ವೈದ್ಯರ ಕೋರಿಕೆಗೆ ಕೊನೆಗೂ ಮಣಿದ ದರ್ಶನ್; ಹೆಲ್ತ್ ಬಗ್ಗೆ ಗುಡ್​ನ್ಯೂಸ್

ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಸೇರಿ ನಾಲ್ಕು ತಿಂಗಳುಗಳು ಕಳೆದಿವೆ. ಹೊರ ಬರಲು ಅವರು ಸಾಕಷ್ಟು ಪ್ರಯತ್ನ ಮಾಡುತ್ತಿದ್ದರಾದರೂ ಅದು ಸಾಧ್ಯವಾಗುತ್ತಿಲ್ಲ. ದರ್ಶನ್ ಅವರ ಜಾಮೀನು ಅರ್ಜಿ ಈಗಾಗಲೇ ಕೆಳ ಹಂತದ ಕೋರ್ಟ್​ನಲ್ಲಿ ರಿಜೆಕ್ಟ್ ಆಗಿದೆ. ಈ ಮಧ್ಯೆ ದರ್ಶನ್​ಗೆ ಕೊಂಚ ರಿಲೀಫ್ ಆಗುವಂತಹ ಬೆಳವಣಿಗೆ ನಡೆದಿದೆ.

ವೈದ್ಯರ ಕೋರಿಕೆಗೆ ಕೊನೆಗೂ ಮಣಿದ ದರ್ಶನ್; ಹೆಲ್ತ್ ಬಗ್ಗೆ ಗುಡ್​ನ್ಯೂಸ್
ದರ್ಶನ್
Follow us
| Updated By: ರಾಜೇಶ್ ದುಗ್ಗುಮನೆ

Updated on:Oct 21, 2024 | 12:53 PM

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್‌ ಎ2 ಆರೋಪಿ ಆಗಿದ್ದಾರೆ. ಬಳ್ಳಾರಿ ಜೈಲಿನಲ್ಲಿರುವ ಅವರಿಗೆ ತೀವ್ರ ಬೆನ್ನು ನೋವು ಉಂಟಾಗಿದೆ. ಅವರಿಗೆ ಎಂಆರ್‌ಐ ಸ್ಕಾನಿಂಗ್​ನ ಅಗತ್ಯವಿದೆ. ಇದನ್ನು ಮಾಡಿಸಲು ವೈದ್ಯರು ಸೂಚಿಸುತ್ತಲೇ ಬಂದಿದ್ದರು. ಆದರೆ, ಇದಕ್ಕೆ ದರ್ಶನ್ ಒಪ್ಪಿರಲಿಲ್ಲ. ಈಗ ಬಳ್ಳಾರಿಯ ವಿಮ್ಸ್‌ನಲ್ಲಿ ಎಂಆರ್‌ಐ ಸ್ಕಾನಿಂಗ್ ಮಾಡಿಸಲು ನಿರ್ಧರಿಸಲಾಗಿದೆ. ಇದಕ್ಕೆ ದರ್ಶನ್ ಕೂಡ ಒಪ್ಪಿಗೆ ನೀಡಿದ್ದಾರೆ.

ದರ್ಶನ್ ಬೆನ್ನುನೋವು ಸಮಸ್ಯೆ ಮಿತಿಮೀರಿದೆ. ಫಿಸಿಯೋಥೆರಪಿಯನ್ನು ಈಗಾಗಲೇ ಮಾಡಿಸಲಾಗುತ್ತಿದೆ. ಆದಾಗ್ಯೂ ಬೆನ್ನು ನೋವು ಕಡಿಮೆ ಆಗುತ್ತಿಲ್ಲ. ಹೀಗಾಗಿ ದರ್ಶನ್ ಜೊತೆ ಜೈಲಿನ ಅಧಿಕಾರಿಗಳು ಮಾತನಾಡಿದ್ದು, ಸ್ಕ್ಯಾನಿಂಗ್ ಮಾಡಿಸಲೇಬೇಕು ಎಂದಿದ್ದಾರೆ. ಜೈಲಾಧಿಕಾರಿಗಳ ಮಾತಿಗೆ ದರ್ಶನ್ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಅಕ್ಟೋಬರ್ 22ರಂದು ದರ್ಶನ್ ಕುಟುಂಬಸ್ಥರು ಜೈಲಿಗೆ ಭೇಟಿ ನೀಡಲಿದ್ದಾರೆ. ಕುಟುಂಬಸ್ಥರೊಂದಿಗೆ ಮಾತನಾಡಿ ಸ್ಕಾನಿಂಗ್‌ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಮಾಧ್ಯದಮವರು ಮುತ್ತಿಕೊಳ್ಳುತ್ತಾರೆ ಹಾಗೂ ಭದ್ರತೆಯ ಸಮಸ್ಯೆ ಆಗುತ್ತದೆ ಎಂದು ದರ್ಶನ್ ಅವರು ಸ್ಕಾನಿಂಗ್ ಬೇಡ ಎನ್ನುತ್ತಿದ್ದರು. ಈಗ ಬೆನ್ನುನೋವು ಕೈಮೀರಿರುವುದರಿಂದ ದರ್ಶನ್ ಒಪ್ಪಿಗೆ ಕೊಡಲೇಬೇಕಾದ ಅನಿವಾರ್ಯತೆ ಮೂಡಿದೆ.

