ಚಿತ್ರರಂಗದಿಂದ ದೂರ ಸರಿಯುತ್ತಿದ್ದಾರೆ ಕರಣ್; ಬಾಲಿವುಡ್ ಪ್ರಮುಖರ ಜೊತೆ ಅಂತರ
ಖ್ಯಾತ ನಿರ್ಮಾಪಕ ಕರಣ್ ಜೋಹರ್ ಬಾಲಿವುಡ್‌ನಿಂದ ದೂರ ಸರಿಯುತ್ತಿದ್ದಾರೆ ಎಂಬ ಪ್ರಶ್ನೆ ಮೂಡಿದೆ. ಧರ್ಮ ಪ್ರೊಡಕ್ಷನ್ಸ್‌ನ 50 ಷೇರುಗಳನ್ನು ಮಾರಾಟ ಮಾಡಿದ ನಂತರ, ಅವರು ಶಾರುಖ್ ಖಾನ್, ಆಲಿಯಾ ಭಟ್ ಸೇರಿದಂತೆ ಹಲವು ಪ್ರಮುಖರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ. ಈ ದಿಢೀರ್ ಬದಲಾವಣೆಯ ಹಿಂದಿನ ನಿಖರ ಕಾರಣ ಬಹಿರಂಗವಾಗಿಲ್ಲ.

‘ಖ್ಯಾತ ನಿರ್ಮಾಪಕ ಕರಣ್ ಜೋಹರ್ ಅವರು (Karan Joahr) ಇತ್ತೀಚೆಗೆ ಬಾಲಿವುಡ್ ಚಿತ್ರರಂಗದಿಂದ ದೂರ ಸರಿಯುತ್ತಿದ್ದಾರಾ?’- ಹೀಗೊಂದು ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಈ ಮೊದಲು ತಮ್ಮ ಧರ್ಮ ಪ್ರೊಡಕ್ಷನ್ಸ್ ಹೌಸ್ನ ಶೇ.50ರಷ್ಟು ಷೇರನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಮಾರಾಟ ಮಾಡಿದ್ದರು. ಈಗ ಬಾಲಿವುಡ್ನ ಪ್ರಮುಖರನ್ನೇ ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಕರಣ್ ಜೋಹರ್ ಈ ದಿಢೀರ್ ಬದಲಾವಣೆ ಇಂಟರ್ನೆಟ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಚಿತ್ರರಂಗದ ಜೊತೆ ದಶಕಗಳ ಕಾಲ ಆಪ್ತ ಒಡನಾಟ ಹೊಂದಿರುವ ಕರಣ್, ತಮ್ಮ ಅತ್ಯಂತ ಆಪ್ತ ಸ್ನೇಹಿತರಾದ ಶಾರುಖ್ ಖಾನ್, ಕರೀನಾ ಕಪೂರ್ ಖಾನ್, ಮನೀಶ್ ಮಲ್ಹೋತ್ರಾ ಮತ್ತು ತಾವೇ ಚಿತ್ರರಂಗಕ್ಕೆ ಪರಿಚಯಿಸಿದ್ದ ಆಲಿಯಾ ಭಟ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ. ಕೇವಲ ಇಷ್ಟೇ ಅಲ್ಲದೆ, ವರುಣ್ ಧವನ್, ಸಿದ್ದಾರ್ಥ್ ಮಲ್ಹೋತ್ರಾ, ಮಲೈಕಾ ಅರೋರಾ ಹಾಗೂ ಅನನ್ಯಾ ಪಾಂಡೆ ಅವರೂ ಸಹ ಕರಣ್ ಅವರ ಫಾಲೋಯಿಂಗ್ ಲಿಸ್ಟ್‌ನಿಂದ ಮಾಯವಾಗಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 1.7 ಕೋಟಿಗೂ (17.5 ಮಿಲಿಯನ್) ಹೆಚ್ಚು ಫಾಲೋವರ್ಸ್ ಹೊಂದಿರುವ ಕರಣ್ ಜೋಹರ್, ಪ್ರಸ್ತುತ ಫಾಲೋ ಮಾಡುತ್ತಿರುವುದು ಕೇವಲ 78 ಖಾತೆಗಳನ್ನು ಮಾತ್ರ. ವಿಶೇಷವೆಂದರೆ, ತಮ್ಮ ಮುಂಬರುವ ‘ನಾಗ್‌ಜಿಲ್ಲಾ’ ಸಿನಿಮಾದ ನಾಯಕ ಕಾರ್ತಿಕ್ ಆರ್ಯನ್ ಅವರನ್ನೂ ಅವರು ಅನ್‌ಫಾಲೋ ಮಾಡಿದ್ದಾರೆ. ಪ್ರಿಯಾಂಕಾ ಚೋಪ್ರ ಅವರನ್ನು ಕರಣ್ ಫಾಲೋ ಮಾಡುತ್ತಿದ್ದಾರೆ ಈ ದಿಢೀರ್ ನಿರ್ಧಾರಕ್ಕೆ ನಿಖರ ಕಾರಣವೇನೆಂಬುದನ್ನು ಕರಣ್ ಜೋಹರ್ ಇದುವರೆಗೆ ಬಹಿರಂಗಪಡಿಸಿಲ್ಲ.
ಇದನ್ನೂ ಓದಿ: ಬದಲಾದ ಕರಣ್ ಜೋಹರ್; ಬಾಲಿವುಡ್ ನೆಪೋ ಕಿಡ್ಸ್ ಕಳ್ಳಾಟ ಬಯಲು ಮಾಡಿದ ನಿರ್ಮಾಪಕ
ಕರಣ್ ಜೋಹರ್ ಅವರು ತಮ್ಮ ಒಡೆತನದ ‘ಧರ್ಮ ಪ್ರೊಡಕ್ಷನ್ಸ್’ ಸಂಸ್ಥೆಯ ಶೇಕಡಾ 50 ರಷ್ಟು ಷೇರುಗಳನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆಧಾರ್ ಪೂನಾವಾಲಾ ಅವರ ‘ಸೆರೀನ್ ಪ್ರೊಡಕ್ಷನ್ಸ್’ಗೆ 1,000 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ್ದರು. ಈ ಬೆಳವಣಿಗೆಯಿಂದ ಕರಣ್ ಅವರು ಸಿನಿಮಾ ರಂಗದಿಂದ ದೂರ ಹೋಗುತ್ತಿದ್ದಾರೆ ಎನ್ನುವ ಪ್ರಶ್ನೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





