AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ನಲ್ಲಿ ಪಾತ್ರೆ ತೊಳೆದ ಪರಿಣಾಮ; ಲಾಯರ್ ಜಗದೀಶ್​ಗೆ ಮನೆಯಲ್ಲಿ ಎಂಥಾ ಸ್ಥಿತಿ

ಬಿಗ್ ಬಾಸ್ ಮನೆಯಲ್ಲಿ ಹಗಲು ರಾತ್ರಿ ಎನ್ನದೆ ಸಿಕ್ಕ ಸಿಕ್ಕಾಗಲೆಲ್ಲ ಜಗದೀಶ್ ಅವರು ಅಡುಗೆ ಮನೆಯ ವಾಶ್ ಬೇಸ್​ನಲ್ಲಿ ನಿಲ್ಲುತ್ತಿದ್ದರು. ಇದು ಅವರ ಪತ್ನಿಯ ಗಮನಕ್ಕೆ ಬಂದಿದೆ. ಈಗ ಅವರು ಮನೆಯಲ್ಲೂ ಪಾತ್ರೆ ತೊಳೆಯೋ ಪರಿಸ್ಥಿತಿ ಬಂದೊದಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ವೈರಲ್ ಆಗಿದೆ.

ಬಿಗ್​ ಬಾಸ್​ನಲ್ಲಿ ಪಾತ್ರೆ ತೊಳೆದ ಪರಿಣಾಮ; ಲಾಯರ್ ಜಗದೀಶ್​ಗೆ ಮನೆಯಲ್ಲಿ ಎಂಥಾ ಸ್ಥಿತಿ
ಬಿಗ್ ಬಾಸ್
ರಾಜೇಶ್ ದುಗ್ಗುಮನೆ
|

Updated on: Oct 22, 2024 | 7:05 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ದೊಡ್ಡ ಮಟ್ಟದಲ್ಲಿ ಸ್ದದು ಮಾಡಿದ್ದು ಲಾಯರ್ ಜಗದೀಶ್. ಮೂರು ವಾರ ಕಳೆಯುವುದರ ಒಳಗೆ ಅವರು ದೊಡ್ಮನೆಯಿಂದ ಔಟ್ ಆದರು. ಹೊರ ಹೋದ ಬಳಿಕ ಅವರಿಗೆ ಸೃಷ್ಟಿ ಆಗಿರೋ ಅಭಿಮಾನಿ ಬಳಗ ಎಂಥದ್ದು ಎಂಬುದು ಗೊತ್ತಾಗಿದೆ. ಈಗ ಅವರು ಮನೆಯಲ್ಲೂ ಪಾತ್ರೆ ತೊಳೆಯೋ ಪರಿಸ್ಥಿತಿ ಬಂದೊದಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ವೈರಲ್ ಆಗಿದೆ.

‘ಬಿಗ್ ಬಾಸ್’ ಮನೆಯಲ್ಲಿ ಜಗದೀಶ್ ಅವರು ಜಗಳಕ್ಕೆ ಮಾತ್ರ ನಿಲ್ಲುತ್ತಿರಲಿಲ್ಲ. ಅವರು ಅಗತ್ಯ ಬಂದಾಗ ಪಾತ್ರೆ ತೊಳೆಯುತ್ತಿದ್ದರು. ಇದು ಅವರ ನೆಚ್ಚಿನ ಕಾಯಕಗಳಲ್ಲಿ ಒಂದಾಗಿತ್ತು. ಈ ಕಾರಣದಿಂದಲೇ ಹಗಲು ರಾತ್ರಿ ಎನ್ನದೆ ಸಿಕ್ಕ ಸಿಕ್ಕಾಗಲೆಲ್ಲ ಅಡುಗೆ ಮನೆಯ ವಾಶ್ ಬೇಸ್​ನಲ್ಲಿ ನಿಲ್ಲುತ್ತಿದ್ದರು. ಇದು ಅವರ ಪತ್ನಿಯ ಗಮನಕ್ಕೆ ಬಂದಿದೆ.

ಬಿಗ್ ಬಾಸ್ ಮಾಜಿ ಸ್ಪರ್ಧಿ ಕಿರಿಕ್ ಕೀರ್ತಿ ಅವರು ಫನ್ ಆಗಿ ಒಂದು ವಿಡಿಯೋ ಮಾಡಿದ್ದಾರೆ. ಈ ವಿಡಿಯೋದಲ್ಲಿ ಕೀರ್ತಿ ಅವರು ಜಗದೀಶ್ ಮನೆ ಒಳಗೆ ಬರುತ್ತಾರೆ. ಅಲ್ಲಿ ಜಗದೀಶ್ ಅವರು ಪಾತ್ರೆ ತೊಳೆಯುತ್ತಾ ನಿಂತಿರುತ್ತಾರೆ. ‘ಏನ್ ಸರ್ ಸಂದರ್ಶನ ಕೊಡ್ತೀನಿ ಅಂಥ ಹೇಳಿ ಪಾತ್ರೆ ತೊಳೆಯುತ್ತಿದ್ದೀರಲ್ಲ’ ಎಂದು ಪ್ರಶ್ನೆ ಮಾಡಿದರು ಕೀರ್ತಿ. ಇದಕ್ಕೆ ಜಗದೀಶ್ ಉತ್ತರ ಕೊಟ್ಟರು.

‘ಏನ್ ಮಾಡೋದು. ನಮ್ಮ ಮನೆ, ನಮ್ ಪಾತ್ರೆ ತೊಳೆಯೋದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನೆ ಮಾಡಿದರು ಜಗದೀಶ್. ಇದಕ್ಕೆ ಜಗದೀಶ್ ಪತ್ನಿ ಉತ್ತರ ನೀಡುತ್ತಾರೆ. ‘ಬಿಗ್ ಬಾಸ್ ಮನೆಯಲ್ಲಿ ರಾತ್ರಿ-ಹಗಲು ಎನ್ನದೇ ತೊಳೆಯುತ್ತಿದ್ದರು. ಹೀಗಾಗಿ ತೊಳೆಸುತ್ತಾ ಇದ್ದೇನೆ’ ಎನ್ನುತ್ತಾರೆ ಜಗದೀಶ್ ಪತ್ನಿ.

ಇದನ್ನೂ ಓದಿ: ಜಗದೀಶ್ ಇದ್ದಾಗ ಜಗಳ, ಹನುಮಂತ ಬಂದ್ಮೇಲೆ ನಗು: ಬದಲಾಯ್ತು ಬಿಗ್ ಬಾಸ್ ಮನೆ

ಸದ್ಯ ಈ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಹಲವರು ಹಲವು ರೀತಿಯ ಕಮೆಂಟ್ ಮಾಡಿದ್ದಾರೆ. ಅನೇಕರ ಗಮನ ಮನೆಯ ಮೇಲೆ ಹೋಗಿದೆ. ಮನೆ ಅಷ್ಟು ಕಲರ್​ಫುಲ್ ಆಗಿಲ್ಲ. ಹೀಗಾಗಿ, ಕೆಲವರು ಜಗದೀಶ್ ಹೇಳಿದ ಮಾತನ್ನು ನೆನಪಿಸಿಕೊಂಡಿದ್ದಾರೆ. ‘ನೀವೇನಾ ನಿಮ್ಮ ಮನೆಯ ನಾಯಿಗೆ ಒಂದು ಲಕ್ಷ ರೂಪಾಯಿ ಖರ್ಚು ಮಾಡುವವರು’ ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.