AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪೆದ್ದಿ’ ಅಡ್ವಾನ್ಸ್ ಬುಕಿಂಗ್ ಶುರು, ಬೆಂಗಳೂರಿನಲ್ಲಿ ಎಷ್ಟು ಶೋ? ಟಿಕೆಟ್ ಬೆಲೆ ಎಷ್ಟು?

Peddi Movie ticket booking: ‘ಪೆದ್ದಿ’ ಸಿನಿಮಾ ಜೂನ್ 4 ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಈಗಾಗಲೇ ಓಪನ್ ಆಗಿದ್ದು, ಬೆಂಗಳೂರು ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಸಿನಿಮಾ ಟಿಕೆಟ್ ಮುಂಗಡವಾಗಿ ಕಾಯ್ದಿರಿಸಬಹುದಾಗಿದೆ. ಬೆಂಗಳೂರಿನಲ್ಲಿ ‘ಪೆದ್ದಿ’ ಸಿನಿಮಾಕ್ಕೆ ಸಾಕಷ್ಟು ಶೋಗಳು ಲಭಿಸಿದ್ದು, ಟಿಕೆಟ್ ಬೆಲೆ ಎಷ್ಟಿದೆ? ಮಾಹಿತಿ ಇಲ್ಲಿದೆ...

‘ಪೆದ್ದಿ’ ಅಡ್ವಾನ್ಸ್ ಬುಕಿಂಗ್ ಶುರು, ಬೆಂಗಳೂರಿನಲ್ಲಿ ಎಷ್ಟು ಶೋ? ಟಿಕೆಟ್ ಬೆಲೆ ಎಷ್ಟು?
Peddi Movie
ಮಂಜುನಾಥ ಸಿ.
|

Updated on: Jun 02, 2026 | 11:12 AM

Share

ರಾಮ್ ಚರಣ್ (Ram Charan), ಶಿವರಾಜ್ ಕುಮಾರ್ ಮತ್ತು ಜಾನ್ಹವಿ ಕಪೂರ್ ನಟಿಸಿರುವ ‘ಪೆದ್ದಿ’ ಸಿನಿಮಾ ಬಿಡುಗಡೆಗೆ ಇನ್ನೆರಡು ದಿನಗಳಷ್ಟೆ ಇದೆ. ಜೂನ್ 4 ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಈಗಾಗಲೇ ಓಪನ್ ಆಗಿದ್ದು, ಬೆಂಗಳೂರು ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಸಿನಿಮಾ ಟಿಕೆಟ್ ಮುಂಗಡವಾಗಿ ಕಾಯ್ದಿರಿಸಬಹುದಾಗಿದೆ. ಬೆಂಗಳೂರಿನಲ್ಲಿ ‘ಪೆದ್ದಿ’ ಸಿನಿಮಾಕ್ಕೆ ಸಾಕಷ್ಟು ಶೋಗಳು ಲಭಿಸಿದ್ದು, ಟಿಕೆಟ್ ಬೆಲೆ ಎಷ್ಟಿದೆ? ಮಾಹಿತಿ ಇಲ್ಲಿದೆ…

ಈ ಹಿಂದೆ ಜನವರಿ ತಿಂಗಳಲ್ಲಿ ‘ಜನ ನಾಯಗನ್’ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಆದಾಗ ಬೆಂಗಳೂರಿನಲ್ಲಿ ಪ್ರತಿ ಟಿಕೆಟ್ ಬೆಲೆ 900 ರಿಂದ 1000 ವರೆಗೆ ನಿಗದಿ ಪಡಿಸಲಾಗಿತ್ತು. ಸಿಂಗಲ್ ಸ್ಕ್ರೀನ್​​ಗಳಲ್ಲಿ ಸಹ 500 ರಿಂದ 600 ರೂಪಾಯಿ ಬೆಲೆ ನಿಗದಿಪಡಿಸಲಾಗಿತ್ತು. ಆದರೆ ‘ಪೆದ್ದಿ’ ಚಿತ್ರತಂಡ ಈ ಬಾರಿ ಅಂಥಹಾ ‘ಲೂಟಿ’ಗೆ ಮುಂದಾಗಿಲ್ಲ. ಸಹ್ಯ ಟಿಕೆಟ್ ಬೆಲೆಯನ್ನೇ ನಿಗದಿಪಡಿಸಲಾಗಿದೆ. ಮಲ್ಟಿಪ್ಲೆಕ್ಸ್​​ಗಳಲ್ಲಿ ಸಹಜವಾಗಿಯೇ ಟಿಕೆಟ್ ಬೆಲೆ ತುಸು ಹೆಚ್ಚಿವೆ ಆದರೆ ಸಿಂಗಲ್ ಸ್ಕ್ರೀನ್​​ಗಳಲ್ಲಿ 200 ರಿಂದ 250ಕ್ಕೆ ಟಿಕೆಟ್ ಕಾಯ್ದಿರಿಸಬಹುದಾಗಿದೆ.

