ಈ ವಾರ ಒಟಿಟಿಗೆ ಬಂದಿವೆ ಸೂಪರ್ ಸಿನಿಮಾಗಳು, ನಿಮ್ಮ ಆಯ್ಕೆ ಯಾವುದು?

Updated on: Aug 01, 2026 | 3:12 PM

OTT Release this week: ಪ್ರತಿ ವಾರದಂತೆ ಈ ವಾರವೂ ಕೆಲವು ಸಿನಿಮಾ, ವೆಬ್ ಸರಣಿ, ಡಾಕ್ಯುಮೆಂಟರಿ, ರಿಯಾಲಿಟಿ ಶೋಗಳು ಒಟಿಟಿಗೆ ಬಂದಿವೆ. ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡ, ವಿಮರ್ಶಕರಿಂದ ಮೆಚ್ಚುಗೆ ಪಡೆದ ಕೆಲ ಸಿನಿಮಾಗಳು ಈ ವಾರ ಒಟಿಟಿಗೆ ಬಂದಿರುವುದು ವಿಶೇಷ. ಈ ವಾರ ಬಿಡುಗಡೆ ಆಗಿರುವ ಸಿನಿಮಾಗಳಲ್ಲಿ ನಿಮ್ಮ ಆಯ್ಕೆ ಯಾವುದು?

1 / 7
‘ಮಂಜ್ಞುಮೆಲ್ ಬಾಯ್ಸ್’ ಅಂಥಹಾ ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟಿರುವ ಚಿದಂಬರಂ ನಿರ್ದೇಶನ ಮಾಡಿರುವ ‘ಬಾಲನ್: ದಿ ಬಾಯ್’ ಸಿನಿಮಾ ಕೆಲ ತಿಂಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿತು. ಸಿನಿಮಾ ಪ್ರೇಮಿಗಳು ಈ ಸಿನಿಮಾವನ್ನು ಬಲುವಾಗಿ ಮೆಚ್ಚಿದ್ದರು. ಈ ವಾರ ಈ ಸಿನಿಮಾ ಒಟಿಟಿಗೆ ಬಂದಿದೆ. ಜೀ5ನಲ್ಲಿ ಸಿನಿಮಾ ವೀಕ್ಷಿಸಬಹುದಾಗಿದೆ.

2 / 7
‘ಚಿನ್ನ ಚಿನ್ನ ಆಸೈ’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಗಿ ಪ್ರೇಕ್ಷಕರು, ವಿಮರ್ಶಕರಿಂದ ಬಹಳ ಮೆಚ್ಚುಗೆ ಗಳಿಸಿರುವ ಸಿನಿಮಾ. ಬನಾರಸ್​​ನಲ್ಲಿ ಕಳೆದು ಹೋಗುವ ಒಬ್ಬ ವಯಸ್ಕ ಮಹಿಳೆ ಮತ್ತು ಆಕೆಗೆ ಜೊತೆಯಾಗುವ ಒಬ್ಬ ವಯಸ್ಕನ ನಡುವೆ ನಡೆಯುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾ ಜಿಯೋ ಹಾಟ್​​ಸ್ಟಾರ್​​ನಲ್ಲಿ ವೀಕ್ಷಣೆಗೆ ಲಭ್ಯವಿದೆ.

3 / 7
‘ಡೆವಿಲ್ ವೇರ್ಸ್ ಪ್ರಾಡಾ’ ಹಾಲಿವುಡ್ ಸಿನಿಮಾ ಬಹಳ ಜನಪ್ರಿಯವಾದ ಮಹಿಳಾ ಪ್ರಧಾನ ಸಿನಿಮಾ. ಇದೀಗ ಈ ಸಿನಿಮಾದ ಎರಡನೇ ಭಾಗ ಬಿಡುಗಡೆ ಆಗಿದೆ. ಮೆರಿಲ್ ಸ್ಟ್ರೀಪ್, ಅನ್ನಾ ಹಾಥ್​​ವೇ, ಎಮಿಲಿ ಬ್ಲಂಟ್ ನಟಿಸಿರುವ ಈ ಸಿನಿಮಾ ಜಿಯೋ ಹಾಟ್​​ಸ್ಟಾರ್​​ನಲ್ಲಿ ರಿಲೀಸ್ ಆಗಿದೆ.

