AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ವಾರಣಾಸಿ’ ಬಳಿಕ ಹಾಲಿವುಡ್​​ ಸಿನಿಮಾ ನಿರ್ದೇಶಿಸಲಿದ್ದಾರೆ ರಾಜಮೌಳಿ

ರಾಜಮೌಳಿ, ‘ಆರ್​​ಆರ್​​ಆರ್’ ಸಿನಿಮಾ ವಿದೇಶದಲ್ಲಿ ಭಾರಿ ಜನಪ್ರೀತಿ ಗಳಿಸಿದ ಬಳಿಕವಂತೂ ಅವರಿಗೆ ಹಾಲಿವುಡ್​​ನಿಂದ ಹಲವು ಆಫರ್​​ಗಳು ದೊರೆತವು. ಹಾಲಿವುಡ್​​ನ ಲೆಜೆಂಡರಿ ನಿರ್ದೇಶಕರುಗಳಾದ ಜೇಮ್ಸ್ ಕ್ಯಾಮರನ್ ಮತ್ತು ಸ್ಟಿವನ್ ಸ್ಪೀಲ್​​ಬರ್ಗ್​​ ಅಂಥಹವರೇ ಖುದ್ದು ರಾಜಮೌಳಿಗೆ ಹಾಲಿವುಡ್​​ ಆಫರ್​ ನೀಡಿದರು. ಆದರೆ ಇದೀಗ ಖುದ್ದು ರಾಜಮೌಳಿ ಅವರೇ ಹೇಳಿರುವಂತೆ ಅವರು ಹಾಲಿವುಡ್​​ಗೆ ಹೋಗುತ್ತಿದ್ದಾರಂತೆ.

‘ವಾರಣಾಸಿ’ ಬಳಿಕ ಹಾಲಿವುಡ್​​ ಸಿನಿಮಾ ನಿರ್ದೇಶಿಸಲಿದ್ದಾರೆ ರಾಜಮೌಳಿ
Ss Rajamouli
ಮಂಜುನಾಥ ಸಿ.
|

Updated on:Nov 13, 2026 | 11:16 AM

Share

ಮುಖ್ಯಾಂಶಗಳು

  • ರಾಜಮೌಳಿ ಹಾಲಿವುಡ್​​ಗೆ ಹೋಗಲಿದ್ದಾರಂತೆ
  • ರಾಜಮೌಳಿ ಪ್ರಸ್ತುತ ‘ವಾರಣಾಸಿ’ ಚಿತ್ರೀಕರಣ ಮಾಡುತ್ತಿದ್ದಾರೆ
  • ಹಾಲಿವುಡ್ ಸಿನಿಮಾ ನಿರ್ದೇಶಿಸುವುದು ಖಾತ್ರಿ ಎಂದಿದ್ದಾರೆ

ರಾಜಮೌಳಿ, ಭಾರತದ ಟಾಪ್ ನಿರ್ದೇಶಕ. ಭಾರತೀಯ ಚಿತ್ರರಂಗಕ್ಕೆ ವಿಶ್ವದೆಲ್ಲೆಡೆ ಗೌರವ ಗಳಿಸಿಕೊಟ್ಟ ನಿರ್ದೇಶಕ. ಭಾರತದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ರಾಜಮೌಳಿ ಅವರ ಸಿನಿಮಾಕ್ಕೆ ಕಾಯುವ ಅಭಿಮಾನಿಗಳಿದ್ದಾರೆ. ರಾಜಮೌಳಿ, ‘ಆರ್​​ಆರ್​​ಆರ್’ ಸಿನಿಮಾ ವಿದೇಶದಲ್ಲಿ ಭಾರಿ ಜನಪ್ರೀತಿ ಗಳಿಸಿದ ಬಳಿಕವಂತೂ ಅವರಿಗೆ ಹಾಲಿವುಡ್​​ನಿಂದ ಹಲವು ಆಫರ್​​ಗಳು ದೊರೆತವು. ಹಾಲಿವುಡ್​​ನ ಲೆಜೆಂಡರಿ ನಿರ್ದೇಶಕರುಗಳಾದ ಜೇಮ್ಸ್ ಕ್ಯಾಮರನ್ ಮತ್ತು ಸ್ಟಿವನ್ ಸ್ಪೀಲ್​​ಬರ್ಗ್​​ ಅಂಥಹವರೇ ಖುದ್ದು ರಾಜಮೌಳಿಗೆ ಹಾಲಿವುಡ್​​ ಆಫರ್​ ನೀಡಿದರು. ಆದರೆ ಇದೀಗ ಖುದ್ದು ರಾಜಮೌಳಿ ಅವರೇ ಹೇಳಿರುವಂತೆ ಅವರು ಹಾಲಿವುಡ್​​ಗೆ ಹೋಗುತ್ತಿದ್ದಾರಂತೆ.

