Tata Sky Binge: ಟಾಟಾ ಸ್ಕೈ Bingeಯಲ್ಲಿ ಸಿಗಲಿದೆ ಹತ್ತು ಒಟಿಟಿ ಕಂಟೆಂಟ್ ಒಂದೇ ಕಡೆಗೆ; ಪ್ಲಾನ್ ಮತ್ತಿತರ ಮಾಹಿತಿ ಇಲ್ಲಿದೆ

|

Updated on: Jun 03, 2021 | 12:04 AM

Tata Sky Binge ಆ್ಯಪ್ ಬಗ್ಗೆ ನಿಮಗೆ ಗೊತ್ತಾ? ಇದು ಆ ಸಂಸ್ಥೆಯ ಮೊದಲ ಒಟಿಟಿ ಪ್ರಯತ್ನ. 10 ವಿವಿಧ ಒಟಿಟಿ ಕಂಟೆಂಟ್​ಗಳು ಇಲ್ಲಿ ಒಂದೇ ಕಡೆ ಸಿಗುತ್ತದೆ. ಎರಡು ಪ್ಲಾನ್​ಗಳಿದ್ದು, ಇದರ ಬಳಕೆ ಮತ್ತಿತರ ವಿವರಗಳು ಇಲ್ಲಿವೆ.

Tata Sky Binge: ಟಾಟಾ ಸ್ಕೈ Bingeಯಲ್ಲಿ ಸಿಗಲಿದೆ ಹತ್ತು ಒಟಿಟಿ ಕಂಟೆಂಟ್ ಒಂದೇ ಕಡೆಗೆ; ಪ್ಲಾನ್ ಮತ್ತಿತರ ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

ಟಾಟಾ ಸ್ಕೈನಿಂದ “Tata Sky Binge” ಆ್ಯಪ್ ಪರಿಚಯಿಸಲಾಗುತ್ತಿದೆ. ಇದು ಮೊಬೈಲ್ ಫೋನ್ ಬಳಸುವವರಿಗಾಗಿ ಇರುವಂಥ ಆ್ಯಪ್ ಆಗಿದೆ. ಇದರ ಹೊಸ ಪ್ಲಾನ್ 149 ರೂಪಾಯಿಯಿಂದ ಶುರುವಾಗುತ್ತದೆ. ಈ ಪ್ಲಾನ್​ ಜತೆಗೆ ಒಟಿಟಿ ಅಪ್ಲಿಕೇಷನ್ ಚಂದಾದಾರರು ಕೂಡ ಆಗಬಹುದು. Tata Sky Binge ಮೊಬೈಲ್ ಆ್ಯಪ್ ಎರಡು ಪ್ಲಾನ್​ಗಳನ್ನು ಪರಿಚಯಿಸಿದೆ. ಅದರಲ್ಲಿ ಒಂದು ರೂ. 299ರ ಪ್ಲಾನ್, ಮತ್ತೊಂದು ರೂ. 149ರ ಪ್ಲಾನ್. ಈ ಪೈಕಿ 299 ರೂಪಾಯಿಯ ಪ್ಲಾನ್​ನಲ್ಲಿ 10 ಒಟಿಟಿ ಅಪ್ಲಿಕೇಷನ್​ಗಳನ್ನು 1 ಟೀವಿ ಸ್ಕ್ರೀನ್ (ಇದು ಅಮೆಜಾನ್​ ಫೈರ್​ ಟಿವಿ ಸ್ಟಿಕ್- ಟಾಟಾ ಸ್ಕೈ ಎಡಿಷನ್ ಅಥವಾ Binge+ ಎಸ್​ಟಿಬಿ ಮೂಲಕ) ಮತ್ತು 3 ಮೊಬೈಲ್ ಸ್ಕ್ರೀನ್​ನಲ್ಲಿ ನೋಡಬಹುದು. ಇನ್ನು 149ರ ಮೊಬೈಲ್ ಓನ್ಲಿ ಪ್ಲಾನ್ ಮೂಲಕ Binge ಸೇವೆಯನ್ನು ಮೂರು ಮೊಬೈಲ್ ಸ್ಕ್ರೀನ್​ನಲ್ಲಿ ನೀಡುತ್ತದೆ. 7 ಒಟಿಟಿ ಆ್ಯಪ್​ಗಳ ಕಂಟೆಂಟ್​ಗಳನ್ನು ನೀಡುತ್ತದೆ. ಎಲ್ಲ ಹೊಸ Binge ಬಳಕೆದಾರರು ಯಾರು ಹೊಸದಾಗಿ ಮೊಬೈಲ್ ಆ್ಯಪ್ ಡೌನ್​ಲೋಡ್​ ಮಾಡುತ್ತಾರೋ ಅವರಿಗೆ ಏಳು ದಿನಗಳ ಉಚಿತ ಟ್ರಯಲ್ ದೊರೆಯುತ್ತದೆ.

