AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನಗೆ ಮಗು ಹೊಂದಬೇಕು’: ಹೀಗೆ ಹೇಳಿ ಖುಷಿಪಟ್ಟಿದ್ದ ಸಮಂತಾ

Samantha Ruth Prabhu: ನಾಗ ಚೈತನ್ಯ ಜೊತೆಗೆ ವಿಚ್ಛೇದನ ಪಡೆದಿರುವ ನಟಿ ಸಮಂತಾ ಋತ್ ಪ್ರಭು, ತಮಗೆ ಮಗು ಮಾಡಿಕೊಳ್ಳುವ ಆಸೆಯಿದೆಯೆಂದು ಈ ಹಿಂದೆ ಹೇಳಿದ್ದ ವಿಡಿಯೋ ಇದೀಗ ವೈರಲ್ ಆಗಿದೆ.

‘ನನಗೆ ಮಗು ಹೊಂದಬೇಕು’: ಹೀಗೆ ಹೇಳಿ ಖುಷಿಪಟ್ಟಿದ್ದ ಸಮಂತಾ
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.|

Updated on: Nov 13, 2024 | 6:27 PM

Share

ನಟಿ ಸಮಂತಾ ರುತ್ ಪ್ರಭು ಅವರ ‘ಸಿಟಾಡೆಲ್: ಹನಿ ಬನ್ನಿ’ ಇತ್ತೀಚೆಗೆ OTT ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಯಿತು. ಈ ಸರಣಿಯಲ್ಲಿ ಸಮಂತಾ ತಾಯಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. 2018ರ ಸಂದರ್ಶನವೊಂದರಲ್ಲಿ ಸಮಂತಾಗೆ ತಾಯ್ತನದ ಬಗ್ಗೆ ಕೇಳಲಾಯಿಗಿತ್ತು. ಅದಕ್ಕೆ ಉತ್ತರಿಸುತ್ತಲೇ ತಾಯಿಯಾಗುವ ಬಗ್ಗೆ ಬಹಿರಂಗವಾಗಿ ವ್ಯಕ್ತಪಡಿಸಿದ್ದರು.

ಸಮಂತಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸದಾ ಸುದ್ದಿಯಲ್ಲಿರುತ್ತಾರೆ. ಮದುವೆಯಾದ ನಾಲ್ಕು ವರ್ಷಗಳ ನಂತರ ಅವರು ನಾಗ ಚೈತನ್ಯ ಅವರಿಗೆ ವಿಚ್ಛೇದನ ನೀಡಿದರು. ನಂತರ ಅವರಿಗೆ ಮೈಯೋಸಿಟಿಸ್, ಆಟೋಇಮ್ಯೂನ್ ಕಾಯಿಲೆ ಇರುವುದು ಪತ್ತೆಯಾಯಿತು. ಈಗ ಅವರ ಹಳೆಯ ಸಂದರ್ಶನ ವೈರಲ್ ಮಾಡಲಾಗುತ್ತಿದೆ.

‘ಮಗು ಹೊಂದಲು ತುಂಬಾ ತಡವಾಗಿಲ್ಲ ಎಂದು ನಾನು ಭಾವಿಸುತ್ತೇನೆ. ನನಗೆ ತಾಯಿಯಾಗುವ ಕನಸುಗಳಿವೆ. ಖಂಡಿತ ನಾನು ತಾಯಿಯಾಗಲು ಬಯಸುತ್ತೇನೆ. ನಾನು ಯಾವಾಗಲೂ ತಾಯಿಯಾಗಬೇಕೆಂದು ಬಯಸಿದ್ದೆ. ಇದು ತುಂಬಾ ಸುಂದರವಾದ ಅನುಭವವಾಗಲಿದೆ. ನಾನು ಖಂಡಿತವಾಗಿಯೂ ಅದರ ಬಗ್ಗೆ ಯೋಚಿಸುತ್ತೇನೆ. ಜನರು ಯಾವಾಗಲೂ ವಯಸ್ಸಿನ ಬಗ್ಗೆ ಚಿಂತಿಸುತ್ತಾರೆ. ಆದರೆ ತಾಯಿಯಾಗಲು ಯಾವುದೇ ನಿಗದಿತ ಸಮಯವಿಲ್ಲ ಎಂದು ನಾನು ಭಾವಿಸುತ್ತೇನೆ’ ಎಂದು ಸಮಂತಾ ಹೇಳಿದ್ದರು.