ರಾಜಮೌಳಿ ಪ್ರಸ್ತುತ ‘ವಾರಣಾಸಿ’ ಸಿನಿಮಾ ನಿರ್ದೇಶಿಸುತ್ತಿದ್ದು, ಸಿನಿಮಾದ ಚಿತ್ರೀಕರಣ ಬಹುತೇಕ ಅಂತ್ಯವಾಗಿದೆ. ಸಿನಿಮಾ ಮುಂದಿನ ಏಪ್ರಿಲ್ ತಿಂಗಳಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ. ಇದರ ನಡುವೆ ರಾಜಮೌಳಿ ಅವರು ತಾವು ಹಾಲಿವುಡ್ ಸಿನಿಮಾ ನಿರ್ದೇಶಿಸುವ ಇಚ್ಛೆ ಹೊಂದಿರುವುದಾಗಿ, ಹಾಗೂ ಖಂಡಿತ ತಾವು ಹಾಲಿವುಡ್ ಸಿನಿಮಾ ಒಂದನ್ನು ನಿರ್ದೇಶನ ಮಾಡುವುದಾಗಿ ರಾಜಮೌಳಿ ಹೇಳಿದ್ದಾರೆ. ತಾವೇಕೆ ಹಾಲಿವುಡ್​​ನಲ್ಲಿ ಕೆಲಸ ಮಾಡಲು ಉತ್ಸುಕರಾಗಿರುವುದಾಗಿಯೂ ವಿವರಿಸಿದ್ದಾರೆ.

ಇಂಗ್ಲೀಷ್ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ರಾಜಮೌಳಿ, ‘ಆರ್​​ಆರ್​​ಆರ್’ ಸಿನಿಮಾದ ಬಳಿಕ ನನಗೆ ಹಲವು ಆಫರ್​​ಗಳು ಬಂದವು, ಈಗಲೂ ಸಹ ಆ ಆಫರ್​​ಗಳು ಓಪನ್ ಆಗಿವೆ. ಹಾಲಿವುಡ್​​ನಲ್ಲಿ ಸಿನಿಮಾ ಮಾಡುವ ಆಸೆ ನನಗೂ ಇದೆ. ಹಾಲಿವುಡ್​​ನವರ ಕೆಲಸದ ಬದ್ಧತೆ, ಕೆಲಸ ಮಾಡುವ ರೀತಿ ನನಗೆ ಬಹಳ ಇಷ್ಟವಾಯ್ತು. ಅವರಿಂದ ನಾನೂ ಕಲಿಯಬಹುದೆಂಬ ಆಸೆ ನನಗೆ ಇದೆ’ ಎಂದಿದ್ದಾರೆ.

ಇದನ್ನೂ ಓದಿ:‘ವಾರಣಾಸಿ’ ಸಿನಿಮಾದ ಒಳಗಿದೆ ಹಲವು ಸಿನಿಮಾ, ರಾಜಮೌಳಿ ಹೇಳಿದ್ದೇನು?

