Bawaal Twitter Review: ‘ದಂಗಲ್​’ ನಿರ್ದೇಶಕನ ಹೊಸ ಸಿನಿಮಾ ‘ಬವಾಲ್​’ ಹೇಗಿದೆ? ಇಲ್ಲಿದೆ ಟ್ವಿಟರ್​ ವಿಮರ್ಶೆ

|

Updated on: Jul 21, 2023 | 3:12 PM

Bawaal Movie: ಅಮೇಜಾನ್​ ಪ್ರೈಂ ವಿಡಿಯೋ ಮೂಲಕ ‘ಬವಾಲ್​’ ಸಿನಿಮಾ ರಿಲೀಸ್​ ಆಗಿದೆ. ಈ ಸಿನಿಮಾ ನೇರವಾಗಿ ಥಿಯೇಟರ್​ನಲ್ಲಿ ಬಿಡುಗಡೆ ಆಗಬೇಕಿತ್ತು ಎಂದು ಅನೇಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

Bawaal Twitter Review: ‘ದಂಗಲ್​’ ನಿರ್ದೇಶಕನ ಹೊಸ ಸಿನಿಮಾ ‘ಬವಾಲ್​’ ಹೇಗಿದೆ? ಇಲ್ಲಿದೆ ಟ್ವಿಟರ್​ ವಿಮರ್ಶೆ
ವರುಣ್​ ಧವನ್​, ಜಾನ್ವಿ ಕಪೂರ್​
Follow us on

ಭಾರತೀಯ ಚಿತ್ರರಂಗದಲ್ಲಿ ನಿರ್ದೇಶಕ ನಿತೇಶ್​ ತಿವಾರಿ (​Nitesh Tiwari) ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಈ ಮೊದಲು ಅವರು ನಿರ್ದೇಶಿಸಿದ್ದ ‘ದಂಗಲ್​’ ಸಿನಿಮಾ ದಾಖಲೆ ಬರೆದಿತ್ತು. ಸುಶಾಂತ್​ ಸಿಂಗ್ ರಜಪೂತ್​ ಮತ್ತು ಶ್ರದ್ಧಾ ಕಪೂರ್​ ಜೋಡಿಯಾಗಿ ನಟಿಸಿದ್ದ ‘ಚಿಚೋರೆ’ ಸಿನಿಮಾಗೂ ನಿತೇಶ್​ ತಿವಾರಿ ನಿರ್ದೇಶನ ಮಾಡಿದ್ದರು. ಆ ಚಿತ್ರ ಕೂಡ ಗಮನ ಸೆಳೆದಿತ್ತು. ಈಗ ಅವರ ನಿರ್ದೇಶನದಲ್ಲಿ ‘ಬವಾಲ್​’ ಸಿನಿಮಾ ಮೂಡಿಬಂದಿದೆ. ಇಂದು (ಜುಲೈ 21) ಈ ಸಿನಿಮಾ ಒಟಿಟಿಯಲ್ಲಿ ನೇರವಾಗಿ ರಿಲೀಸ್​ ಆಗಿದೆ. ಖ್ಯಾತ ನಟರಾದ ವರುಣ್​ ಧವನ್​ (​Varun Dhawan) ಮತ್ತು ಜಾನ್ವಿ ಕಪೂರ್​ ಅವರು ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಮೊದಲ ದಿನ ಸಿನಿಮಾ ನೋಡಿಬಂದ ಪ್ರೇಕ್ಷಕರು ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಅನಿಸಿಕೆ ತಿಳಿಸುತ್ತಿದ್ದಾರೆ. ‘ಬವಾಲ್​’ (​Bawaal Review) ಸಿನಿಮಾದ ಟ್ವಿಟರ್​ ವಿಮರ್ಶೆ ಇಲ್ಲಿದೆ..

ಜಾನ್ವಿ ಕಪೂರ್​ ಅವರು ನೆಪೋ ಕಿಡ್​ ಎಂಬ ಕಾರಣಕ್ಕೆ ಅವರನ್ನು ಅನೇಕರು ಟ್ರೋಲ್​ ಮಾಡುತ್ತಾರೆ. ಅವರ ನಟನೆ ಬಗ್ಗೆ ಪದೇಪದೇ ಟೀಕೆ ಕೇಳಿಬರುತ್ತದೆ. ಆದರೆ ‘ಬವಾಲ್​’ ಸಿನಿಮಾದಲ್ಲಿ ಅವರ ಅಭಿನಯಕ್ಕೆ ಜನರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈ ಪಾತ್ರಕ್ಕೆ ಜಾನ್ವಿ ತುಂಬ ಚೆನ್ನಾಗಿ ಹೊಂದಿಕೆ ಆಗಿದ್ದಾರೆ ಎಂಬ ಅಭಿಪ್ರಾಯ ಕೇಳಿಬಂದಿದೆ. ಅವರ ಅಭಿಮಾನಿಗಳು ಈ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ.

