಇದಾಗಿದ್ದು, ಈ ಸರಣಿಯ ಐದನೇ ಸಿನಿಮಾ ಈ ವಾರ ಒಟಿಟಿಗೆ ಬಂದಿದ್ದು, ಆಪಲ್ ಟಿವಿಯನ್ನು ಇದನ್ನು ವೀಕ್ಷಿಸಬಹುದಾಗಿದೆ.

5 / 5
ಅಕ್ಷಯ್ ಕುಮಾರ್, ದಿಶಾ ಪಟಾನಿ, ಸುನಿಲ್ ಶೆಟ್ಟಿ, ಅರ್ಷದ್ ವಾರ್ಸಿ ಇನ್ನೂ ಹಲವಾರು ಸ್ಟಾರ್ ನಟ-ನಟಿಯರು ಒಟ್ಟಿಗೆ ನಟಿಸಿದ್ದ ಹಾಸ್ಯಪ್ರಧಾನ ಸಿನಿಮಾ ‘ವೆಲ್​​ಕಮ್ ಟು ಜಂಗಲ್’ ಬಾಕ್ಸ್ ಆಫೀಸ್​​ನಲ್ಲಿ 100 ಕೋಟಿಗೂ ಹೆಚ್ಚು ಗಳಿಸಿದ ಈ ಸಿನಿಮಾ ಇದೀಗ ಒಟಿಟಿಗೆ ಬಂದಿದೆ. ಸಿನಿಮಾವನ್ನು ಜಿಯೋ ಹಾಟ್​​ಸ್ಟಾರ್​​ನಲ್ಲಿ ವೀಕ್ಷಿಸಬಹುದಾಗಿದೆ.

Loading...
Unable to load recommendations.
Follow Us