ಯಶ್ ಬಹಳ ಇಷ್ಟಪಡುವ ವಿದೇಶಿ ಸಿನಿಮಾಗಳು ಯಾವುವು? ಅವರೇ ಹೇಳಿದ್ದಾರೆ ನೋಡಿ
ಬೇರೆ ಭಾಷೆಯ, ಬೇರೆ ದೇಶಗಳ ಸಿನಿಮಾಗಳನ್ನು ನೋಡುವ ಮೂಲಕ ಅಲ್ಲಿನ ಕಲೆ, ಜೀವನ, ಇತಿಹಾಸವನ್ನು ಅರ್ಥ ಮಾಡಿಕೊಳ್ಳುವ ಜೊತೆಗೆ ಸಿನಿಮಾ ತಂತ್ರಜ್ಞಗಳನ್ನು ಸಹ ಕಲಿಯುತ್ತಾರೆ. ಯಶ್, ಭಾರತದ ಮಾಸ್ ಹೀರೋ ಆದರೆ ಅವರೂ ಸಹ ವಿಶ್ವ ಸಿನಿಮಾ ಪ್ರೇಮಿ, ‘ಸಿನೆಫೈಲ್’ ಎನ್ನಬಹುದು. ಇತ್ತೀಚೆಗೆ ‘ರಾಮಾಯಣ’ ಸಿನಿಮಾದ ಪ್ರಚಾರಕ್ಕಾಗಿ ಅಮೆರಿಕನಲ್ಲಿ ಪಾಡ್ಕಾಸ್ಟ್ ಒಂದರಲ್ಲಿ ಅವರು ಭಾಗಿ ಆಗಿದ್ದರು. ಈ ವೇಳೆ ಅವರು ತಮ್ಮಿಷ್ಟದ ಇಂಗ್ಲೀಷ್ ಹಾಗೂ ಫ್ರೆಂಚ್ ಮತ್ತು ಇಟಾಲಿಯನ್ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ.

ಮುಖ್ಯಾಂಶಗಳು
- ಯಶ್ ಹಲವು ಹಿಟ್ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ
- ಆದರೆ ಅವರಿಗೆ ಇಷ್ಟವಾಗುವ ಸಿನಿಮಾಗಳು ಯಾವುವು?
- ತಮ್ಮಿಷ್ಟದ ವಿದೇಶಿ ಸಿನಿಮಾಗಳ ಬಗ್ಗೆ ಯಶ್ ಮಾತನಾಡಿದ್ದಾರೆ.
ಒಳ್ಳೆಯ ಸಿನಿಮಾ ಕರ್ಮಿಗಳು ವಿಶ್ವ ಸಿನಿಮಾಗಳ ಬಗ್ಗೆ ಪರಿಚಯ ಹೊಂದಿರುತ್ತಾರೆ. ಬೇರೆ ಭಾಷೆಯ, ಬೇರೆ ದೇಶಗಳ ಸಿನಿಮಾಗಳನ್ನು ನೋಡುವ ಮೂಲಕ ಅಲ್ಲಿನ ಕಲೆ, ಜೀವನ, ಇತಿಹಾಸವನ್ನು ಅರ್ಥ ಮಾಡಿಕೊಳ್ಳುವ ಜೊತೆಗೆ ಸಿನಿಮಾ ತಂತ್ರಜ್ಞಗಳನ್ನು ಸಹ ಕಲಿಯುತ್ತಾರೆ. ಯಶ್, ಭಾರತದ ಮಾಸ್ ಹೀರೋ ಆದರೆ ಅವರೂ ಸಹ ವಿಶ್ವ ಸಿನಿಮಾ ಪ್ರೇಮಿ, ‘ಸಿನೆಫೈಲ್’ ಎನ್ನಬಹುದು. ಇತ್ತೀಚೆಗೆ ‘ರಾಮಾಯಣ’ ಸಿನಿಮಾದ ಪ್ರಚಾರಕ್ಕಾಗಿ ಅಮೆರಿಕನಲ್ಲಿ ಪಾಡ್ಕಾಸ್ಟ್ ಒಂದರಲ್ಲಿ ಅವರು ಭಾಗಿ ಆಗಿದ್ದರು. ಈ ವೇಳೆ ಅವರು ತಮ್ಮಿಷ್ಟದ ಇಂಗ್ಲೀಷ್ ಹಾಗೂ ಫ್ರೆಂಚ್ ಮತ್ತು ಇಟಾಲಿಯನ್ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ.
