
ಬಾಲಿವುಡ್ ನಟಿ ಪೂನಂ ಪಾಂಡೆ (Poonam Pandey) ಅವರು ಏಕಾಏಕಿ ಮೃತಪಟ್ಟಿದ್ದು ಅನೇಕರಿಗೆ ಶಾಕಿಂಗ್ ಎನಿಸಿದೆ. ಕೇವಲ 32ನೇ ವಯಸ್ಸಿಗೆ ಅವರು ಕೊನೆಯುಸಿರು ಎಳೆದರು. ಕಳೆದ ಕೆಲ ದಿನಗಳ ಹಿಂದಷ್ಟೇ ಹಾಯಾಗಿ ಸುತ್ತಾಡಿಕೊಂಡಿದ್ದ ಅವರು ಈಗ ಏಕಾಏಕಿ ಮೃತಪಟ್ಟರು ಎಂದರೆ ಯಾರಿಂದಲೂ ನಂಬಲು ಸಾಧ್ಯವಾಗುತ್ತಿಲ್ಲ. ಪೂನಂ ಪಾಂಡೆ ಅವರ ಅಂತ್ಯ ಸಂಸ್ಕಾರ ಅವರ ಹುಟ್ಟೂರಾದ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ ಎನ್ನಲಾಗಿದೆ. ಶುಕ್ರವಾರ (ಫೆಬ್ರವರಿ 2) ರಾತ್ರಿ ವೇಳೆಗೆ ಅಂತ್ಯ ಸಂಸ್ಕಾರ ಪೂರ್ಣಗೊಂಡಿದೆ ಎಂದು ಅವರ ಮ್ಯಾನೇಜರ್ ಪಾರುಲ್ ಚಾವ್ಲಾ ತಿಳಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಫ್ಯಾನ್ಸ್ ಕೋರಿದ್ದಾರೆ.
ಪೂನಂ ಪಾಂಡೆ ಇತ್ತೀಚೆಗೆ ಹಾಯಾಗಿ ಓಡಾಡಿಕೊಂಡೇ ಇದ್ದರು. ಅವರು ಏಕಾಏಕಿ ಗರ್ಭಕಂಠ ಕ್ಯಾನ್ಸರ್ನಿಂದ ಮೃತಪಟ್ಟರು ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಯಿತು. ಇದನ್ನು ಕೇಳಿ ಅನೇಕರಿಗೆ ಅಚ್ಚರಿ ಹಾಗೂ ಶಾಕ್ ಆಗಿದೆ. ಅನೇಕರು ಇದನ್ನು ನಂಬಲು ಹೋಗಿಲ್ಲ. ಆ ಬಳಿಕ ಅವರ ಮ್ಯಾನೇಜರ್ ಈ ವಿಚಾರವನ್ನು ಖಚಿತಪಡಿಸಿದ್ದಾರೆ.
ಹೃದಯಾಘಾತದಿಂದ ಏಕಾಏಕಿ ಮೃತಪಟ್ಟರು ಎಂದರೆ ನಂಬಬಹುದು. ಆದರೆ, ಕ್ಯಾನ್ಸರ್ ಉಂಟಾದರೆ ಏಕಾಏಕಿ ಮೃತಪಡಲು ಸಾಧ್ಯವೇ ಇಲ್ಲ. ಕಳೆದ ಮೂರು ದಿನಗಳ ಹಿಂದಷ್ಟೇ ಅವರು ಖುಷಿ ಖುಷಿಯಿಂದ ಪೋಸ್ಟ್ ಹಾಕಿದ್ದರು. ಪಾರ್ಟಿ ಮಾಡಿದ್ದರು. ಇದಾದ ಬಳಿಕ ಅವರು ಮೃತಪಟ್ಟಿದ್ದಾರೆ. ಡ್ರಗ್ಸ್ ಓವರ್ಡೋಸ್ನಿಂದ ಈ ರೀತಿ ಆಗಿದೆ ಎನ್ನುವ ಮಾತು ಕೂಡ ಕೇಳಿ ಬಂದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ಪೂನಂ ಪಾಂಡೆ ಸಾವಿನ ಕುರಿತು ಅನುಮಾನ: ಸಾವಿಗೆ ಮಾದಕ ವಸ್ತು ಕಾರಣ?
2013ರಲ್ಲಿ ‘ನಶಾ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು ಪೂನಂ. ವಿದ್ಯಾರ್ಥಿ ಜೊತೆ ಅಕ್ರಮ ಲೈಂಗಿಕ ಸಂಬಂಧ ಇಟ್ಟುಕೊಳ್ಳುವ ಶಿಕ್ಷಕಿಯ ಪಾತ್ರದಲ್ಲಿ ಅವರು ನಟಿಸಿದ್ದರು. ಸಿನಿಮಾಗಳಲ್ಲಿ ಹಲವು ಬೋಲ್ಡ್ ಪಾತ್ರಗಳನ್ನು ಮಾಡಿ ಸುದ್ದಿ ಆಗಿದ್ದರು. 2018ರಲ್ಲಿ ರಿಲೀಸ್ ಆದ ‘ಜರ್ನಿ ಆಫ್ ಕರ್ಮ’ ಅವರ ನಟನೆಯ ಕೊನೆಯ ಸಿನಿಮಾ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