‘ನಾನು ನನ್ನ ಜೀವನದ ಉತ್ತಮ ಘಟ್ಟದಲ್ಲಿದ್ದೇನೆ ಎಂದು ನಾನು ಭಾವಿಸುತ್ತೇನೆ. ನಾನು ನಿಜವಾಗಿಯೂ ಅದೃಷ್ಟವಂತೆ’ ಎಂದು ಸಮಂತಾ ಅವರು ಹೇಳಿದ್ದರು. 2021ರಲ್ಲಿ ಸಮಂತಾ ಅವರು ಬೇರೆ ಆಗುವ ಘೋಷಣೆ ಮಾಡಿದರು. ಇದು ಶಾಕಿಂಗ್ ಎನಿಸಿತು.

ಇದನ್ನೂ ಓದಿ:ಬಾಲಿವುಡ್ ಹೀರೋ ಜೊತೆ ಆಪ್ತವಾಗಿ ಪೋಸ್ ನೀಡಿದ ಸಮಂತಾ ರುತ್ ಪ್ರಭು

2021ರಲ್ಲಿ ಸಮಂತಾ ಅವರು ಮೈಯೋಸಿಟಿಸ್ ಅನ್ನು ಹೊಂದಿದ್ದಾಗಿ ಬಹಿರಂಗಪಡಿಸಿದರು. ಮೈಯೋಸಿಟಿಸ್, ಆಟೋಇಮ್ಯೂನ್ ಕಾಯಿಲೆಯಿಂದಾಗಿ ಸಮಂತಾ ಸ್ವಲ್ಪ ಸಮಯದವರೆಗೆ ಕೆಲಸದಿಂದ ವಿರಾಮ ತೆಗೆದುಕೊಂಡಿದ್ದರು. ‘ಖುಷಿ’ ಚಿತ್ರದ ಚಿತ್ರೀಕರಣದ ವೇಳೆ ಅವರಿಗೆ ಈ ಕಾಯಿಲೆ ಇರುವುದು ಪತ್ತೆಯಾಗಿದ್ದು, ಬಳಿಕ ಚಿಕಿತ್ಸೆಗಾಗಿ ವಿರಾಮ ತೆಗೆದುಕೊಂಡಿದ್ದರು. ಚಿಕಿತ್ಸೆ ನಂತರ ಸಮಂತಾ ಈಗ ಕೆಲಸಕ್ಕೆ ಮರಳಿದ್ದಾರೆ.

ಮೈಯೋಸಿಟಿಸ್ ಒಂದು ಆರೋಗ್ಯ ಸ್ಥಿತಿಯಾಗಿದ್ದು ಅದು ಸ್ನಾಯುಗಳಲ್ಲಿ ತೀವ್ರವಾದ ನೋವನ್ನು ಉಂಟುಮಾಡುತ್ತದೆ. ಮೈಯೋ ಎಂದರೆ ಸ್ನಾಯು ಮತ್ತು itis ಎಂದರೆ ಉರಿಯೂತ (ನೋವು). ವೈರಲ್ ಸೋಂಕುಗಳು, ಕೆಲವು ಔಷಧಿಗಳು ಮತ್ತು ಸ್ವಯಂ-ನಿರೋಧಕ ಶಕ್ತಿ ಸೇರಿದಂತೆ ವಿವಿಧ ಅಂಶಗಳಿಂದ ಇದು ಉಂಟಾಗಬಹುದು.

ನಾಗ ಚೈತನ್ಯ ಸದ್ಯ ಶೋಭಿತಾ ಅವರನ್ನು ವಿವಾಹ ಆಗುತ್ತಿದ್ದಾರೆ. ಇವರ ಮದುವೆ ಡಿಸೆಂಬರ್​ನಲ್ಲಿ ನಡೆಯುವ ಸಾಧ್ಯತೆ ಇದೆ. ಸಮಂತಾ ಮತ್ತೆ ಮದುವೆ ಆಗೋದು ಯಾವಾಗ ಎನ್ನುವ ಪ್ರಶ್ನೆ ಮೂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