ವೆಬ್ ಸರಣಿ ಆಗುತ್ತಿದೆ ಉತ್ತರಾಖಂಡದ ರೋಚಕ ರಕ್ಷಣಾ ಕಾರ್ಯಾಚರಣೆ
ಜನಪ್ರಿಯ ವ್ಯಕ್ತಿಯ ಜೀವನವನ್ನು ಸಿನಿಮಾ ಮಾಡಲಾಗುತ್ತದೆ. ಇತ್ತೀಚೆಗೆ ರಾಜಕೀಯ ವ್ಯಕ್ತಿಗತಳ ಬಗ್ಗೆ ಸಿನಿಮಾ ಮಾಡುವ ಪ್ರತೀತಿ ಹೆಚ್ಚಾಗಿದೆ. ಆದರೆ ನಿಜ ಘಟನೆಗಳನ್ನು ಸಿನಿಮಾ ಮಾಡುವುದು ಅಪರೂಪ. ಇದೀಗ ಅಂಥಹುದೇ ಒಂದು ಪ್ರಯತ್ನ ನಡೆಯುತ್ತಿದೆ. ಉತ್ತರಾಖಂಡದಲ್ಲಿ 2023ರಲ್ಲಿ ನಡೆದ ಒಂದು ರೋಚಕ ರಕ್ಷಣಾ ಕಾರ್ಯವನ್ನು ಇದೀಗ ವೆಬ್ ಸರಣಿಯನ್ನಾಗಿ ನಿರ್ಮಾಣ ಮಾಡಲಾಗುತ್ತಿದೆ.

ಮುಖ್ಯಾಂಶಗಳು
- ಉತ್ತರಾಖಂಡದ ರೋಚಕ ರಕ್ಷಣಾ ಕಾರ್ಯಾಚರಣೆ
- ವೆಬ್ ಸರಣಿ ಆಗುತ್ತಿರುವ ರಕ್ಷಣಾ ಕಾರ್ಯಾಚರಣೆ
- ಟಬು ಮುಖ್ಯ ಪಾತ್ರದಲ್ಲಿ ನಟನೆ ಮಾಡಲಿದ್ದಾರೆ
ಹಾಲಿವುಡ್ಗೆ ಹೋಲಿಸಿದರೆ, ಭಾರತದಲ್ಲಿ ನಿಜ ಜೀವನದ ಘಟನೆಗಳನ್ನು ಸಿನಿಮಾ ಅಥವಾ ವೆಬ್ ಸರಣಿ ಮಾಡುವ ಯತ್ನಗಳು ನಡೆಯುವುದು ತುಸು ಕಡಿಮೆ. ಜನಪ್ರಿಯ ವ್ಯಕ್ತಿಯ ಜೀವನವನ್ನು ಸಿನಿಮಾ ಮಾಡಲಾಗುತ್ತದೆ. ಇತ್ತೀಚೆಗೆ ರಾಜಕೀಯ ವ್ಯಕ್ತಿಗತಳ ಬಗ್ಗೆ ಸಿನಿಮಾ ಮಾಡುವ ಪ್ರತೀತಿ ಹೆಚ್ಚಾಗಿದೆ. ಆದರೆ ನಿಜ ಘಟನೆಗಳನ್ನು ಸಿನಿಮಾ ಮಾಡುವುದು ಅಪರೂಪ. ಇದೀಗ ಅಂಥಹುದೇ ಒಂದು ಪ್ರಯತ್ನ ನಡೆಯುತ್ತಿದೆ. ಉತ್ತರಾಖಂಡದಲ್ಲಿ 2023ರಲ್ಲಿ ನಡೆದ ಒಂದು ರೋಚಕ ರಕ್ಷಣಾ ಕಾರ್ಯವನ್ನು ಇದೀಗ ವೆಬ್ ಸರಣಿಯನ್ನಾಗಿ ನಿರ್ಮಾಣ ಮಾಡಲಾಗುತ್ತಿದೆ.
ಉತ್ತರಾಖಂಡದಲ್ಲಿ 2023ರಲ್ಲಿ ಸುರಂಗ ಕೊರೆಯುವ ಸಂದರ್ಭದಲ್ಲಿ ನಡೆದ ಅವಘಡದಲ್ಲಿ 41 ಮಂದಿ ಕಾರ್ಮಿಕರು ಸುರಂಗದಲ್ಲಿ ಸಿಲುಕಿಕೊಂಡಿದ್ದರು. ಹಲವು ದಿನಗಳ ಸತತ ಪ್ರಯತ್ನದ ಬಳಿಕ ಕಾರ್ಮಿಕರನ್ನು ಜೀವಂತ ರಕ್ಷಿಸಲಾಗಿತ್ತು. ಅದೇ ಘಟನೆಯನ್ನು ಆಧರಿಸಿ ಇದೀಗ ವೆಬ್ ಸರಣಿ ನಿರ್ಮಾಣ ಮಾಡಲಾಗುತ್ತಿದೆ. ಯಶ್ ರಾಜ್ ಎಂಟರ್‌ಟೈನ್‌ಮೆಂಟ್ ಈ ಒಂದು ಪ್ರಯತ್ನಕ್ಕೆ ಕೈ ಹಾಕಿದ್ದು, ವೆಬ್ ಸರಣಿಗೆ ‘ಟನಲ್ ಮೆನ್’ ಎಂದು ಹೆಸರಿಡಲಾಗಿದೆ. ನಟಿ ಟಬು, ಈ ವೆಬ್ ಸರಣಿಯ ಪ್ರಮುಖ ಪಾತ್ರದಲ್ಲಿ ನಟನೆ ಮಾಡುತ್ತಿದ್ದು, ವೆಬ್ ಸರಣಿಯು ನೆಟ್ಫ್ಲಿಕ್ಸ್ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ.
