ಈ ಪ್ರಾಪರ್ಟಿಯಿಂದ ಪ್ರಭಾಸ್​ಗೆ ತಿಂಗಳಿಗೆ ಬರುತ್ತೆ 40 ಲಕ್ಷ ರೂಪಾಯಿ ಬಾಡಿಗೆ

ಪ್ರಭಾಸ್ ಅವರಿಗೆ ಅಕ್ಟೋಬರ್ 23ರಂದು ಜನ್ಮದಿನ. ಕೆಲವು ದಿನಗಳ ಮೊದಲೇ ಫ್ಯಾನ್ಸ್ ಇದನ್ನು ಸಂಭ್ರಮಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಶುಭಾಶಯ ಕೋರುತ್ತಿದ್ದಾರೆ. ಈಗ ಪ್ರಭಾಸ್ ಆಸ್ತಿ ಬಗ್ಗೆ ಚರ್ಚೆ ನಡೆಯುತ್ತಿದೆ.

ಈ ಪ್ರಾಪರ್ಟಿಯಿಂದ ಪ್ರಭಾಸ್​ಗೆ ತಿಂಗಳಿಗೆ ಬರುತ್ತೆ 40 ಲಕ್ಷ ರೂಪಾಯಿ ಬಾಡಿಗೆ
ಪ್ರಭಾಸ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Oct 22, 2024 | 7:43 AM

ಸ್ಟಾರ್ ಹೀರೋ ಆದ ಬಳಿಕ ಸೆಲೆಬ್ರಿಟಿಗಳು ರಿಯಲ್ ಎಸ್ಟೇಟ್​ ಬಿಸ್ನೆಸ್ ಕಡೆ ಗಮನ ಹರಿಸುತ್ತಾರೆ. ದೇಶ-ವಿದೇಶಗಳಲ್ಲಿ ಹಣ ಹೂಡಿಕೆ ಮಾಡುತ್ತಾರೆ. ಅದರಲ್ಲೂ ಟಾಲಿವುಡ್ ಸೆಲೆಬ್ರಿಟಿಗಳು ಬಾಲಿವುಡ್ ಸೆಲೆಬ್ರಿಟಿಗಳು ಇದರಲ್ಲಿ ಮುಂದಿದ್ದಾರೆ. ಚಿರಂಜೀವಿ, ಅಮಿತಾಭ್ ಬಚ್ಚನ್ ಸೇರಿದಂತೆ ಅನೇಕರು ಹಲವು ಕಡೆಗಳಲ್ಲಿ ಸೈಟ್​ಗಳನ್ನು ಹೊಂದಿದ್ದಾರೆ. ಇದಕ್ಕೆ ಪ್ರಭಾಸ್ ಕೂಡ ಹೊರತಾಗಿಲ್ಲ. ಅವರು ರಿಯಲ್ ಎಸ್ಟೇಟ್ ಬಿಸ್ನೆಸ್ ಹೊಂದಿದ್ದಾರೆ.

ಪ್ರಭಾಸ್ ಅವರಿಗೆ ಅಕ್ಟೋಬರ್ 23ರಂದು ಜನ್ಮದಿನ. ಕೆಲವು ದಿನಗಳ ಮೊದಲೇ ಫ್ಯಾನ್ಸ್ ಇದನ್ನು ಸಂಭ್ರಮಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಶುಭಾಶಯ ಕೋರುತ್ತಿದ್ದಾರೆ. ‘ಬಾಹುಬಲಿ 2’, ಕಲ್ಕಿ 2898 ಎಡಿ’ ಸಿನಿಮಾಗಳ ಬಳಿಕ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಫ್ಯಾನ್ಸ್ ಸಿಕ್ಕಿದ್ದಾರೆ. ಈ ಮಧ್ಯೆ ಪ್ರಭಾಸ್ ಆಸ್ತಿ ಬಗ್ಗೆ ಚರ್ಚೆ ನಡೆಯುತ್ತಿದೆ.

ಪ್ರಭಾಸ್ ಅವರು ರಿಯಲ್ ಎಸ್ಟೇಟ್ ಬಿಸ್ನೆಸ್ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರು ಇಟಲಿಯಲ್ಲಿ ದೊಡ್ಡ ವಿಲ್ಲಾ ಹೊಂದಿದ್ದಾರೆ. ಇದು ಲಕ್ಷುರಿ ವಿಲ್ಲಾ ಆಗಿದ್ದು ಇದನ್ನು ಅವರು ಬಾಡಿಗೆ ನೀಡುತ್ತಾರೆ. ಇಟಲಿಗೆ ಬರೋ ಟೂರಿಸ್ಟ್​ಗಳು ಇದನ್ನು ಬುಕ್ ಮಾಡುತ್ತಾರೆ ಎನ್ನಲಾಗಿದೆ. ಇದರಿಂದ ಪ್ರತಿ ತಿಂಗಳು ಅವರಿಗೆ 40 ಲಕ್ಷ ರೂಪಾಯಿ ಬಾಡಿಗೆ ಬರುತ್ತದೆ ಎನ್ನಲಾಗಿದೆ.

ಪ್ರಭಾಸ್ ಅವರು ಬಿಸ್ನೆಸ್​ ಕಡೆ ಹೆಚ್ಚು ಒಲವು ತೋರಿದ್ದಾರೆ. ಈ ಕಟ್ಟಡದಿಂದ ಪ್ರತಿ ತಿಂಗಳು 40 ಲಕ್ಷ ರೂಪಾಯಿ ಬರುತ್ತದೆ ಎಂದರೆ ಅದು ಸಣ್ಣ ವಿಚಾರ ಅಲ್ಲವೇ ಅಲ್ಲ. ಈ ರೀತಿ ಅನೇಕ ಕಟ್ಟಡಗಳನ್ನು ಅವರು ಹೈದರಾಬಾದ್​ನಲ್ಲಿ ಹೊಂದಿದ್ದಾರೆ. ಅಲ್ಲಿಂದ ಅವರಿಗೆ ಭರ್ಜರಿ ಲಾಭ ಸಿಗುತ್ತಿದೆ. ಸಿನಿಮಾದ ಹೊರತಾಗಿಯೂ ಅವರು ಹಣ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮುಂಚಿತವಾಗಿ ನಟ ಪ್ರಭಾಸ್ ಜನ್ಮದಿನ ಆಚರಿಸಿದ ಟೋಕಿಯೋ ಅಭಿಮಾನಿಗಳು

ಪ್ರಭಾಸ್ ನಟನೆಯ ‘ಆದಿಪುರುಷ್’ ಸಿನಿಮಾ ಈ ವರ್ಷ ರಿಲೀಸ್ ಆಗಿ ಲಾಭ ಮಾಡಿತು. ಈ ಚಿತ್ರ ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಇದರಲ್ಲಿ ಪ್ರಭಾಸ್ ಪಾತ್ರವನ್ನು ಕೆಲವರು ಟೀಕಿಸಿದ್ದೂ ಇದೆ.  ಈ ಚಿತ್ರಕ್ಕೆ ಸೀಕ್ವೆಲ್ ಕೂಡ ಬರುತ್ತಿದೆ. ಇದಲ್ಲದೆ, ‘ಸ್ಪಿರಿಟ್’ ಹಾಗೂ ‘ರಾಜಾ ಸಾಬ್’ ಹೆಸರಿನ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಈ ಚಿತ್ರಗಳ ಬಗ್ಗೆ ಫ್ಯಾನ್ಸ್​ಗೆ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