ಬೆಂಗಳೂರಿನಲ್ಲಿ ‘ಪೆದ್ದಿ’ ಸಿನಿಮಾದ ನಾಲ್ಕು ಆವೃತ್ತಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ತೆಲುಗು, ಕನ್ನಡ, ಹಿಂದಿ ಮತ್ತು ತಮಿಳು. ಜೂನ್ 2ರ ಬೆಳಿಗ್ಗೆ ವೇಳೆಗೆ ಕನ್ನಡಕ್ಕೆ ಈ ವರೆಗೆ 12 ಶೋಗಳನ್ನು ನೀಡಲಾಗಿದ್ದು, ನಾಳೆ ವೇಳೆಗೆ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ತಮಿಳಿನ ಎರಡು ಶೋಗಳು, ಹಿಂದಿಯ ಒಂದು ಶೋ ಪ್ರದರ್ಶನವಾಗುತ್ತಿದೆ. ತೆಲುಗಿಗೆ ಹೆಚ್ಚು ಶೋಗಳು ಸಹಜವಾಗಿಯೇ ದೊರೆತಿವೆ.

ಇದನ್ನೂ ಓದಿ:ಕಣ್ಣು ಕುಕ್ಕಿದ ರಾಮ್ ಚರಣ್ ಬಾಡಿಗಾರ್ಡ್ ಕೆವಿನ್ ಕುಂಟ

ಜೂನ್ 2 ರ ಬೆಳಿಗ್ಗೆ ವೇಳೆಗೆ ಪಿವಿಆರ್, ಐನಾಕ್ಸ್ ಇನ್ನೂ ಕೆಲವು ಮಲ್ಟಿಪ್ಲೆಕ್ಸ್​​ಗಳಲ್ಲಿ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿಲ್ಲ ಆದರೆ ನಗರದ ಬಹುತೇಕ ಸಿಂಗಲ್ ಸ್ಕ್ರೀನ್​​ಗಳು ಹಾಗೂ ಮಹೇಶ್ ಬಾಬು ಒಡೆತನದ ಎಎಂಬಿಯಲ್ಲಿ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದ್ದು, ಟಿಕೆಟ್ ಬೆಲೆ ಸಾಧಾರಣವಾಗಿಯೇ ಇದೆ. ಬೆಂಗಳೂರಿನ ಬಹುತೇಕ ಚಿತ್ರಮಂದಿರಗಳಲ್ಲಿ ಮಾರ್ನಿಂಗ್ ಶೋಗಳನ್ನು ಪ್ರದರ್ಶಿಸಲಾಗುತ್ತಿದೆ. ಬೆಳಿಗ್ಗೆ 6:30 ಇಂದಲೇ ಹಲವು ಚಿತ್ರಮಂದಿರಗಳಲ್ಲಿ ಶೋಗಳು ಆರಂಭವಾಗುತ್ತಿವೆ.

ಮಲ್ಟಿಪ್ಲೆಕ್ಸ್​ ಆಗಿರುವ ಎಎಂಬಿ ಸಿನಿಮಾಸ್ ನಲ್ಲಿ 600 ರಿಂದ 400 ವರೆಗೆ ಟಿಕೆಟ್​​ ಬೆಲೆ ನಿಗದಿ ಪಡಿಸಿದ್ದರೆ. ಬಹುತೇಕ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ 250 ಹಾಗೂ 200 ಟಿಕೆಟ್ ಬೆಲೆ ಇದೆ. ಕೆಲ ಎಸಿ ಚಿತ್ರಮಂದಿರದಲ್ಲಿ 300-250-200 ಟಿಕೆಟ್ ಬೆಲೆ ಇದೆ. ಇದು ಉತ್ತಮ ಮೊತ್ತವೇ ಆಗಿದೆ. ಈ ಹಿಂದೆ ಬಿಡುಗಡೆ ಆದ ಕೆಲ ಪರಭಾಷೆ ಸಿನಿಮಾಗಳಿಗೆ ಇದರ ದುಪ್ಪಟ್ಟು ಟಿಕೆಟ್ ಬೆಲೆಯನ್ನು ನಿಗದಿ ಮಾಡಲಾಗಿತ್ತು.

‘ಪೆದ್ದಿ’ ಸಿನಿಮಾವು ಹಳ್ಳಿಯ ಕ್ರೀಡಾಪಟು ಒಬ್ಬನ ಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ರಾಮ್ ಚರಣ್ ಜೊತೆಗೆ ಶಿವರಾಜ್ ಕುಮಾರ್ ಸಹ ಪ್ರಮುಖವಾದ ಪಾತ್ರದಲ್ಲಿ ನಟಿಸಿದ್ದಾರೆ. ಜಾನ್ಹವಿ ಕಪೂರ್ ನಾಯಕಿ. ದಿವ್ಯೇಂದು ವಿಲನ್. ಜೊತೆಗೆ ಬೊಮನ್ ಇರಾನಿ, ಜಗಪತಿ ಬಾಬು ಇನ್ನೂ ಕೆಲವರಿದ್ದಾರೆ. ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದು, ಸಿನಿಮಾ ನಿರ್ದೇಶಿಸಿರುವುದು ಬುಚ್ಚಿಬಾಬು ಸನಾ. ನಿರ್ಮಾಣ ಮೈತ್ರಿ ಮೂವಿ ಮೇಕರ್ಸ್​​ನವರದ್ದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