ಇದನ್ನೂ ಓದಿ: Nitesh Tiwari: ‘ರಾಮಾಯಣದ ಚಿತ್ರದಿಂದ ನಾನು ಯಾರಿಗೂ ನೋವುಂಟು ಮಾಡಲ್ಲ’: ಆತ್ಮವಿಶ್ವಾಸದಿಂದ ಹೇಳಿದ ನಿರ್ದೇಶಕ ನಿತೇಶ್​​ ತಿವಾರಿ

ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಟ್ವಿಟರ್​ ಮೂಲಕ ವಿಮರ್ಶೆ ಹಂಚಿಕೊಂಡಿದ್ದಾರೆ. ‘ಹಿತವಾದ ಅನುಭವ ನೀಡುವಂತಹ ಸಿನಿಮಾ ಇದು. ಒಂದು ಪುಸ್ತಕವನ್ನು ಓದುತ್ತಾ, ದೃಶ್ಯಗಳನ್ನು ಕಲ್ಪಿಸಿಕೊಳ್ಳುವ ರೀತಿಯಲ್ಲಿ ಬವಾಲ್​ ಮೂಡಿಬಂದಿದೆ. ವರುಣ್​ ಧವನ್​ ಮತ್ತು ಜಾನ್ವಿ ಕಪೂರ್​ ಅವರ ನಟನೆ ತುಂಬ ಚೆನ್ನಾಗಿದೆ. ನಿರ್ದೇಶಕ ನಿತೇಶ್​ ತಿವಾರಿ ಅವರಿಗೆ ಅಭಿನಂದನೆಗಳು’ ಎಂದು ‘ಜವಾನ್​’ ಸಿನಿಮಾದ ಡೈರೆಕ್ಟರ್​ ಅಟ್ಲಿ ಅವರು ಟ್ವೀಟ್​ ಮಾಡಿದ್ದಾರೆ.

‘ಇದು ಮಾಮೂಲಿ ರೊಮ್ಯಾಂಟಿಕ್​ ಕಾಮಿಡಿ ಸಿನಿಮಾ ಅಲ್ಲ. ಜೀವನಕ್ಕೆ ಸಂಬಂಧಿಸಿದ ಅನೇಕ ಪಾಠಗಳು ಈ ಚಿತ್ರದಲ್ಲಿವೆ’ ಎಂದು ಪ್ರೇಕ್ಷಕರೊಬ್ಬರು ಅನಿಸಿಕೆ ತಿಳಿಸಿದ್ದಾರೆ. ‘ಇಂಥ ಸಿನಿಮಾಗಳನ್ನು ಮಾಡುವುದು ಕಷ್ಟ. ಕಥೆ ತುಂಬ ಭಿನ್ನವಾಗಿದೆ. ಜಾನ್ವಿ ಕಪೂರ್​ ಅವರು ಸುಂದರವಾಗಿ ಕಾಣುತ್ತಾರೆ. ವರುಣ್​ ಧವನ್​ ಅವರ ನಟನೆ ಅತ್ಯುತ್ತಮವಾಗಿದೆ’ ಎಂದು ಜನರು ಪೋಸ್ಟ್​ ಮಾಡಿದ್ದಾರೆ.

‘ಇಂಥ ಪ್ರಾಮಾಣಿಕವಾದ ಸಿನಿಮಾಗಳು ಇನ್ನಷ್ಟು ಬರಬೇಕು. ಇದು ಹೃದಯಸ್ಪರ್ಶಿಯಾದ ಸಿನಿಮಾ’ ಎಂಬ ಅಭಿಪ್ರಾಯ ಕೂಡ ನೋಡುಗರಿಂದ ವ್ಯಕ್ತವಾಗಿದೆ. ಅಮೇಜಾನ್​ ಪ್ರೈಂ ವಿಡಿಯೋ ಮೂಲಕ ‘ಬವಾಲ್​’ ಸಿನಿಮಾ ರಿಲೀಸ್​ ಆಗಿದೆ. ಈ ಸಿನಿಮಾ ನೇರವಾಗಿ ಥಿಯೇಟರ್​ನಲ್ಲಿ ಬಿಡುಗಡೆ ಆಗಬೇಕಿತ್ತು ಎಂದು ಅನೇಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.