AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಂಜಿತ್ ಮನೆಯಲ್ಲಿ ಪ್ಲೇ ಆಗ್ತಿದೆ ದುಃಖದ ಹಾಡು; ವಿವರಿಸಿದ ಸುದೀಪ್

ವಾರದ ಪಂಚಾಯ್ತಿಯಲ್ಲಿ ಲಾಯರ್ ಜಗದೀಶ್ ಪರವಾಗಿ ಕಿಚ್ಚ ಸುದೀಪ್ ಮಾತನಾಡಿದ್ದರು. ಲಾಯರ್ ಜಗದೀಶ್ ಅನ್ನು ಇತರೆ ಸ್ಪರ್ಧಿಗಳು ಪ್ರವೋಕ್ ಮಾಡಿದ್ದರಿಂದಲೇ ಆ ವ್ಯಕ್ತಿ ರೆಬೆಲ್ ಆದರು ಎಂದರು. ಜೊತೆಗೆ ರಂಜಿತ್ ಹೊರ ಹೋದ ಬಗ್ಗೆಯೂ ಅವರು ಮಾತನಾಡಿದ್ದಾರೆ.

ರಂಜಿತ್ ಮನೆಯಲ್ಲಿ ಪ್ಲೇ ಆಗ್ತಿದೆ ದುಃಖದ ಹಾಡು; ವಿವರಿಸಿದ ಸುದೀಪ್
ಸುದೀಪ್​-ರಂಜಿತ್
Follow us
ರಾಜೇಶ್ ದುಗ್ಗುಮನೆ
|

Updated on: Oct 21, 2024 | 7:05 AM

ರಂಜಿತ್ ಅವರಿಗೆ ಈ ಬಾರಿಯ ಬಿಗ್ ಬಾಸ್​ನಲ್ಲಿ ಫಿನಾಲೆವರೆಗೆ ಹೋಗುವ ಅವಕಾಶ ಇತ್ತು. ಅವರು ಟಾಪ್​ ಐದರಲ್ಲಿ ಒಬ್ಬರಾಗುತ್ತಾರೆ ಎಂದು ಅನೇಕರು ಊಹಿಸಿದ್ದರು. ಆದರೆ, ಅವರು ಮೂರನೇ ವಾರವೇ ಎಲಿಮಿನೇಟ್ ಆಗಿದ್ದಾರೆ. ಅವರು ಜಗದೀಶ್ ಅವರ ಮೈ ಮುಟ್ಟಿದ ಆರೋಪದಲ್ಲಿ ಮನೆಗೆ ಹೋಗಿದ್ದಾರೆ. ಈಗ ಅವರ ಮನೆಯಲ್ಲಿ ಒಂದು ಹಾಡು ಪ್ಲೇ ಆಗುತ್ತಿದೆಯಂತೆ. ಈ ಬಗ್ಗೆ ಸುದೀಪ್ ಅವರು ಮಾತನಾಡಿದ್ದಾರೆ.

ಕಿಚ್ಚ ಸುದೀಪ್ ಅವರಿಗೆ ರಂಜಿತ್ ಆಪ್ತರು. ರಂಜಿತ್ ಈ ರೀತಿ ಮಾಡಿಕೊಂಡು ಎಲಿಮಿನೇಟ್ ಆದ ಬಗ್ಗೆ ಸುದೀಪ್​ಗೆ ಕೋಪ ಇದೆ. ಅವರು ಇನ್ನೂ ಹಲವು ದಿನ ಬಿಗ್ ಬಾಸ್ ಮನೆಯಲ್ಲಿ ಇರಬೇಕು ಎಂಬುದು ಸುದೀಪ್ ಆಸೆ ಆಗಿತ್ತು. ಆದರೆ, ಸುಖಾಸುಮ್ಮನೆ ಫೈಟ್ ಮಾಡಿಕೊಂಡು ಅವರು ಹೊರ ಹೋಗಿದ್ದಾರೆ. ಈ ಬಗ್ಗೆ ವೀಕೆಂಡ್​ನಲ್ಲಿ ಸುದೀಪ್ ಮಾತನಾಡಿದ್ದಾರೆ.

‘ಬಿಗ್ ಬಾಸ್’ ವೇದಿಕೆ ಮೇಲೆ ರಂಜಿತ್ ಎಲಿಮಿನೇಟ್ ಆದ ಬಗ್ಗೆ ಸುದೀಪ್ ಮಾತನಾಡಿದ್ದಾರೆ. ರಂಜಿತ್ ಅವರ ಎಲಿಮಿನೇಷನ್ ಬಗ್ಗೆ ಮಾತನಾಡುತ್ತಾ ನಕ್ಕಿದ್ದಾರೆ. ‘ಎಲಿಮಿನೇಟ್ ಆದ ರಂಜಿತ್ ಮನೆಯಲ್ಲಿ ಈಗ ಒಂದು ಹಾಡು ಪ್ಲೇ ಆಗುತ್ತಿದೆಯಂತೆ. ಯಾವುದು ಗೊತ್ತಾ ಆ ಸಾಂಗ್? ಯಾರೋ ಯಾರೋ ಗೀಚಿ ಹೋದ ಹಾಡು’ ಎಂದು ಸುದೀಪ್ ಅಣಕಿಸಿದ್ದಾರೆ.