2023 ರ ನವೆಂಬರ್‌ನಲ್ಲಿ, ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ನಡೆದ ಸಿಲ್ಕ್ಯಾರಾ ಸುರಂಗ ಕುಸಿದಿತ್ತು. ಇದರಿಂದಾಗಿ ಸುರಂಗದಲ್ಲಿ 41 ಮಂದಿ ಕಾರ್ಮಿಕರು ಸಿಲುಕಿಕೊಂಡಿದ್ದರು. ಈ ಘಟನೆ ಇಡೀ ದೇಶದ ಗಮನ ಸೆಳೆದಿತ್ತು. ಕಾರ್ಮಿಕರನ್ನು ರಕ್ಷಿಸಲು ‘ಆಫರೇಷನ್ ಜಿಂದಗಿ’ ಹೆಸರಲ್ಲಿ ಕಾರ್ಯಾಚರಣೆ ಮಾಡಲಾಯ್ತು. ಬೆಟ್ಟದ ಬುಡದಲ್ಲಿ ಸುರಂಗ ಕೊರೆಯುವಾಗ ನಡೆದ ಕುಸಿತದಿಂದಾಗಿ ರಕ್ಷಣಾ ಕಾರ್ಯ ಬಹಳ ನಿಧಾನವಾಗಿತ್ತು. ಒಳಗೆ ಸಿಲುಕಿಕೊಂಡ ಕಾರ್ಮಿಕರ ಸಂಪರ್ಕ ಸಹ ಬಹಳ ಕಷ್ಟಕರವಾಗಿತ್ತು. ಬರೋಬ್ಬರಿ 17 ದಿನಗಳ ಕಾಲ ಎಲ್ಲ ಕಾರ್ಮಿಕರು ಸಿಲುಕಿಕೊಂಡಿದ್ದರು. ಕೊನೆಗೆ ‘ರ್ಯಾಟ್ ಮೈನರ್ಸ್’ ಅನ್ನು ಕರೆಸಿ, ಸರ್ಕಾರವೇ ನಿಷೇಧಿಸಿರುವ ರ್ಯಾಟ್ ಮೈನಿಂಗ್ ತಂತ್ರಗಳನ್ನು ಬಳಸಿ ಸಿಲುಕಿಕೊಂಡಿದ್ದ ಕಾರ್ಮಿಕರನ್ನು ರಕ್ಷಿಸಲಾಯ್ತು.
ಇದನ್ನೂ ಓದಿ:ಹಾಲಿವುಡ್ಗೆ ಹೊರಟರಾ ಬಾಲಿವುಡ್ ನಟ ಹೃತಿಕ್ ರೋಷನ್?
ಈ ರಕ್ಷಣಾ ಕಾರ್ಯವು ಹಲವಾರು ಸವಾಲು, ಆತಂಕ, ಅನಿಶ್ಚಿತತೆಗಳನ್ನು ಒಳಗೊಂಡಿತ್ತು. ಹಲವಾರು ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಹಲವು ಬೇರೆ ಬೇರೆ ಇಲಾಖೆಗಳ ಸಿಬ್ಬಂದಿ ಈ ರಕ್ಷಣಾ ಕಾರ್ಯದಲ್ಲಿ ಕೈ ಜೋಡಿಸಿದ್ದರು. ಈ ರೋಚಕ ರಕ್ಷಣಾ ಕಾರ್ಯವನ್ನು ಇದೀಗ ವೆಬ್ ಸರಣಿಯಾಗಿ ನಿರ್ಮಿಸಲಾಗುತ್ತಿದೆ. ಈ ವೆಬ್ ಸರಣಿಯನ್ನು ಅಭಿಷ್ಕಾ ಪಂಡಿತ್ ಮತ್ತು ಮನನ್ ರಾವತ್ ನಿರ್ದೇಶನ ಮಾಡಲಿದ್ದಾರೆ. ವೆಬ್ ಸರಣಿಯಲ್ಲಿ ಟಬು ಜೊತೆಗೆ ಆರ್ ಮಾಧವನ್, ಸಂದೀಪ್ ಕೃಷ್ಣ, ಮಹೇಶ್ ಮಂಜ್ರೇಕರ್, ಅಭಿಷೇಕ್ ಬ್ಯಾನರ್ಜಿ ಸಹ ನಟನೆ ಮಾಡಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




