ಬಘೀರನೇ ರಕ್ಷಕ-ರಾಕ್ಷಸ; ಗಮನ ಸೆಳೆದ ಶ್ರೀಮುರಳಿ ಸಿನಿಮಾದ ಟ್ರೇಲರ್
Bagheera Trailer: ಶ್ರೀಮುರಳಿ ನಾಯಕನಾಗಿ ನಟಿಸಿ, ಹೊಂಬಾಳೆ ಫಿಲಮ್ಸ್ ಬಂಡವಾಳ ಹೂಡಿದ್ದ ‘ಬಘೀರ’ ಸಿನಿಮಾ ವರ್ಷಗಳಿಂದಲೂ ಚಿತ್ರೀಕರಣ ಚಾಲ್ತಿಯಲ್ಲಿತ್ತು. ಶ್ರೀಮುರಳಿಗೆ ಆದ ಗಾಯಗಳು ಇನ್ನಿತರೆ ಕಾರಣಗಳಿಂದ ಸಿನಿಮಾದ ಬಿಡುಗಡೆ ತಡವಾಗುತ್ತಲೇ ಬಂದಿತ್ತು. ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ.
ನಟ ಶ್ರೀಮುರಳಿ ಅವರು ಇತ್ತೀಚೆಗೆ ಆ್ಯಕ್ಷನ್ ಹೀರೋ ಎನಿಸಿಕೊಂಡಿದ್ದಾರೆ. ಅವರು ‘ಬಘೀರ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಅಕ್ಟೋಬರ್ 31ರಂದು ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲು ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಚಿತ್ರಕ್ಕೆ, ಡಾ. ಸೂರಿ ಅವರು ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಶ್ರೀಮುರಳಿ ಎರಡು ಶೇಡ್ನ ಕಾಣಿಸಿಕೊಂಡಿದ್ದಾರೆ.
ಶ್ರೀಮುರಳಿ ಅವರು ‘ಬಘೀರ’ ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಥಾ ನಾಯಕ ಕೆಟ್ಟವರ ನಾಶ ಮಾಡಲು ‘ಬಘೀರ’ನಾಗುತ್ತಾನೆ. ಅವರದ್ದು ಎರಡು ಶೇಡ್ನ ಪಾತ್ರ ಅನ್ನೋದು ಟ್ರೇಲರ್ನಲ್ಲಿ ಗೊತ್ತಾಗಿದೆ. ಸಿನಿಮಾ ಉದ್ದಕ್ಕೂ ಭರ್ಜರಿ ಆ್ಯಕ್ಷನ್ ಇರಲಿದೆ ಎಂಬುದು ಟ್ರೇಲರ್ ನೋಡಿದವರಿಗೆ ಸ್ಪಷ್ಟವಾಗಿದೆ. ಈ ಚಿತ್ರಕ್ಕೆ ಪ್ರಶಾಂತ್ ನೀಲ್ ಅವರು ಕಥೆ ಬರೆದಿದ್ದಾರೆ. ಅಲ್ಲಲ್ಲಿ ‘ಕೆಜಿಎಫ್’ನಂತೆ ಬ್ಲ್ಯಾಕ್ಶೇಡ್ನಲ್ಲಿ ಸಿನಿಮಾ ಮೂಡಿ ಬಂದಿದೆ.
ಈ ಚಿತ್ರದಲ್ಲಿ ಶ್ರೀಮುರಳಿ, ರುಕ್ಮಿಣಿ ವಸಂತ್, ಪ್ರಕಾಶ್ ರಾಜ್, ರಂಗಾಯಣ ರಘು, ಅಚ್ಯುತ್ ಕುಮಾರ್, ಗರುಡಾ ರಾಮ್, ಸುಧಾರಾಣಿ ಮೊದಲಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ದೀಪಾವಳಿ ಪ್ರಯುಕ್ತ ಸಿನಿಮಾ ಅಕ್ಟೋಬರ್ 31ರಂದು ರಿಲೀಸ್ ಆಗಲಿದೆ.
ಈ ಚಿತ್ರದಲ್ಲಿ ಶ್ರೀಮುರಳಿ ಅವರು ಬ್ಯಾಟ್ಮ್ಯಾನ್ ರೀತಿಯೂ ಕಾಣಿಸಿಕೊಳ್ಳುತ್ತಾರೆ. ಈ ಟ್ರೇಲರ್ ಕೆಲವೇ ನಿಮಿಷಗಳಲ್ಲಿ ಸಾವಿರಾರು ಬಾರಿ ವೀಕ್ಷಣೆ ಕಂಡಿದೆ. ‘ರುದ್ರ + ಹರ= ಬಘೀರ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ‘ಬಘೀರ’ ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲೂ ರಿಲೀಸ್ ಆಗುತ್ತಿದೆ. ಪ್ರಶಾಂತ್ ನೀಲ್ ಅವರಿಗೆ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ಅವರೇ ಈ ಚಿತ್ರಕ್ಕೆ ಕಥೆ ಬರೆದಿರುವುದರಿಂದ ಪರಭಾಷಿಗರು ಚಿತ್ರವನ್ನು ಇಷ್ಟಪಡಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಕೊನೆಗೂ ಘೋಷಣೆಯಾಯ್ತು ಶ್ರೀಮುರಳಿಯ ‘ಬಘೀರ’ ಬಿಡುಗಡೆ ದಿನಾಂಕ
ಶ್ರೀಮುರಳಿ ನಟನೆಯ ಕೊನೆಯ ಸಿನಿಮಾ ‘ಮದಗಜ’. ಈ ಚಿತ್ರ 2021ರಲ್ಲಿ ರಿಲೀಸ್ ಆಯಿತು. ಈ ಚಿತ್ರ ಸಾಧಾರಣ ಮೆಚ್ಚುಗೆ ವ್ಯಕ್ತವಾಯಿತು. ಈಗ ಅವರು ಮತ್ತೆ ತೆರೆಮೇಲೆ ಬರಲು ರೆಡಿ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.