ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆ ಆದ ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ (Naga Chaitanya) ಅವರು ವಿಚ್ಛೇದನ ಪಡೆಯುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಪರಸ್ಪರ ಅನ್ಯೋನ್ಯವಾಗಿ ಇದ್ದಂತೆ ಸದಾ ಕಾಣಿಸಿಕೊಳ್ಳುತ್ತಿದ್ದ ಅವರಿಬ್ಬರ ನಡುವೆ ಯಾವ ವಿಚಾರಕ್ಕೆ ಮನಸ್ತಾಪ ಮೂಡಿತೋ ಗೊತ್ತಿಲ್ಲ. ಅಂತಿಮವಾಗಿ ಅವರು ತಮ್ಮ ದಾಂಪತ್ಯ ಜೀವನಕ್ಕೆ ಫುಲ್ ಸ್ಟಾಪ್ ಹಾಕಿದರು. ಈ ವಿಚ್ಛೇದನಕ್ಕೆ ಕಾರಣ ಏನು ಎಂಬುದನ್ನು ತಿಳಿಯಲು ಅಭಿಮಾನಿಗಳು ಕಾದಿದ್ದಾರೆ. ಆದರೆ ಈವರೆಗೂ ಆ ಕಾರಣದ ಬಗ್ಗೆ ಈ ಮಾಜಿ ದಂಪತಿ ಬಾಯಿ ಬಿಟ್ಟಿಲ್ಲ. ಈಗ ಸಮಂತಾ (Samantha) ಅವರು ಮೌನ ಮುರಿಯುವ ಕಾಲ ಹತ್ತಿರವಾಗಿದೆ ಎಂದೇ ಎಲ್ಲರೂ ಊಹಿಸುತ್ತಿದ್ದಾರೆ. ಕರಣ್ ಜೋಹರ್ (Karan Johar) ಎದುರಿನಲ್ಲಿ ಸಮಂತಾ ಅವರು ಎಲ್ಲವನ್ನೂ ಹೇಳಿಕೊಳ್ಳಬಹುದು ಎಂಬ ನಿರೀಕ್ಷೆ ಸೃಷ್ಟಿ ಆಗಿದೆ.
ಕರಣ್ ಜೋಹರ್ ಅವರು ನಡೆಸಿಕೊಡಲಿರುವ ‘ಕಾಫಿ ವಿತ್ ಕರಣ್ ಸೀಸನ್ 7’ ಕಾರ್ಯಕ್ರಮ ಜುಲೈ 7ರಿಂದ ಪ್ರಸಾರ ಆರಂಭಿಸಲಿದೆ. ಅನೇಕ ಸೆಲೆಬ್ರಿಟಿಗಳು ಈ ಟಾಕ್ ಶೋನಲ್ಲಿ ಭಾಗಿ ಆಗಲಿದ್ದಾರೆ. ಅತಿಥಿಗಳ ಪಟ್ಟಿಯಲ್ಲಿ ಸಮಂತಾ ರುತ್ ಪ್ರಭು ಕೂಡ ಇದ್ದಾರೆ. ಈ ಕಾರ್ಯಕ್ರಮದಲ್ಲಿ ಅವರು ಮದುವೆ ಬಗ್ಗೆ ಮಾತನಾಡಿದ್ದಾರೆ ಎಂಬುದಕ್ಕೆ ಟೀಸರ್ನಲ್ಲಿ ಸುಳಿವು ಸಿಕ್ಕಿದೆ.
ಸೆಲೆಬ್ರಿಟಿಗಳ ಬೋಲ್ಡ್ ಮಾತಿಗೆ ‘ಕಾಫಿ ವಿತ್ ಕರಣ್’ ಕಾರ್ಯಕ್ರಮ ಫೇಮಸ್. ಇಷ್ಟು ಸೀಸನ್ಗಳ ಕಾಲ ಟಿವಿಯಲ್ಲಿ ಈ ಶೋ ಪ್ರಸಾರವಾಗಿತ್ತು. ಈಗ ಮೊದಲ ಬಾರಿಗೆ 7ನೇ ಸೀಸನ್ ಅನ್ನು ನೇರವಾಗಿ ಒಟಿಟಿಯಲ್ಲಿ ಪ್ರಸಾರ ಮಾಡಲು ನಿರ್ಧರಿಸಲಾಗಿದೆ. ಸೆಲೆಬ್ರಿಟಿಗಳು ತಮ್ಮ ವೈಯಕ್ತಿಕ ಜೀವನದ ಅನೇಕ ಅಂಶಗಳನ್ನು ಕೂಡ ಕರಣ್ ಜೋಹರ್ ಎದುರು ಶೇರ್ ಮಾಡಿಕೊಂಡ ಉದಾಹರಣೆ ಇದೆ. ಹಾಗಾಗಿ ಸಮಂತಾ ಅವರು ವಿಚ್ಛೇದನಕ್ಕೆ ಕಾರಣ ಏನು ಎಂಬುದನ್ನು ತಿಳಿಸುತ್ತಾರೆ ಎಂದು ನಿರೀಕ್ಷಿಸಲಾಗುತ್ತಿದೆ.
ಸಮಂತಾ ಮತ್ತು ನಾಗ ಚೈತನ್ಯ ಅವರ ಡಿವೋರ್ಸ್ ಬಗ್ಗೆ ಅನೇಕ ಅಂತೆ-ಕಂತೆಗಳು ಹರಿದಾಡಿವೆ. ಯಾವುದು ಸತ್ಯ, ಯಾವುದು ಸುಳ್ಳು ಎಂಬುದು ನಿಖರವಾಗಿಲ್ಲ. ಅವುಗಳಿಗೆಲ್ಲ ಸಮಂತಾ ಅಥವಾ ನಾಗ ಚೈತನ್ಯ ಅವರೇ ಸ್ಪಷ್ಟನೆ ನೀಡಬೇಕಿದೆ. ‘ಮದುವೆ ಅಂದ್ರೆ ಕೆಜಿಎಫ್ ಥರ’ ಎಂದು ಕಾಫಿ ವಿತ್ ಕರಣ್ ಶೋನಲ್ಲಿ ಸಮಂತಾ ಹೇಳಿರುವುದು ಪ್ರೋಮೋ ಮೂಲಕ ಗೊತ್ತಾಗಿದೆ. ಅದರ ಅರ್ಥ ಏನು ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.
ಇದನ್ನೂ ಓದಿ: ಸಮಂತಾ, ಆಲಿಯಾ Etc..: ‘ಕಾಫಿ ವಿತ್ ಕರಣ್’ ಶೋಗೆ ಬರುವ ಸೆಲೆಬ್ರಿಟಿಗಳು ಇವರೇ
‘ನಿಮ್ಮ ಕೆಲಸದ ಮೇಲೆ ಗಮನಹರಿಸಿ’; ನಾಗ ಚೈತನ್ಯ ಫ್ಯಾನ್ಸ್ಗೆ ಎಚ್ಚರಿಕೆ ನೀಡಿದ ಸಮಂತಾ