AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸತತ ಸೋಲಿನಿಂದ ಕಂಗೆಟ್ಟ ಪೂಜಾ ಹೆಗ್ಡೆಗೆ ಬಾಲಿವುಡ್​​ನಲ್ಲಿ ಮೂಡಿದೆ ಆಶಾಕಿರಣ

ಒಂದು ಕಾಲದಲ್ಲಿ 'ಲಕ್ಕಿ ಸುಂದರಿ' ಎಂದೇ ಖ್ಯಾತಿ ಪಡೆದಿದ್ದ ಪೂಜಾ ಹೆಗ್ಡೆಗೆ ಸದ್ಯ ಸತತ ಸೋಲುಗಳು ಕಾಡುತ್ತಿವೆ. ದಕ್ಷಿಣ ಭಾರತ ಹಾಗೂ ಬಾಲಿವುಡ್ ಎರಡರಲ್ಲೂ ಬ್ಯಾಕ್-ಟು-ಬ್ಯಾಕ್ ಸೋಲುಗಳಿಂದ ಅವರ ಸುವರ್ಣ ಯುಗ ಕಳೆಗುಂದಿದೆ. ಈ ಫ್ಲಾಪ್ ಸರಣಿಗೆ ಬ್ರೇಕ್ ಹಾಕಿ, ಕಳೆದುಹೋದ ಜನಪ್ರಿಯತೆಯನ್ನು ಮರಳಿ ಪಡೆಯಲು ಪೂಜಾ ಹೆಗ್ಡೆ 'ಹೈ ಜವಾನಿ ತೋ ಇಷ್ಕ್ ಹೋನಾ ಹೈ' ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಸತತ ಸೋಲಿನಿಂದ ಕಂಗೆಟ್ಟ ಪೂಜಾ ಹೆಗ್ಡೆಗೆ ಬಾಲಿವುಡ್​​ನಲ್ಲಿ ಮೂಡಿದೆ ಆಶಾಕಿರಣ
ಪೂಜಾ ಹೆಗ್ಡೆ
ರಾಜೇಶ್ ದುಗ್ಗುಮನೆ
|

Updated on: May 29, 2026 | 10:16 AM

Share

ದಕ್ಷಿಣ ಭಾರತ ಹಾಗೂ ಬಾಲಿವುಡ್ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಲಕ್ಕಿ ಸುಂದರಿ ಎಂದೇ ಹೆಸರಾಗಿದ್ದ ಕರಾವಳಿ ಸುಂದರಿ ಪೂಜಾ ಹೆಗ್ಡೆ ಅವರ ಸುವರ್ಣ ಯುಗಕ್ಕೆ ಸದ್ಯ ಗ್ರಹಣ ಹಿಡಿದಂತಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈ ನಟಿಯ ಸಿನಿಮಾಗಳು ದಕ್ಷಿಣ ಹಾಗೂ ಬಾಲಿವುಡ್ (Bollywood) ಎರಡೂ ಕಡೆ ಬ್ಯಾಕ್-ಟು-ಬ್ಯಾಕ್ ಸೋಲನ್ನು ಕಾಣುತ್ತಿವೆ. ದೊಡ್ಡ ದೊಡ್ಡ ಸೂಪರ್‌ಸ್ಟಾರ್‌ಗಳ ಜೊತೆ ಬಣ್ಣ ಹಚ್ಚಿದರೂ ಬಾಕ್ಸ್ ಆಫೀಸ್‌ನಲ್ಲಿ ಗೆಲುವು ಮಾತ್ರ ಪೂಜಾ ಅವರಿಗೆ ಮರೀಚಿಕೆಯಾಗಿದೆ. ಹಿಂದಿ ಸಿನಿಮಾ ಮೂಲಕ ಅವರು ಗೆಲುವಿನ ಭರವಸೆಯಲ್ಲಿದ್ದಾರೆ.

2021ರ ‘ಮೋಸ್ಟ್ ಎಲಿಜಬೆಲ್ ಬ್ಯಾಚುಲರ್’ ಸಿನಿಮಾದಿಂದ ಪೂಜಾ ಸೋಲು ಶುರುವಾಯಿತು. ನಂತರ ‘ರಾಧೆ ಶ್ಯಾಮ್’, ಆಚಾರ್ಯ, ಬೀಸ್ಟ್ , ಕಿಸಿ ಕಾ ಭಾಯ್ ಕಿಸಿ ಕಿ ಜಾನ್, ಸರ್ಕಸ್, ‘ದೇವ’, ‘ರೆಟ್ರೋ’ ಸಿನಿಮಾಗಳು ಸೋತವು. ‘ಜನ ನಾಯಗನ್’ ರಿಲೀಸ್ ಇನ್ನೂ ಸಂಕಷ್ಟದಲ್ಲಿದೆ. ಹೀಗಾಗಿ ಪೂಜಾ ಹೆಗ್ಡೆ ಮುಟ್ಟಿದ್ದೆಲ್ಲ ಚಿನ್ನ ಆಗೋ ಕಾಲ ಹೋಗಿದೆ.

ಸತತ ಸೋಲುಗಳಿಂದ ಕಳೆಗುಂದಿರುವ ಪೂಜಾ ಹೆಗ್ಡೆ ಅವರ ಕರಿಯರ್‌ಗೆ ಈಗ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಸಿನಿಮಾ ಒಂದು ಪ್ರಮುಖ ಆಶಾಕಿರಣವಾಗಿ ಮೂಡಿಬಂದಿದೆ. ಈ ಚಿತ್ರದ ಮೂಲಕ ಅವರು ತಮ್ಮ ಫ್ಲಾಪ್‌ಗಳ ಸರಣಿಗೆ ಬ್ರೇಕ್ ಹಾಕಲು ಭರ್ಜರಿ ತಯಾರಿ ನಡೆಸಿದ್ದಾರೆ.

ಇದನ್ನೂ ಓದಿ: ಚಿತ್ರರಂಗದಿಂದ ದೂರ ಸರಿಯುತ್ತಿದ್ದಾರೆ ಕರಣ್; ಬಾಲಿವುಡ್ ಪ್ರಮುಖರ ಜೊತೆ ಅಂತರ

ಡೇವಿಡ್ ಧವನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ವರುಣ್ ಧವನ್ ನಾಯಕರಾಗಿರುವ ಈ ಎಂಟರ್‌ಟೈನರ್ ಸಿನಿಮಾ, ನಟಿಯ ಕೆರಿಯರ್‌ಗೆ ಹೊಸ ತಿರುವು ನೀಡುವ ನಿರೀಕ್ಷೆ ಇದೆ. ಪೂಜಾ ಹೆಗ್ಡೆ ಕೂಡ ಈ ಪ್ರಾಜೆಕ್ಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದು, ತಮ್ಮ ಕಳೆದುಹೋದ ‘ಲಕ್ಕಿ ಹೀರೋಯಿನ್’ ಪಟ್ಟವನ್ನು ಮರಳಿ ಪಡೆಯಲು ಎದುರು ನೋಡುತ್ತಿದ್ದಾರೆ. ಈ ಚಿತ್ರ ಜೂನ್ 5ರಂದು ರಿಲೀಸ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More