ಈಗಾಗಲೇ ಬಳ್ಳಾರಿಯ ವಿಮ್ಸ್ ನಿರ್ದೇಶಕರ ಜೊತೆ ಮೇಲಾಧಿಕಾರಿಗಳು ಮಾತನಾಡಿದ್ದಾರೆ. ಅಕ್ಟೋಬರ್ 22ರಂದು ಎಂಆರ್‌ಐ ಸ್ಕಾನಿಂಗ್ ಬಗ್ಗೆ ದಿನಾಂಕ ನಿರ್ಧಾರ‌‌ ಮಾಡಲಾಗುತ್ತದೆ. ವಿಮ್ಸ್​​ನಲ್ಲಿ ಸೆಕ್ಯುರಿಟಿ ಕೊಡುವ ಬಗ್ಗೆ, ಸ್ಕಾನಿಂಗ್ ಬಗ್ಗೆ ಅಧಿಕಾರಿಗಳು ಚರ್ಚೆ ನಡೆಸಲಿದ್ದಾರೆ.

ಇದನ್ನೂ ಓದಿ:  ಕೊಲೆ ಆರೋಪಿ ದರ್ಶನ್​​ಗೆ ಕೊನೆಗೂ ಸಿಕ್ತು ರಿಲೀಫ್; ಫ್ಯಾನ್ಸ್​ಗೆ ಗುಡ್ ನ್ಯೂಸ್

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿ 130 ದಿನಗಳ ಮೇಲಾಗಿದೆ. ದರ್ಶನ್ ಅವರು ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದು, ಕೆಳ ಹಂತದ ಕೋರ್ಟ್​ನಲ್ಲಿ ಇದು ರಿಜೆಕ್ಟ್ ಆಗಿದೆ. ಹೈಕೋರ್ಟ್​ನಲ್ಲಿ ದರ್ಶನ್ ಪರವಾಗಿ ಅರ್ಜಿ ಸಲ್ಲಿಕೆ ಆಗಿದೆ. ಈ ಅರ್ಜಿ ಯಾವಾಗ ವಿಚಾರಣೆಗೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಅಲ್ಲಿಯೂ ಜಾಮೀನು ಸಿಗದಿದ್ದರೆ ಅವರು ಸುಪ್ರೀಂಕೋರ್ಟ್ ಮೊರೆ ಹೋಗಲಿದ್ದಾರೆ. ಅವರ ಅನಾರೋಗ್ಯದ ವಿಚಾರ ಜಾಮೀನು ಪಡೆಯಲು ಪ್ರಮುಖ ಅಸ್ತ್ರವಾಗಿ ಬಳಕೆ ಆಗೋ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:43 pm, Mon, 21 October 24