ಮುಂದುವರೆದು ಮಾತನಾಡಿ, ‘ಆರ್​​ಆರ್​​ಆರ್’ ಸಿನಿಮಾ ರಿಲೀಸ್ ಆದಾಗ ನನಗೆ ಹಾಲಿವುಡ್​​ನಿಂದ ಹಲವು ಆಫರ್​​ಗಳು ಬಂದವು. ಕೆಲ ದೊಡ್ಡ ನಿರ್ಮಾಣ ಸಂಸ್ಥೆಗಳೊಟ್ಟಿಗೆ ನಾನು ಮಾತನಾಡಿದೆ. ಆದರೆ ಆ ಸಮಯದ ವೇಳೆಗೆಲ್ಲ ನಾನು ‘ವಾರಣಾಸಿ’ ಸಿನಿಮಾದ ಚಿತ್ರೀಕರಣ ಶುರು ಮಾಡಿದ್ದೆ. ನನಗೆ ಎರಡು ಮೂರು ಸಿನಿಮಾಗಳ ಮೇಲೆ ಒಟ್ಟಿಗೆ ಕೆಲಸ ಮಾಡಲು ಆಗುವುದಿಲ್ಲ. ಒಂದು ಸಿನಿಮಾ ಮುಗಿಸಿದ ಮೇಲಷ್ಟೆ ನಾನು ಹೊಸ ಸಿನಿಮಾದ ಮೇಲೆ ಗಮನ ಹರಿಸಬಹುದು. ಹಾಗಾಗಿ ಆಗ ಆಫರ್​​ಗಳನ್ನು ಒಪ್ಪಿಕೊಳ್ಳಲಿಲ್ಲ. ಒಮ್ಮೆ ‘ವಾರಣಾಸಿ’ ಸಿನಿಮಾ ಮುಗಿದ ಮೇಲೆ ನಾನು ಹಾಲಿವುಡ್ ಪ್ರಾಜೆಕ್ಟ್ ಬಗ್ಗೆ ಗಮನ ಹರಿಸುವೆ’ ಎಂದಿದ್ದಾರೆ ರಾಜಮೌಳಿ.