ವೈಶಿಷ್ಟ್ಯ ಏನು?
ಟಾಟಾ ಸ್ಕೈ Binge ಮೊಬೈಲ್ ಆ್ಯಪ್ ಇದೆಯಲ್ಲಾ ಹಲವು ಸ್ಟ್ರೀಮಿಂಗ್ ಸರ್ವೀಸ್​ಗಳ ಮೂಲಕ ಕಂಟೆಂಟ್​ಗಳನ್ನು ವಿಭಾಗ ಮಾಡುತ್ತದೆ. ಹೊಸ ಬಿಡುಗಡೆ, ಜನಪ್ರಿಯ ಸಿನಿಮಾಗಳು, ಈಗ ಟ್ರೆಂಡಿಂಗ್ ಮುಂತಾದ ರೀತಿಯಲ್ಲಿ ವಿಭಾಗ ಮಾಡಿ, ಹುಡುಕುವುದಕ್ಕೆ ಸಲೀಸು ಮಾಡಿಕೊಡುತ್ತದೆ. ಕಂಟೆಂಟ್ ಭಾಷೆ, ಆ್ಯಪ್ ರೇಲ್ಸ್ ಮುಂತಾದವುಗಳ ಮೂಲಕವೂ ವಿಭಾಗ ಮಾಡಲಾಗುತ್ತದೆ. ಸ್ಕ್ರೀನ್​ನ ಅಡಿಯಲ್ಲಿ ಇರುವ ಟ್ಯಾಬ್ ಬಾರ್ ಹೋಮ್​ ಸ್ಕ್ರೀನ್​ಗೆ, ಸರ್ಚ್ ಹಾಗೂ ವಾಚ್​ಲಿಸ್ಟ್​ಗೆ ಸಂಪರ್ಕ ನೀಡುತ್ತದೆ.

ಟಾಟಾ ಸ್ಕೈ Binge 10 ಒಟಿಟಿ ಅಪ್ಲಿಕೇಷನ್​ಗಳಿಂದ ಕಂಟೆಂಟ್​ಗಳನ್ನು ಒಗ್ಗೂಡಿಸುತ್ತದೆ. ಒಂದೇ ಸಬ್​ಸ್ಕ್ರಿಪ್ಷನ್ ಮತ್ತು ಯೂನಿಫೈಡ್​ ಇಂಟರ್​ಫೇಸ್​​ನಲ್ಲಿ ಸಹಭಾಗಿ ಆ್ಯಪ್​ಗಳನ್ನು ಬಳಸಲು ಅನುವು ಮಾಡಿಕೊಡುತ್ತದೆ. ಡಿಸ್ನಿ+ ಹಾಟ್​ಸ್ಟಾರ್ ಪ್ರೀಮಿಯಂ, ಝೀ5, ಸನ್​ನೆಕ್ಸ್ಟ್, ಹಂಗಾಮ ಪ್ಲೇ, ಎರೋಸ್ ನೌ, ಶಿಮಾರೂಮೀ, ವೂಟ್ ಸೆಲೆಕ್ಟ್, ವೂಟ್ ಕಿಡ್ಸ್, ಸೋನಿLIV ಮತ್ತು ಕ್ಯೂರಿಯಾಸಿಟಿಸ್ಟ್ರೀಮ್​ ನೋಡಬಹುದು. ಹೆಚ್ಚುವರಿ ಪ್ರೈಮ್ ಸಬ್​ಸ್ಕ್ರಿಪ್ಷನ್ ಜತೆಗೆ ದೊಡ್ಡ ತೆರೆಯ ಮೇಲೆ ಅಮೆಜಾನ್ ಪ್ರೈಮ್ ವಿಡಿಯೋ ನೋಡಬಹುದು.