ಎರಡು ಬಸ್​ಗಳ ನಡುವೆ ಡಿಕ್ಕಿ, ಪ್ರಯಾಣಿಕರು ಪವಾಡಸದೃಶ ರೀತಿಯಲ್ಲಿ ಪಾರು
ಎರಡು ಬಸ್​ಗಳ ನಡುವೆ ಡಿಕ್ಕಿ, ಪ್ರಯಾಣಿಕರು ಪವಾಡಸದೃಶ ರೀತಿಯಲ್ಲಿ ಪಾರು
ಬಿಜೆಪಿ-ಜೆಡಿಎಸ್ ಮೈತ್ರಿಗೆ ನಾವು ಹುಳಿ ಹಿಂಡುತ್ತಿಲ್ಲವೆಂದ ಚಲುವರಾಯಸ್ವಾಮಿ
ಬಿಜೆಪಿ-ಜೆಡಿಎಸ್ ಮೈತ್ರಿಗೆ ನಾವು ಹುಳಿ ಹಿಂಡುತ್ತಿಲ್ಲವೆಂದ ಚಲುವರಾಯಸ್ವಾಮಿ
ಇಂದು ಸುರಿದ ಮಳೆಗೆ ಬೆಂಗಳೂರು ಡಬಲ್ ರೋಡಲ್ಲಿ ಸಿಂಗಲ್ ರೋಡೂ ಕಾಣಿಸ್ತಿಲ್ಲ
ಇಂದು ಸುರಿದ ಮಳೆಗೆ ಬೆಂಗಳೂರು ಡಬಲ್ ರೋಡಲ್ಲಿ ಸಿಂಗಲ್ ರೋಡೂ ಕಾಣಿಸ್ತಿಲ್ಲ
ಮೆಕ್​ಡೊನಾಲ್ಡ್​ನಲ್ಲಿ ಫ್ರೆಂಚ್​ಫ್ರೈಸ್ ಮಾಡಿದ ಡೊನಾಲ್ಡ್​ ಟ್ರಂಪ್
ಮೆಕ್​ಡೊನಾಲ್ಡ್​ನಲ್ಲಿ ಫ್ರೆಂಚ್​ಫ್ರೈಸ್ ಮಾಡಿದ ಡೊನಾಲ್ಡ್​ ಟ್ರಂಪ್
‘ಬರಬಾರದಿತ್ತು’; ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ಸುಸ್ತಾದ ಹನುಮಂತ್
‘ಬರಬಾರದಿತ್ತು’; ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ಸುಸ್ತಾದ ಹನುಮಂತ್
ಬೆಂಗಳೂರಿನಲ್ಲಿ ಮಳೆ ಆರ್ಭಟ: ರಸ್ತೆಯಲ್ಲಿ ನಿಂತ ನೀರು, ವಾಹನ ಸವಾರರ ಪರದಾಟ
ಬೆಂಗಳೂರಿನಲ್ಲಿ ಮಳೆ ಆರ್ಭಟ: ರಸ್ತೆಯಲ್ಲಿ ನಿಂತ ನೀರು, ವಾಹನ ಸವಾರರ ಪರದಾಟ
Daily Devotional: ರತ್ನ ಧಾರಣೆಯ ಹಿಂದಿನ ರಹಸ್ಯ ತಿಳಿಯಿರಿ
Daily Devotional: ರತ್ನ ಧಾರಣೆಯ ಹಿಂದಿನ ರಹಸ್ಯ ತಿಳಿಯಿರಿ
Nithya Bhavishya: ಈ ರಾಶಿಯ ಸರ್ಕಾರಿ ನೌಕರರು ಇಂದು ಶುಭ ಸುದ್ದಿ ಕೇಳುವರು
Nithya Bhavishya: ಈ ರಾಶಿಯ ಸರ್ಕಾರಿ ನೌಕರರು ಇಂದು ಶುಭ ಸುದ್ದಿ ಕೇಳುವರು
ನನ್ನ ವರ್ಚಸ್ಸು ಹಾಳು ಮಾಡಲು ಯತ್ನ: ಬಿಜೆಪಿ ನಾಯಕರ ಮೇಲೆ ಹೆಚ್​ಡಿಕೆ ಗರಂ
ನನ್ನ ವರ್ಚಸ್ಸು ಹಾಳು ಮಾಡಲು ಯತ್ನ: ಬಿಜೆಪಿ ನಾಯಕರ ಮೇಲೆ ಹೆಚ್​ಡಿಕೆ ಗರಂ
BBK11: ಜಗದೀಶ್ ಬಳಿಕ ಬಿಗ್ ಬಾಸ್ ಮನೆಯಲ್ಲಿ ಹನುಮಂತನ ಹವಾ ಶುರು
BBK11: ಜಗದೀಶ್ ಬಳಿಕ ಬಿಗ್ ಬಾಸ್ ಮನೆಯಲ್ಲಿ ಹನುಮಂತನ ಹವಾ ಶುರು