‘ರಾಮಾಯಣ’ ಸಿನಿಮಾ ಬಗ್ಗೆ ರಾಜಮೌಳಿ ವಿಮರ್ಶೆ, ಯಶ್ ನಟನೆ ಬಗ್ಗೆ ಹೇಳಿದ್ದೇನು?
ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ: ಭಾಗ 1’ ಸಿನಿಮಾವನ್ನು ರಾಜಮೌಳಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಟ್ವಿಟ್ಟರ್ ನಲ್ಲಿ ವಿಮರ್ಶೆ ಹಂಚಿಕೊಂಡಿರುವ ನಿತೇಶ್ ತಿವಾರಿ, ‘ರಾಮಾಯಣ’ ಚಿತ್ರದ ಬೃಹತ್ ವ್ಯಾಪ್ತಿ ಮತ್ತು ದೊಡ್ಡ ಪರದೆಯ ಮೇಲಿನ ದೃಶ್ಯ ಕಣ್ತುಂಬಿಕೊಳ್ಳಲು ಅದ್ಭುತವಾಗಿದೆ. ರಾಮನಾಗಿ ರಣಬೀರ್, ವಿಶೇಷವಾಗಿ ವನವಾಸದ ನಂತರದ ಭಾಗಗಳಲ್ಲಿ, ಸೌಮ್ಯರಾಗಿಯೂ ಅತ್ಯಂತ ಅದ್ಭುತವಾಗಿಯೂ ಕಾಣುತ್ತಾರೆ. ಯಶ್ ರಾವಣನ ಪಾತ್ರದಲ್ಲಿ ಭಯಾನಕವಾಗಿ ನಟಿಸಿದ್ದಾರೆ. ಸಾಯಿ ಪಲ್ಲವಿ ಸೀತೆಯಾಗಿ ಕೃಪಾ ಪೂರ್ಣವಾಗಿ ಕಾಣುತ್ತಾರೆ. ಪ್ರೀ ಕ್ಲೈಮ್ಯಾಕ್ಸ್ ಮತ್ತು ಕ್ಲೈಮ್ಯಾಕ್ಸ್ ಅದರ ಪ್ರತಿಯೊಂದು ಭಾಗವೂ ನನಗೆ ತುಂಬಾ ಇಷ್ಟವಾಯಿತು’ ಎಂದಿದ್ದಾರೆ.

ರಣ್ಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ನಟಿಸಿರುವ ‘ರಾಮಾಯಣ’ ಸಿನಿಮಾ ಇಂದು (ನವೆಂಬರ್ 05) ರಿಲೀಸ್ ಆಗಿದೆ. ಸಿನಿಮಾಕ್ಕೆ ಅದ್ಭುತ ಪ್ರತಿಕ್ರಿಯೆ ಪ್ರೇಕ್ಷಕರಿಂದ ವ್ಯಕ್ತವಾಗಿದೆ. ಸಿನಿಮಾ ನೋಡಿದ ಬಹುತೇಕರು ಸಿನಿಮಾ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಅದ್ಧೂರಿ ಸಿನಿಮಾ ನೋಡಿಲ್ಲ, ಇಷ್ಟು ಅದ್ಧೂರಿ ವಿಎಫ್ಎಕ್ಸ್ ಭಾರತದ ಯಾವ ಸಿನಿಮಾನಲ್ಲೂ ನೋಡಿಲ್ಲ ಎಂಬ ಮಾತುಗಳು ಸಹ ಕೇಳಿ ಬರುತ್ತಿದೆ. ಇದರ ಜೊತೆಗೆ ಸಿನಿಮಾನಲ್ಲಿ ನಟಿಸಿರುವ ಕಲಾವಿದರ ನಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಲವು ಸಿನಿಮಾ ಸೆಲೆಬ್ರಿಟಿಗಳು ಸಹ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದು, ಇದೀಗ ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ಸಹ ‘ರಾಮಾಯಣ’ ಸಿನಿಮಾ ವೀಕ್ಷಿಸಿದ್ದು, ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯವನ್ನು ಟ್ವೀಟ್ ಮಾಡಿದ್ದಾರೆ.
ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ: ಭಾಗ 1’ ಸಿನಿಮಾವನ್ನು ರಾಜಮೌಳಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಟ್ವಿಟ್ಟರ್ ನಲ್ಲಿ ವಿಮರ್ಶೆ ಹಂಚಿಕೊಂಡಿರುವ ನಿತೇಶ್ ತಿವಾರಿ, ‘ರಾಮಾಯಣ’ ಚಿತ್ರದ ಬೃಹತ್ ವ್ಯಾಪ್ತಿ ಮತ್ತು ದೊಡ್ಡ ಪರದೆಯ ಮೇಲಿನ ದೃಶ್ಯ ಕಣ್ತುಂಬಿಕೊಳ್ಳಲು ಅದ್ಭುತವಾಗಿದೆ. ರಾಮನಾಗಿ ರಣಬೀರ್, ವಿಶೇಷವಾಗಿ ವನವಾಸದ ನಂತರದ ಭಾಗಗಳಲ್ಲಿ, ಸೌಮ್ಯರಾಗಿಯೂ ಅತ್ಯಂತ ಅದ್ಭುತವಾಗಿಯೂ ಕಾಣುತ್ತಾರೆ. ಯಶ್ ರಾವಣನ ಪಾತ್ರದಲ್ಲಿ ಭಯಾನಕವಾಗಿ ನಟಿಸಿದ್ದಾರೆ. ಸಾಯಿ ಪಲ್ಲವಿ ಸೀತೆಯಾಗಿ ಕೃಪಾ ಪೂರ್ಣವಾಗಿ ಕಾಣುತ್ತಾರೆ. ಪ್ರೀ ಕ್ಲೈಮ್ಯಾಕ್ಸ್ ಮತ್ತು ಕ್ಲೈಮ್ಯಾಕ್ಸ್ ಅದರ ಪ್ರತಿಯೊಂದು ಭಾಗವೂ ನನಗೆ ತುಂಬಾ ಇಷ್ಟವಾಯಿತು’ ಎಂದಿದ್ದಾರೆ.
ಇದನ್ನೂ ಓದಿ:ಯಶ್ ಬಹಳ ಇಷ್ಟಪಡುವ ವಿದೇಶಿ ಸಿನಿಮಾಗಳು ಯಾವುವು? ಅವರೇ ಹೇಳಿದ್ದಾರೆ ನೋಡಿ
ನಿರ್ಮಾಪಕ ನಮಿತ್ ಮಲ್ಹೋತ್ರಾ ಮತ್ತು ನಿರ್ದೇಶಕ ನಿತೇಶ್ ತಿವಾರಿ ಅವರನ್ನು ಅಭಿನಂದಿಸುತ್ತಾ ಅವರು, ‘ಇಂತಹ ಮಹತ್ವಾಕಾಂಕ್ಷೆಯ ದೃಶ್ಯರೂಪವನ್ನು ಬಹಳ ಸುಂದರವಾಗಿ ತೆರೆಗೆ ತಂದಿದ್ದಕ್ಕಾಗಿ ನಿರ್ಮಾಪಕ ನಮಿತ್ ಮಲ್ಹೋತ್ರಾ ಮತ್ತು ನಿರ್ದೇಶಕ ನಿತೇಶ್ ತಿವಾರಿ ಹಾಗೂ ಸಂಪೂರ್ಣ ತಂಡಕ್ಕೆ ಅಭಿನಂದನೆಗಳು’ ಎಂದಿದ್ದಾರೆ.
#Ramayana… the sheer scale of the film and the visuals on the big screen are spectacular to watch.
Ranbir as Rama, especially from the Vanavasam onwards, is serene yet magnificent. Yash brings a menacing presence as Ravana, while Sai Pallavi is graceful as Sita. The pre-climax and climax… loved every bit of it.
Congratulations @malhotra_namit, @niteshtiwari22 and the entire team on bringing such an ambitious vision so beautifully to the screen. 🙏
— rajamouli ss (@ssrajamouli) November 5, 2026
ಈ ಹಿಂದೆ ಸಹ ರಾಜಮೌಳಿ ಅವರು ಸಿನಿಮಾದ ಟ್ರೈಲರ್ ಬಗ್ಗೆಯೂ ಟ್ವೀಟ್ ಹಂಚಿಕೊಂಡಿದ್ದರು, ‘ರಾಮಾಯಣವು ಪ್ರತಿಯೊಬ್ಬ ಭಾರತೀಯ ಕಥೆಗಾರನು ಹೇಳಲು ಬಯಸುವ ಕಥೆಯಾಗಿದೆ. ನಮಿತ್ ಮಲ್ಹೋತ್ರಾ ಮತ್ತು ನಿತೇಶ್ ತಿವಾರಿ ಅವರು ಇದನ್ನು ಇಷ್ಟು ದೊಡ್ಡ ಮಟ್ಟದಲ್ಲಿ ತೆರೆಗೆ ತಂದಿರುವುದನ್ನು ನೋಡುವುದು ಖುಷಿಯಾಗಿದೆ. ಪ್ರತಿಯೊಬ್ಬ ನಟನೂ ಈ ಕಾಲಾತೀತ ಪಾತ್ರಗಳಿಗೆ ಆಳವಾದ ಜೀವ ತುಂಬಿದ್ದಾರೆ’ ಎಂದು ಬರೆದಿದ್ದರು. ಈಗ ಸಿನಿಮಾ ಬಗ್ಗೆಯೂ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಜಮೌಳಿ ಅವರು ಪ್ರಸ್ತುತ ‘ವಾರಣಾಸಿ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾನಲ್ಲಿ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರ್ ನಟನೆ ಮಾಡಿದ್ದಾರೆ. ಈ ಸಿನಿಮಾದ ಬಗ್ಗೆ ವಿಶ್ವದಾದ್ಯಂತ ಸಿನಿಮಾ ಪ್ರೇಮಿಗಳು ಎದುರು ನೋಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




