2023ರಲ್ಲಿ ಬಿಡುಗಡೆ ಆದ ಸಿನಿಮಾಗಳ ಪೈಕಿ ಕೆಲವು ಕನ್ನಡ ಸಿನಿಮಾಗಳು ವಿಶೇಷ ರೀತಿಯಲ್ಲಿ ಗುರುತಿಸಿಕೊಂಡವು. ಅವುಗಳ ಸಾಲಿನಲ್ಲಿ ‘ಟೋಬಿ’ ಸಿನಿಮಾ (Toby Movie) ಕೂಡ ಇದೆ. ಈ ಸಿನಿಮಾದಲ್ಲಿ ರಾಜ್ ಬಿ. ಶೆಟ್ಟಿ (Raj B Shetty) ಅವರು ಡಿಫರೆಂಟ್ ಆದಂತಹ ಪಾತ್ರ ಮಾಡಿದ್ದಾರೆ. ಅವರ ನಟನೆಗೆ ವಿಮರ್ಶಕರಿಂದ ಮತ್ತು ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಯಿತು. ಚಿತ್ರಮಂದಿರದಲ್ಲಿ ನೋಡಿ ಜನರು ಎಂಜಾಯ್ ಮಾಡಿದರು. ಈಗ ಒಟಿಟಿಯಲ್ಲೂ ‘ಟೋಬಿ’ ಸಿನಿಮಾವನ್ನು ಕಣ್ತುಂಬಿಕೊಳ್ಳುವ ಸಮಯ ಹತ್ತಿರ ಆಗುತ್ತಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ…
ರಾಜ್ ಬಿ. ಶೆಟ್ಟಿ ಅವರು ಬರೆದು, ನಟಿಸಿದ ‘ಟೋಬಿ’ ಸಿನಿಮಾ ಕನ್ನಡ ಮಾತ್ರವಲ್ಲದೇ ಮಲಯಾಳಂ ಭಾಷೆಗೂ ಡಬ್ ಆಗಿ ಜನಮೆಚ್ಚುಗೆ ಗಳಿಸಿತು. ಬೇರೆ ಬೇರೆ ರಾಜ್ಯದ ಜನರು ಕೂಡ ಈ ಸಿನಿಮಾ ಬಗ್ಗೆ ಮಾತನಾಡಿದ್ದುಂಟು. ಈಗ ಈ ಸಿನಿಮಾ ‘ಸೋನಿ ಲಿವ್’ ಒಟಿಟಿ ಮೂಲಕ ವೀಕ್ಷಣೆಗೆ ಲಭ್ಯವಾಗಲಿದೆ. ಡಿಸೆಂಬರ್ 22ರಂದು ಒಟಿಟಿಯಲ್ಲಿ ಈ ಸಿನಿಮಾದ ಸ್ಟ್ರೀಮಿಂಗ್ ಆರಂಭ ಆಗಲಿದೆ.
Waiting to Rewatch TOBY?? The wait is over now!
The most awaited OTT release of TOBY is here💥 Releasing @sonylivindia on 22nd December ♥️#TobyOnOtt @RajbShettyOMK #BasilAlChalakkal @Chaithra_Achar_ @samyuktahornad #PraveenShriyan @m3dhun @AgasthyaFilms @SmoothSailors1 pic.twitter.com/R2s4NPolaI
— Raj B Shetty (@RajbShettyOMK) December 18, 2023
ಒಟಿಟಿ ಪ್ಲಾಟ್ಫಾರ್ಮ್ಗಳ ನಡುವೆ ಪೈಪೋಟಿ ಇದೆ. ಹೊಸ ಸಿನಿಮಾಗಳನ್ನು ಜನರಿಗೆ ತಲುಪಿಸುವಲ್ಲಿ ಹಣಾಹಣಿ ಇದೆ. ‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ ಅವರು ನಟಿಸಿದ ‘ಜೇಮ್ಸ್’ ಸಿನಿಮಾ ಕೂಡ ‘ಸೋನಿ ಲಿವ್’ ಮೂಲಕ ಒಟಿಟಿಗೆ ಬಂದಿತ್ತು. ಈಗ ಈ ಸಂಸ್ಥೆಯಿಂದ ವೀಕ್ಷಣೆಗೆ ಲಭ್ಯವಾಗಲಿರುವ 2ನೇ ಕನ್ನಡ ಸಿನಿಮಾ ಎಂಬ ಖ್ಯಾತಿ ‘ಟೋಬಿ’ ಸಿನಿಮಾಗೆ ಸಲ್ಲುತ್ತಿದೆ.
ಇದನ್ನೂ ಓದಿ: Toby Review: ಮಾತನಾಡದೆ ಮನಸ್ಸಿಗೆ ನಾಟುವ ‘ಟೋಬಿ’; ಇಲ್ಲಿದೆ ಒಂದಷ್ಟು ಪ್ಲಸ್, ಇನ್ನೊಂದಿಷ್ಟು ಮೈನಸ್
ಮುಖ್ಯ ಭೂಮಿಕೆಯಲ್ಲಿ ರಾಜ್ ಬಿ. ಶೆಟ್ಟಿ ನಟಿಸಿದ ‘ಟೋಬಿ’ ಸಿನಿಮಾಗೆ ಬಾಸಿಲ್ ಅಲ್ಚಾಲಕ್ಕಲ್ ಅವರು ನಿರ್ದೇಶನ ಮಾಡಿದ್ದಾರೆ. ಚೈತ್ರಾ ಜೆ. ಆಚಾರ್, ಸಂಯುಕ್ತಾ ಹೊರನಾಡು, ಗೋಪಾಲಕೃಷ್ಣ ದೇಶಪಾಂಡೆ, ಭರತ್ ಜಿ.ಬಿ, ರಾಜ್ ದೀಪಕ್ ಶೆಟ್ಟಿ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿದ್ದಾರೆ. ಪ್ರವೀಣ್ ಶ್ರೀಯಾನ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಮಿಧುನ್ ಮುಕುಂದನ್ ಅವರು ಸಂಗೀತ ನೀಡಿದ್ದಾರೆ. ಈ ಸಿನಿಮಾವನ್ನು ‘ಲೈಟರ್ ಬುದ್ಧ ಫಿಲ್ಮ್ಸ್’, ‘ಅಗಸ್ತ್ಯ ಫಿಲ್ಮ್ಸ್’, ‘ಕಾಫಿ ಗ್ಯಾಂಗ್ ಸ್ಟುಡಿಯೋಸ್’ ಹಾಗೂ ‘ಸ್ಮೂತ್ ಸೈಲರ್ಸ್’ ಸಂಸ್ಥೆಗಳು ಜಂಟಿಯಾಗಿ ನಿರ್ಮಾಣ ಮಾಡಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:12 pm, Mon, 18 December 23