AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತ್ಯುತ್ತಮ ಕಮ್​ಬ್ಯಾಕ್, ಮೂರು ಸಿನಿಮಾಗಳಲ್ಲಿ ರಾಕೇಶ್ ಅಡಿಗ

Rakesh Adiga: ನಟ ರಾಕೇಶ್ ಅಡಿಗ, ವೃತ್ತಿ ಜೀವನದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದಾರೆ. ವೃತ್ತಿಯಲ್ಲಿ ಬಿದ್ದಾಗ ಬಿಗ್​ಬಾಸ್ ಮೂಲಕ ಮತ್ತೆ ಎದ್ದು ಬಂದರು. ಈಗ ಮತ್ತೆ ‘ಮರ್ಯಾದೆ ಪ್ರಶ್ನೆ’ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಮರಳುತ್ತಿದ್ದಾರೆ. ಇದು ಅವರ ಪಾಲಿಗೆ ‘ಬ್ಯೂಟಿಫುಲ್ ಕಮ್​ಬ್ಯಾಕ್’ ಅಂತೆ.

ಅತ್ಯುತ್ತಮ ಕಮ್​ಬ್ಯಾಕ್, ಮೂರು ಸಿನಿಮಾಗಳಲ್ಲಿ ರಾಕೇಶ್ ಅಡಿಗ
ಮಂಜುನಾಥ ಸಿ.
|

Updated on: Nov 13, 2024 | 5:38 PM

Share

ಬಿಗ್​ಬಾಸ್ ಕನ್ನಡದ ಈವರೆಗಿನ ಅತ್ಯುತ್ತಮ ಸೀಸನ್​ಗಳಲ್ಲಿ, 9ನೇ ಸೀಸನ್​ ಸಹ ಒಂದು. ಆ ಸೀಸನ್​ನಲ್ಲಿ ರೂಪೇಶ್ ಶೆಟ್ಟಿ ವಿಜೇತರಾಗಿದ್ದರು. ಆ ಸೀಸನ್​ನ ರನ್ನರ್ ಅಪ್ ರಾಕೇಶ್ ಅಡಿಗ. ಅಸಲಿಗೆ ರಾಕೇಶ್ ಅಡಿಗ ವಿನ್ನರ್ ಆಗಬೇಕಿತ್ತು ಎಂದು ಹಲವರು ವಾದಿಸಿದ್ದರು. ಆದರೆ ಸ್ವತಃ ರಾಕೇಶ್ ಅದನ್ನು ಒಪ್ಪಿರಲಿಲ್ಲ. ರಾಕೇಶ್​, ತಮ್ಮ ಸಾವಧಾನ, ಸಮಯೋಚಿತ ಮಾತು, ಪ್ರೀತಿಯಿಂದಲೇ ಶೋನ ಫೈನಲ್​ವರೆಗೆ ಬಂದಿದ್ದರು. ಸೀಸನ್ 9ರಲ್ಲಿ ರಾಕೇಶ್ ಎಷ್ಟೋ ವಾರ ನಾಮಿನೇಟ್ ಸಹ ಆಗಿರಲಿಲ್ಲ. ಆ ಸೀಸನ್​ನಿಂದ ಹೊರಬಂದ ಹಲವರು ಈಗ ಚಿತ್ರರಂಗದಲ್ಲಿ ಎತ್ತರೆತ್ತರಕ್ಕೆ ಏರುತ್ತಿದ್ದಾರೆ. ಆದರೆ ರಾಕೇಶ್ ಅಡಿಗ ಮಾತ್ರ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ಒಂದು ಅದ್ಭುತ ಕಮ್​ಬ್ಯಾಕ್ ಮಾಡುತ್ತಾರೆ ರಾಕೇಶ್ ಅಡಿಗ.