ಈ ಬಿಡುಗಡೆ ಬಗ್ಗೆ ಟಾಟಾ ಸ್ಕೈ ಮುಖ್ಯ ಕಂಟೆಂಟ್ ಮತ್ತು ವಾಣಿಜ್ಯ ಅಧಿಕಾರಿ ಪಲ್ಲವಿ ಪುರಿ ಮಾತನಾಡಿ, ಈ ಆ್ಯಪ್ ಬಿಡುಗಡೆ ಮೂಲಕ ದೊಡ್ಡ ಸಂಖ್ಯೆಯಲ್ಲಿ ಇರುವ ಪ್ರೇಕ್ಷಕರಿಗೆ ನಮ್ಮ ಉತ್ಪನ್ನವನ್ನು ತಲುಪಿಸಲು ಯತ್ನಿಸುತ್ತಿದ್ದೇವೆ. ನಮ್ಮ ಚಂದಾದಾರರು ತಮ್ಮ ಇಷ್ಟದ ಒಟಿಟಿ ಕಂಟೆಂಟ್ ಅನ್ನು ದೊಡ್ಡ ಹಾಗೂ ಸಣ್ಣ ತೆರೆ, ಮನೆ ಅಥವಾ ಎಲ್ಲಿ ಹೋಗುತ್ತಾರೋ ಅಲ್ಲಿ, ಯೂನಿಫೈಡ್ ಇಂಟರ್​ಫೇಸ್, ಒಂದು ಸಬ್​ಸ್ಕ್ರಿಪ್ಷನ್ ಮತ್ತು ಸೈನ್​ ಆನ್​ನಲ್ಲಿ ನೋಡಬಹುದು ಎಂದಿದ್ದಾರೆ. ಮುಂದುವರಿದು, ಅಮೆಜಾನ್ ಫೈರ್ ಟಿವಿ ಸ್ಟಿಕ್​ನಲ್ಲಿ ಟಾಟಾ ಸ್ಕೈ Binge ಎಂಬುದು ಒಟಿಟಿಯಲ್ಲಿ ಟಾಟಾ ಸ್ಕೈನ ಮೊದಲ ಹೆಜ್ಜೆ. ಮುಂದಿನ ಹೆಜ್ಜೆಯಾಗಿ ಆಂಡ್ರಾಯಿಡ್ ಟಿವಿ ಸೆಟ್​ ಟಾಪ್​ ಬಾಕ್ಸ್ ಪರಿಚಯಿಸುವ ಉದ್ದೇಶ ಇದೆ. ಟಾಟಾ ಸ್ಕೈ Binge ಮೊಬೈಲ್ ಅಪ್ಲಿಕೇಷನ್​ನಲ್ಲೂ ದೊರಕಿಸುವ ಮೂಲಕ ಯಾರಿಗೆ ತಮ್ಮ ವೈಯಕ್ತಿಕ ಸಾಧನದಲ್ಲಿ ಅಥವಾ ತಾವು ಹೋದ ಕಡೆಯಲ್ಲಿ ಒಟಿಟಿ ಕಂಟೆಂಟ್ ಸಿಗಬೇಕು ಅಂದುಕೊಳ್ಳುತ್ತಾರೋ ಅಂಥವರಿಗೂ ಒದಗಿಸದಂತಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Amazon Prime: ಅಮೆಜಾನ್ ಪ್ರೈಮ್​ನಿಂದ ಭರ್ಜರಿ ಆಫರ್; ಶೇ 50ರಷ್ಟು ರಿಯಾಯಿತಿ ಜತೆ ಸಿಗುತ್ತದೆ ಸಬ್​ಸ್ಕ್ರಿಪ್ಷನ್

(Tata Sky Binge OTT platform introduced. Here is the details of plans, features)