ಕಳೆದ ವಾರ ನಡೆದ ಘಟನೆಯಲ್ಲಿ ಮಾತನಾಡಬೇಕಿದ್ದಿದ್ದು ಹಂಸಾ ಹಾಗೂ ಜಗದೀಶ್. ಏಕೆಂದರೆ ಹಂಸಾ ವಿರುದ್ಧ ಜಗದೀಶ್ ಅವರು ಕೆಟ್ಟ ಪದ ಬಳಕೆ ಮಾಡಿದ್ದರು. ಈ ಪ್ರಕರಣದಲ್ಲಿ ರಂಜಿತ್ ಕೂಡ ಭಾಗಿ ಆದರು. ಅವರು ತಮಗೆ ಸಂಬಂಧವೇ ಇಲ್ಲದ ವಿಚಾರದಲ್ಲಿ ತಲೆ ಹಾಕಿ ಎಲ್ಲವನ್ನೂ ಹಾಳು ಮಾಡಿಕೊಂಡರು. ಇದರಿಂದ ಅವರಿಗೆ ಸಾಕಷ್ಟು ನಷ್ಟ ಆಗಿದೆ.

ಇದನ್ನೂ ಓದಿ: ಜಗದೀಶ್​ ಬಗ್ಗೆ ಬಿಗ್​ಬಾಸ್​ ತೋರಿಸದೇ ಇದ್ದಿದ್ದನ್ನು ಹೇಳಿದ ರಂಜಿತ್

ಜಗದೀಶ್ ಅವರು ಬಳಕೆ ಮಾಡಿದ ಅವಾಚ್ಯ ಶಬ್ದಗಳ ವಿಚಾರದಲ್ಲಿ ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಜಗಳವೇ ನಡೆದು ಹೋಗಿದೆ. ಇದು ಕಳೆದ ವಾರದ ಹೈಲೈಟ್ ಆಗಿತ್ತು. ಈಗ ದೊಡ್ಮನೆಗೆ ಹನುಮಂತ್ ಅವರು ವೈಲ್ಡ್ ಕಾರ್ಡ್​ ಮೂಲಕ ಎಂಟ್ರಿ ಪಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ಬಂಟ್ವಾಳ್ ರಹಿಮಾನ್ ಹತ್ಯೆ: ರಣಾಂಗಣವಾದ ಮುಸ್ಲಿಂ ಮುಖಂಡರ ಸಭೆ
ಬಂಟ್ವಾಳ್ ರಹಿಮಾನ್ ಹತ್ಯೆ: ರಣಾಂಗಣವಾದ ಮುಸ್ಲಿಂ ಮುಖಂಡರ ಸಭೆ
ದಲಿತರ ಮಾರಣವಾಗುತ್ತಿದ್ದರೂ ದಲಿತ ನಾಯಕರು ಸುಮ್ಮನಿದ್ದಾರೆ: ಚಲವಾದಿ
ದಲಿತರ ಮಾರಣವಾಗುತ್ತಿದ್ದರೂ ದಲಿತ ನಾಯಕರು ಸುಮ್ಮನಿದ್ದಾರೆ: ಚಲವಾದಿ
ತಳಿರು ತೋರಣ ಮತ್ತು ರಂಗೋಲಿಯಿಂದ ಅಲಂಕೃತಗೊಂಡ ಶಾಲೆ ನೋಡಿ ಮಕ್ಕಳು ಖುಷ್
ತಳಿರು ತೋರಣ ಮತ್ತು ರಂಗೋಲಿಯಿಂದ ಅಲಂಕೃತಗೊಂಡ ಶಾಲೆ ನೋಡಿ ಮಕ್ಕಳು ಖುಷ್
ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನದನ್ನೇ ಮಾಡುವ ತಾಕತ್ತು ನಮಗಿತ್ತು
ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನದನ್ನೇ ಮಾಡುವ ತಾಕತ್ತು ನಮಗಿತ್ತು
ಹೆಸರು ಬದಲಾವಣೆಯಿಂದ ಜನಕ್ಕೆ ಅನುಕೂಲವಾಗೋದಾದರೆ ಸಂತೋಷ: ಯೋಗೇಶ್ವರ್
ಹೆಸರು ಬದಲಾವಣೆಯಿಂದ ಜನಕ್ಕೆ ಅನುಕೂಲವಾಗೋದಾದರೆ ಸಂತೋಷ: ಯೋಗೇಶ್ವರ್
ಕರಾಚಿ ಏರ್​​ಪೋರ್ಟ್​ನಲ್ಲಿ ತೊಳ್ಕೊಳೋಕೂ ನೀರಿಲ್ವಂತೆ, ನಟಿ ಹೇಳಿದ್ದೇನು?
ಕರಾಚಿ ಏರ್​​ಪೋರ್ಟ್​ನಲ್ಲಿ ತೊಳ್ಕೊಳೋಕೂ ನೀರಿಲ್ವಂತೆ, ನಟಿ ಹೇಳಿದ್ದೇನು?