4 / 7
‘ಘಟ್ಟ ಕುಸ್ತಿ 2’ ಸಿನಿಮಾ ಕಾಮಿಡಿ ಡ್ರಾಮಾ ಕತೆ ಹೊಂದಿದೆ. ಕುಸ್ತಿಪಟುವಾಗಿರು ಪತ್ನಿ ಮತ್ತು ಆಕೆಗೆ ಬೆಂಬಲವಾಗಿ ಮನೆ ಕೆಲಸ ನೋಡಿಕೊಳ್ಳುವ ಪತಿ ಕತೆ ಹೀಗೆ ಸಾಗುತ್ತದೆ. ಅವರ ಕುಟುಂಬದಲ್ಲಿ ಎದುರಾಗುವ ಸಮಸ್ಯೆಗಳು, ಅದಕ್ಕೆ ಪರಿಹಾರ ಕಂಡುಕೊಳ್ಳುವ ರೀತಿ ಮಜವಾಗಿದೆ. ಸಿನಿಮಾ ನೆಟ್​​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಿದೆ.

5 / 7
ವರುಣ್ ಧವನ್, ಪೂಜಾ ಹೆಗ್ಡೆ, ಮೃಣಾಲ್ ಠಾಕೂರ್ ಅವರುಗಳು ನಟಿಸಿರುವ ಹಾಸ್ಯ ಪ್ರಧಾನ ರೊಮ್ಯಾಂಟಿಕ್ ಸಿನಿಮಾ ‘ಹೇ ಜವಾನಿ ಥೋ ಇಷ್ಕ್ ಹೋನಾ ಹೈ’. ಈ ಸಿನಿಮಾದ ಹಾಡುಗಳು ಸಖತ್ ಹಿಟ್ ಆಗಿದ್ದವು. ಚಿತ್ರಮಂದಿರದಲ್ಲಿ ಸಹ ಸಾಧಾರಣ ಯಶಸ್ಸನ್ನು ಈ ಸಿನಿಮಾ ಗಳಿಸಿತ್ತು. ಇದೀಗ ಜೀ5 ನಲ್ಲಿ ಸಿನಿಮಾ ರಿಲೀಸ್ ಆಗಿದೆ.

6 / 7
ಕರ್ಣನ ಕುರಿತಾದ ಅನಿಮೇಷನ್ ಸಿನಿಮಾ ‘ದಿ ಲಿಜೆಂಡ್ ಆಫ್ ಕರ್ಣ’ ಸಿನಿಮಾ ಸೋನಿ ಲಿವ್​​ನಲ್ಲಿ ಬಿಡುಗಡೆ ಆಗಿದೆ. ಕರ್ಣನ ಜೀವನ ಕತೆಯನ್ನು ಅನಿಮೇಷನ್​​​ನಲ್ಲಿ ಮರು ಸೃಷ್ಟಿಸಲಾಗಿದೆ. ಕರ್ಣನ ಬಗ್ಗೆ ಬಿಡುಗಡೆ ಆಗಿರುವ ಮೊದಲ ಅನಿಮೇಷನ್ ಸಿನಿಮಾ ಇದಾಗಿದೆ.

7 / 7
‘ರಾವ್ ಬಹದ್ಧೂರ್’ ಇತ್ತೀಚೆಗೆ ಬಿಡುಗಡೆ ಆದ ತೆಲುಗು ಸಿನಿಮಾ. ಬಹಳ ಭಿನ್ನವಾದ ಕತೆ, ನಿರೂಪಣೆ, ಸಿನಿಮಾಟೊಗ್ರಫಿಯನ್ನು ಹೊಂದಿರುವ ಈ ಸಿನಿಮಾಕ್ಕೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾ ಇದೀಗ ನೆಟ್​​ಫ್ಲಿಕ್ಸ್​​ನಲ್ಲಿ ವೀಕ್ಷಣೆಗೆ ಲಭ್ಯವಿದೆ.

Loading...
Unable to load recommendations.
Follow Us