ಅಮೆರಿಕದಲ್ಲಿ ನಡೆದ ಈ ಪಾಡ್ಕಾಸ್ಟ್ನಲ್ಲಿ ಸಂದರ್ಶಕ, ‘ನಿಮ್ಮನ್ನು ಬದಲಾಯಿಸಿದ ಅಥವಾ ಬಹಳ ಪ್ರಭಾವ ಬೀರಿದ ಸಿನಿಮಾ ಯಾವುದು?’ ಎಂಬ ಪ್ರಶ್ನೆ ಕೇಳಿದರು. ಅದಕ್ಕೆ ಯಶ್, ಪ್ರಭಾವ ಬೀರಿದ ಸಿನಿಮಾ ಎಂದು ನಿರ್ದಿಷ್ಟವಾಗಿ ಹೇಳಲಾಗದು, ಆದರೆ ನನಗೆ ಬಹಳ ಇಷ್ಟವಾದ ಕೆಲವು ಸಿನಿಮಾಗಳಿವೆ. ನನಗೆ ‘ಸ್ಕಾರ್ಫೇಸ್’ ಬಹಳ ಇಷ್ಟ. ಅದಾದ ಬಳಿಕ ‘ಗಾಡ್ಫಾದರ್’ ಮತ್ತು ‘ಹೀಟ್’ ಸಿನಿಮಾ ಸಹ ಇಷ್ಟ ಎಂದರು. ಅದಕ್ಕೆ ಸಂದರ್ಶಕ, ‘ಓಹ್ ನಿಮಗೆ ಗ್ಯಾಂಗ್ಸ್ಟರ್ ಸಿನಿಮಾಗಳೇ ಇಷ್ಟವೇ?’ ಎಂದರು. ಅದಕ್ಕೆ ಯಶ್ ಹೌದು ಎಂದರು.
ಆದರೆ ಯಶ್ ಅವರ ಇಷ್ಟದ ಸಿನಿಮಾಗಳ ಪಟ್ಟಿ ಅಲ್ಲಿಗೆ ನಿಲ್ಲಲಿಲ್ಲ. ಮುಂದುವರೆದು ಮಾತನಾಡಿದ ಅವರು, ‘ನನಗೆ ‘ಲಿಜೆಂಡ್ ಆಫ್ 1900’ ಸಿನಿಮಾ ಬಹಳ ಇಷ್ಟ. ನನ್ನ ಮೇಲೆ ಪ್ರಭಾವ ಬೀರಿದ ಸಿನಿಮಾ ಎಂದು ಅದನ್ನು ಹೇಳಬಹುದು. ಆ ಸಿನಿಮಾದ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ ಆದರೆ ಹಲವು ವರ್ಷಗಳ ಹಿಂದೆ ಆ ಸಿನಿಮಾ ನೊಡಿದ್ದೆ. ‘ಸಿನಿಮಾ ಪ್ಯಾರಡೈಸೊ’ದ ನಿರ್ದೇಶಕನೇ ನಿರ್ದೇಶನ ಮಾಡಿರುವ ಸಿನಿಮಾ ಅದು’ ಎಂದರು. ಬಳಿಕ ತಮಗೆ ‘ಬೈಸಿಕಲ್ ಥೀಫ್’ ಸಿನಿಮಾ ಬಹಳ ಇಷ್ಟ. ಜೊತೆಗೆ ‘ಲೈಫ್ ಈಸ್ ಬ್ಯೂಟಿಫುಲ್’ ಸಿನಿಮಾ ಸಹ ಬಹಳ ಇಷ್ಟ, ಅದನ್ನು ಹಲವು ಬಾರಿ ನೋಡಿದ್ದೇನೆ ಎಂದರು ಯಶ್.
ಇದನ್ನೂ ಓದಿ:‘ರಾಮಾಯಣ’ ಸಿನಿಮಾನ ಸಂಭ್ರಮಿಸಿದ ಫ್ಯಾನ್ಸ್; ಯಶ್ ನಟನೆಗೆ ಫುಲ್ ಮಾರ್ಕ್ಸ್
ಯಶ್ ಅವರ ಇಷ್ಟದ ಸಿನಿಮಾಗಳ ಪಟ್ಟಿ ನೋಡಿದರೆ ಖಂಡಿತ ಅವರೊಬ್ಬ ಒಳ್ಳೆ ‘ಸಿನಿಫೈಲ್’ ಎನ್ನಬಹುದು. ಒಳ್ಳೆಯ ಕ್ಲಾಸಿಕ್ ಸಿನಿಮಾಗಳನ್ನೇ ಅವರು ಹೆಸರಿಸಿದ್ದಾರೆ. ‘ಗಾಡ್ಫಾದರ್’ ವಿಶ್ವದ ಅತ್ಯುತ್ತಮ ಸಿನಿಮಾಗಳಲ್ಲಿ ಪ್ರಮುಖವಾದುದು. ಇನ್ನು ‘ಸ್ಕಾರ್ಫೇಸ್’ ಮತ್ತು ‘ಹೀಟ್’ ಸಿನಿಮಾಗಳು ಪಕ್ಕಾ ಗ್ಯಾಂಗ್ಸ್ಟರ್ ಸಿನಿಮಾಗಳು. ಇನ್ನು ‘ಲಿಜೆಂಡ್ ಆಫ್ 1900’ ಫ್ರೆಂಚ್ ಸಿನಿಮಾ, ‘ಲೈಫ್ ಈಸ್ ಬ್ಯೂಟಿಫುಲ್’ ಮತ್ತು 1948ರಲ್ಲಿ ರಿಲೀಸ್ ಆಗಿದ್ದ ‘ಬೈಸಿಕಲ್ ಥೀವ್ಸ್’ ಸಿನಿಮಾಗಳು ಇಟಾಲಿಯನ್ ಸಿನಿಮಾಗಳು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




