ನಟ ಪ್ರಭಾಸ್ ಅವರು ‘ಕಲ್ಕಿ 2898 ಎಡಿ’ ಸಿನಿಮಾ ಮೂಲಕ ಈ ವರ್ಷ ಯಶಸ್ಸು ಕಂಡಿದ್ದಾರೆ. ಅವರು ‘ಬಾಹುಬಲಿ’ ಬಳಿಕ ಪ್ಯಾನ್ ಇಂಡಿ ಸ್ಟಾರ್ ಆದರು. ಅವರಿಗೆ ಇಂದು (ಅಕ್ಟೋಬರ್ 23) ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಅವರಿಗೆ ಸಿನಿಮಾ ಹಿಟ್ ಆದ ಖುಷಿ ಇದೆ. ಫ್ಯಾನ್ಸ್ ಕೂಡ ಬರ್ತ್ಡೇನ ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಅವರ ನೆಟ್ವರ್ತ್ ಬಗ್ಗೆ ಇಲ್ಲಿದೆ ಮಾಹಿತಿ.
2002ರಲ್ಲಿ ‘ಈಶ್ವರ’ ಚಿತ್ರದ ಮೂಲಕ ಪ್ರಭಾಸ್ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆ ಬಳಿಕ ಅವರು ಹೆಚ್ಚು ತೊಡಗಿಕೊಂಡಿದ್ದು ತೆಲುಗಿನಲ್ಲೇ. ಎಸ್.ಎಸ್ ರಾಜಮೌಳಿ ನಿರ್ದೇಶನ ‘ಬಾಹುಬಲಿ’ ಹಾಗೂ ‘ಬಾಹುಬಲಿ 2’ ಚಿತ್ರದಿಂದ ಅವರ ಖ್ಯಾತಿ ಹೆಚ್ಚಿತು. ಅವರ ನೆಟ್ವರ್ತ್ ಬಗ್ಗೆ ಇಲ್ಲಿದೆ ವಿವರ.
ಉಪ್ಪಳಪತಿ ವೆಂಕಟ ಸೂರ್ಯನಾರಾಯಣ ಪ್ರಭಾಸ್ ರಾಜು ಅನ್ನೋದು ಪ್ರಭಾಸ್ ಅವರ ಮೂಲ ಹೆಸರು. ಅವರು ಜನಿಸಿದ್ದು 1979ರ ಅಕ್ಟೋಬರ್ 23ರಂದು. ಅವರು ಆಸ್ತಿ 241 ಕೋಟಿ ರೂಪಾಯಿಗೂ ಅಧಿಕವಾಗಿದೆ. ಅವರು ಪ್ರತಿ ಚಿತ್ರಕ್ಕೆ ನೂರಾರು ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ‘ಬಾಹುಬಲಿ’ ಚಿತ್ರಕ್ಕಾಗಿ ಅವರು ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದರು. ಅವರು ‘ಕಲ್ಕಿ 2898 ಎಡಿ’ ಚಿತ್ರಕ್ಕೆ 80 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ.
ಪ್ರಭಾಸ್ ಅವರು ಹೈದರಾಬಾದ್ನ ಜುಬ್ಲೀ ಹಿಲ್ಸ್ನಲ್ಲಿ ದೊಡ್ಡ ಮನೆ ಹೊಂದಿದ್ದಾರೆ. ಇದರ ಬೆಲೆ 60 ಕೋಟಿ ರೂಪಾಯಿ ಎನ್ನಲಾಗಿದೆ. ಈ ಮನೆಯಲ್ಲಿ ಜಿಮ್, ಪೂಲ್, ಗಾರ್ಡನ್ ಸೇರಿ ಅನೇಕ ಸವಲತ್ತುಗಳು ಇವೆ. ಈ ಮನೆಯಲ್ಲಿರುವ ಜಿಮ್ನಲ್ಲಿ ವಸ್ತುಗಳ ಬೆಲೆ 1.5 ಕೋಟಿ ರೂಪಾಯಿ ಎನ್ನಲಾಗಿದೆ. ಪ್ರಭಾಸ್ ಅವರು ಮುಂಬೈನಲ್ಲೂ ಮನೆ ಹೊಂದಿದ್ದಾರೆ. ಅವರಿಗೆ ಇಟಲಿಯಲ್ಲಿ ವಿಲ್ಲಾ ಹೊಂದಿದ್ದು 40 ಲಕ್ಷ ರೂಪಾಯಿ ಬಾಡಿಗೆ ಪಡೆಯುತ್ತಾರೆ.
ಪ್ರಭಾಸ್ಗೆ ಕಾರ್ ಕಲೆಕ್ಷನ್ ಬಗ್ಗೆ ವಿಶೇಷ ಪ್ರೀತಿ ಇದೆ. 1 ಕೋಟಿ ರೂಪಾಯಿಯ ರೇಂಜ್ ರೋವರ್ ಸ್ಪೋರ್ಟ್ಸ್, ಆಡಿ ಎ6, ಬಿಎಂಡಬ್ಲ್ಯೂ 7 ಸೀರಿಸ್, ಜಾಗ್ವಾರ್, ರೋಲ್ಸ್ ರಾಯ್ಸ್ ಪ್ಯಾಂಟಮ್ ಕಾರುಗಳು ಅವರ ಬಳಿ ಇವೆ.
ಇದನ್ನೂ ಓದಿ: ಈ ಪ್ರಾಪರ್ಟಿಯಿಂದ ಪ್ರಭಾಸ್ಗೆ ತಿಂಗಳಿಗೆ ಬರುತ್ತೆ 40 ಲಕ್ಷ ರೂಪಾಯಿ ಬಾಡಿಗೆ
ಸಿನಿಮಾ ವಿಚಾರಕ್ಕೆ ಬರೋದಾದರೆ ಅವರು ಸದ್ಯ ‘ರಾಜಾ ಸಾಬ್’ ಹಾಗೂ ‘ಸ್ಪಿರಿಟ್’ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ. ವರ್ಷಕ್ಕೆ 2-3 ಚಿತ್ರಗಳನ್ನು ರಿಲೀಸ್ ಮಾಡೋ ಟಾರ್ಗೆಟ್ನ ಅವರು ಇಟ್ಟುಕೊಂಡಿದ್ದಾರೆ. ‘ರಾಜಾ ಸಾಬ್’ ಚಿತ್ರದ ಅಪ್ಡೇಟ್ಗಾಗಿ ಫ್ಯಾನ್ಸ್ ಕಾದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:43 am, Wed, 23 October 24