ಅತ್ಯಂತ ಸಣ್ಣ ವಯಸ್ಸಿಗೆ ಜನಪ್ರಿಯತೆ, ಹಣ ಎಲ್ಲವನ್ನೂ ಕಂಡಿದ್ದ ರಾಕೇಶ್ ಅಡಿಗ, ಅವರೇ ಹೇಳಿಕೊಂಡಿರುವಂತೆ ಕೆಲವು ಕೆಟ್ಟ ಆಯ್ಕೆಗಳು, ಪ್ರಯೋಗಗಳ ಕಾರಣದಿಂದ ವೃತ್ತಿಯಲ್ಲಿ ಹಿನ್ನಡೆ ಅನುಭವಿಸಿದ್ದರು. ಬಿಗ್​ಬಾಸ್​ಗೆ ಬರುವ ಮುನ್ನ ಸಹ ಚಿತ್ರರಂಗದಿಂದ ದೂರಾಗಿ ಮೈಲ್ಡ್ ಡಿಪ್ರೆಶನ್​ಗೂ ಒಳಗಾಗಿದ್ದರು. ಆದರೆ ಬಿಗ್​ಬಾಸ್ ಮೂಲಕ ಮತ್ತೆ ಕರ್ನಾಟಕದ ಜನರಿಗೆ ಹತ್ತಿರವಾದರು. ಈಗ ಸಾಲು-ಸಾಲು ಸಿನಿಮಾಗಳ ಮೂಲಕ ತಮ್ಮಿಷ್ಟದ ನಟನೆಗೆ ಮರಳುತ್ತಿದ್ದಾರೆ.

ಇದನ್ನೂ ಓದಿ:ಬಿಗ್​ಬಾಸ್ ಮನೆಯ ಫೇಕ್ ಸ್ಪರ್ಧಿ ಯಾರು? ಊಸರವಳ್ಳಿ ಯಾರು?

ರಾಕೇಶ್ ಅಡಿಗ ನಟಿಸಿರುವ ‘ಮರ್ಯಾದೆ ಪ್ರಶ್ನೆ’ ಸಿನಿಮಾ ನವೆಂಬರ್ 22 ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದ ಟ್ರೇಲರ್ ನಿನ್ನೆಯಷ್ಟೆ ಬಿಡುಗಡೆ ಆಗಿದ್ದು, ಟ್ರೇಲರ್​ನಲ್ಲಿ ರಾಕೇಶ್ ಅಡಿಗರ ಪಾತ್ರ ಮತ್ತು ಅವರ ನಟನೆ ಬಹುವಾಗಿ ಗಮನ ಸೆಳೆಯುತ್ತಿದೆ. ಈ ಹಿಂದೆ ಹಲವು ರೀತಿಯ ಪಾತ್ರಗಳಲ್ಲಿ ನಟಿಸಿಯೂ ದೊಡ್ಡ ಯಶಸ್ಸು ಸಿಗದೆ ನಿರಾಸೆ ಅನುಭವಿಸಿದ್ದ ರಾಕೇಶ್, ಆ ಸಿಟ್ಟೆಲ್ಲವನ್ನೂ ಕೂಡಿಟ್ಟು ನಟಿಸಿದಂತೆ ಭಾಸವಾಗುತ್ತಿದೆ.

‘ಮರ್ಯಾದೆ ಪ್ರಶ್ನೆ’ ಸಿನಿಮಾದ ಬಳಿಕ ‘ನಾನು ಮತ್ತು ಗುಂಡ 2’ ಸಿನಿಮಾದಲ್ಲಿ ರಾಕೇಶ್ ಅಡಿಗ ನಟಿಸಿದ್ದು ಆ ಸಿನಿಮಾ ಸಹ ಶೀಘ್ರವೇ ಬಿಡುಗಡೆ ಆಗಲಿದೆ. ಅದರ ನಂತರ ಸ್ಟಾರ್ ನಟ ದುನಿಯಾ ವಿಜಯ್ ಎದುರು ವಿಲನ್ ಪಾತ್ರದಲ್ಲಿ ರಾಕೇಶ್ ಅಡಿಗ ನಟಿಸುತ್ತಿದ್ದಾರೆ. ಸಿನಿಮಾದ ಶೂಟಿಂಗ್ ಈಗಾಗಲೇ ನಡೆಯುತ್ತಿದ್ದು, ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲವಂತೆ. ಇದೊಂದು ಅತ್ಯದ್ಭುತ ಕಮ್​ಬ್ಯಾಕ್ ಆಗಲಿಗೆ ಎಂಬ ಗಾಢ ವಿಶ್ವಾಸದಲ್ಲಿದ್ದಾರೆ ರಾಕೇಶ್ ಅಡಿಗ. ಇವುಗಳ ಜೊತೆಗೆ ಬೇರೆ ಕೆಲವು ಸಿನಿಮಾಗಳಿಗೂ ಆಫರ್​ಗಳು, ಕತೆಗಳು ಸಹ ಬರುತ್ತಿವೆಯಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