ಸಮಂತಾ ರುತ್ ಪ್ರಭು ಅವರು ವಿಚ್ಛೇದನದ ಬಳಿಕ ಸಾಕಷ್ಟು ನೋವು ಅನುಭವಿಸಿದರು. ಅವರು ನಾಲ್ಕು ವರ್ಷಗಳ ಕಾಲ ನಾಗ ಚೈತನ್ಯ ಜೊತೆ ಸಂಸಾರ ನಡೆಸಿದ್ದರು. ಈ ಸಂಸಾರ ಈಗ ಕೊನೆ ಆಗಿ ಕೆಲವು ವರ್ಷಗಳೇ ಕಳೆದು ಹೋಗಿವೆ. ನಾಗ ಚೈತನ್ಯ ಮತ್ತೊಂದು ಮದುವೆ ಆಗುತ್ತಿದ್ದಾರೆ. ವಿಚ್ಛೇದನದ ಬಳಿಕ ಸಮಂತಾ ಸಾಕಷ್ಟು ನೋವು ಅನುಭವಿಸಿದರು. ಅವರು ಎದುರಿಸಿದ ತೊಂದರೆಗಳ ಬಗ್ಗೆ, ಕೇಳಿದ ಪದಗಳ ಬಗ್ಗೆ ಸಮಂತಾ ಮಾತನಾಡಿದ್ದಾರೆ.
‘ಮಹಿಳೆಯರು ವಿಚ್ಛೇದನ ಪಡೆದರೆ ಅವರು ಸಾಕಷ್ಟು ಅವಮಾನಗಳನ್ನು ಎದುರಿಸಬೇಕಾಗುತ್ತದೆ. ನಾನು ವಿಚ್ಛೇದನ ಪಡೆದಾಗ ಜನರು ಸೆಕೆಂಡ್ ಹ್ಯಾಂಡ್, ಬಳಕೆ ಆದವಳು ಎಂದು ಕರೆಯುತ್ತಿದ್ದರು. ಈ ರೀತಿಯ ಸಾಕಷ್ಟು ಕಮೆಂಟ್ಗಳು ಬರುತ್ತಿದ್ದವು. ವಿಚ್ಛೇದನ ಪಡೆದ ಬಳಿಕ ಮಹಿಳೆಯರು ಹಾಗೂ ಕುಟುಂಬದವರು ತುಂಬಾನೇ ಕಷ್ಟ ಅನುಭವಿಸಬೇಕಾಗುತ್ತದೆ’ ಎಂದಿದ್ದಾರೆ ಸಮಂತಾ.
‘ಆರಂಭದಲ್ಲಿ ಇದು ಸಾಕಷ್ಟು ನೋವನ್ನು ಉಂಟು ಮಾಡಿತು. ನಾನು ವಿಚ್ಛೇದನ ಪಡೆದಿದ್ದೇನೆ ಎಂಬುದನ್ನು ಒಪ್ಪಿಕೊಂಡೆ. ಇದು ಕಾಲ್ಪನಿಕ ಕಥೆ ಆಗಿರಲಿಲ್ಲ. ಹಾಗಂದ ಮಾತ್ರಕ್ಕೆ ನಾನು ಮೂಲೆಯಲ್ಲಿ ಕುಳಿತು ಅಳುತ್ತಾ ಇರುತ್ತೇನೆ ಎಂದರ್ಥವಲ್ಲ. ವಿಚ್ಛೇದನ ಆಗಿದೆ. ನಾನು ಅದನ್ನು ಮರೆ ಮಾಚುವ ಅಗತ್ಯ ಇಲ್ಲ. ನನ್ನ ಜೀವನ ಇಲ್ಲಿಗೆ ಕೊನೆ ಆಯಿತು ಎಂದರ್ಥವಲ್ಲ. ಎಲ್ಲಿ ಕೊನೆ ಇದೆಯೋ ಅಲ್ಲಿಂದಲೇ ಆರಂಭ ಆಗುತ್ತದೆ’ ಎಂದಿದ್ದಾರೆ ಸಮಂತಾ. ಈ ಮೂಲಕ ನಡೆದ ಘಟನೆಯನ್ನು ಒಪ್ಪಿ ಮುಂದೆ ಸಾಗಿದ್ದಾಗಿ ಅವರು ಹೇಳಿದ್ದಾರೆ.
‘ನಾನು ಈಗ ಖುಷಿಯಾಗಿದ್ದೇನೆ. ನಾನು ಸಾಕಷ್ಟು ಬೆಳೆದಿದ್ದೇನೆ. ನಾನು ಸಾಕಷ್ಟು ಕೆಲಸ ಮಾಡುತ್ತಿದ್ದೇನೆ’ ಎಂದು ಸಮಂತಾ ಹೇಳಿಕೊಂಡಿದ್ದಾರೆ. ಸಿನಿಮಾ ವಿಚಾರದಲ್ಲಿ ಅವರು ಗುಡ್ನ್ಯೂಸ್ ನೀಡಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.
ಇದನ್ನೂ ಓದಿ: ‘ನನಗೆ ಮಗು ಹೊಂದಬೇಕು’: ಹೀಗೆ ಹೇಳಿ ಖುಷಿಪಟ್ಟಿದ್ದ ಸಮಂತಾ
ಸಮಂತಾ ಅವರು 2017ರಲ್ಲಿ ನಾಗ ಚೈತನ್ಯ ಅವರನ್ನು ವಿವಾಹ ಆದರು. ಗೋವಾದಲ್ಲಿ ಇವರ ಮದುವೆ ಅದ್ದೂರಿಯಾಗಿ ನೆರವೇರಿತು. 2021ರಲ್ಲಿ ಇವರು ಬೇರೆ ಆದರು. ಈಗ ನಾಗ ಚೈತನ್ಯ ಅವರು ಶೋಭಿತಾ ದುಲಿಪಾಲ್ನ ವಿವಾಹ ಆಗುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.