ರಾಜಮೌಳಿ ಪ್ರಸ್ತುತ ‘ವಾರಣಾಸಿ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾನಲ್ಲಿ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ನಟನೆ ಮಾಡಿದ್ದಾರೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಚಾಲ್ತಿಯಲ್ಲಿದೆ. ಸಿನಿಮಾ ಏಪ್ರಿಲ್ ತಿಂಗಳಲ್ಲಿ ರಿಲೀಸ್ ಆಗಲಿದೆ. ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಗಳಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:13 am, Fri, 13 November 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಪ್ರಶಾಂತಿ ಕುಟೀರ ಸುವರ್ಣ ಮಹೋತ್ಸವದಲ್ಲಿ ಮೋದಿ ಭಾಗಿ ನೇರಪ್ರಸಾರ
ಪ್ರಶಾಂತಿ ಕುಟೀರ ಸುವರ್ಣ ಮಹೋತ್ಸವದಲ್ಲಿ ಮೋದಿ ಭಾಗಿ ನೇರಪ್ರಸಾರ
ಮೋದಿ ಸಂಚರಿಸುವಲ್ಲೆಲ್ಲ ಕೈ-ಕಮಲ ಕಾರ್ಯಕರ್ತರ ಫ್ಲೆಕ್ಸ್​ಗಳು ಝಗಮಗ!
ಮೋದಿ ಸಂಚರಿಸುವಲ್ಲೆಲ್ಲ ಕೈ-ಕಮಲ ಕಾರ್ಯಕರ್ತರ ಫ್ಲೆಕ್ಸ್​ಗಳು ಝಗಮಗ!
ಇಂದು ಈ ರಾಶಿಯವರು ಅತಿಯಾಗಿ ನಂಬಿದವರಿಂದ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಅತಿಯಾಗಿ ನಂಬಿದವರಿಂದ ಮೋಸ ಹೋಗುವ ಸಾಧ್ಯತೆ
ಡಾ.ರಮ್ಯಾ ಬರೆದಿರುವ ‘ಚಲಿಸುವ ಬಂಡೆ’ ಪುಸ್ತಕದಲ್ಲಿ ಯಾವೆಲ್ಲಾ ವಿಚಾರಗಳಿವೆ?
ಡಾ.ರಮ್ಯಾ ಬರೆದಿರುವ ‘ಚಲಿಸುವ ಬಂಡೆ’ ಪುಸ್ತಕದಲ್ಲಿ ಯಾವೆಲ್ಲಾ ವಿಚಾರಗಳಿವೆ?
ಲೀಲಾವತಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ವಿನೋದ್ ರಾಜ್ ಬೇಸರ
ಲೀಲಾವತಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ವಿನೋದ್ ರಾಜ್ ಬೇಸರ
ಸರ್ಕಾರಿ ಶಾಲಾ ಮಕ್ಕಳಿಗೆ ಇನ್ಮುಂದೆ ಹೊಸ ವಿನ್ಯಾಸದ ಸಮವಸ್ತ್ರ?
ಸರ್ಕಾರಿ ಶಾಲಾ ಮಕ್ಕಳಿಗೆ ಇನ್ಮುಂದೆ ಹೊಸ ವಿನ್ಯಾಸದ ಸಮವಸ್ತ್ರ?
ಶಿವರಾಜ್ ಕೆಆರ್ ಪೇಟೆ ಹೊಸ ಸಿನಿಮಾ ‘ಹವಾಮಾನ ವರದಿ’ ಶುರುವಾಗಿದ್ದು ಹೀಗೆ..
ಶಿವರಾಜ್ ಕೆಆರ್ ಪೇಟೆ ಹೊಸ ಸಿನಿಮಾ ‘ಹವಾಮಾನ ವರದಿ’ ಶುರುವಾಗಿದ್ದು ಹೀಗೆ..
ಬೆಂಗಳೂರಿನ ಮನಮೋಹಕ ತಾಣ ನಲ್ಲಿಗುಡ್ಡೆ ಅಭಿವೃದ್ಧಿಗೆ ಸರ್ಕಾರದ ಒತ್ತು
ಬೆಂಗಳೂರಿನ ಮನಮೋಹಕ ತಾಣ ನಲ್ಲಿಗುಡ್ಡೆ ಅಭಿವೃದ್ಧಿಗೆ ಸರ್ಕಾರದ ಒತ್ತು
‘ಹವಾಮಾನ ವರದಿ’ ಸಿನಿಮಾ ಬಗ್ಗೆ ನಾಯಕಿ ನಿರೀಕ್ಷಾ ರಾವ್ ಮಾತು: ವಿಡಿಯೋ
‘ಹವಾಮಾನ ವರದಿ’ ಸಿನಿಮಾ ಬಗ್ಗೆ ನಾಯಕಿ ನಿರೀಕ್ಷಾ ರಾವ್ ಮಾತು: ವಿಡಿಯೋ
'ಮೈಲೇಜ್ ಕುಸಿತಕ್ಕೆ ಎಥೆನಾಲ್ ಅಲ್ಲ, ಗುಂಡಿ ಬಿದ್ದ ರಸ್ತೆಗಳೇ ಕಾರಣ': ಅಶೋಕ್
'ಮೈಲೇಜ್ ಕುಸಿತಕ್ಕೆ ಎಥೆನಾಲ್ ಅಲ್ಲ, ಗುಂಡಿ ಬಿದ್ದ ರಸ್ತೆಗಳೇ ಕಾರಣ': ಅಶೋಕ್