ಪ್ರಭಾಸ್ ‘ಫೌಜಿ’ ಗ್ಲಿಂಪ್ಸ್ ಅಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ತೋರಿಸಿದ್ದಕ್ಕೆ ಕುಟುಂಬಸ್ಥರ ಆಕ್ಷೇಪ

ಪ್ರಭಾಸ್ ನಟನೆಯ ‘ಫೌಜಿ’ ಸಿನಿಮಾದ ಗ್ಲಿಂಪ್ಸ್ ವೀಡಿಯೊ ವಿವಾದಕ್ಕೆ ಈಡಾಗಿದೆ. ನಾಯಕನ ಪಾತ್ರದ ಎಲಿವೇಷನ್‌ಗಾಗಿ ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಹಿಟ್ಲರ್ ಭೇಟಿಯ ಐತಿಹಾಸಿಕ ಸತ್ಯವನ್ನು ತಿರುಚಲಾಗಿದೆ ಎಂದು ಬೋಸ್ ಕುಟುಂಬಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ನಿರ್ದೇಶಕ ಹನು ರಾಘವಪುಡಿ ಅವರ ಕ್ಷಮೆಯಾಚನೆಗೆ ಒತ್ತಾಯಿಸಿದ್ದಾರೆ.

ಪ್ರಭಾಸ್ ‘ಫೌಜಿ’ ಗ್ಲಿಂಪ್ಸ್ ಅಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ತೋರಿಸಿದ್ದಕ್ಕೆ ಕುಟುಂಬಸ್ಥರ ಆಕ್ಷೇಪ
ಫೌಜಿ
Edited By:

Updated on: Oct 27, 2026 | 7:47 AM

ಮುಖ್ಯಾಂಶಗಳು

  • ಪ್ರಭಾಸ್ ‘ಫೌಜಿ’ ಗ್ಲಿಂಪ್ಸ್ ವಿರುದ್ಧ ನೇತಾಜಿ ಕುಟುಂಬಸ್ಥರ ಆಕ್ರೋಶ
  • ಹೀರೋ ಬಿಲ್ಡಪ್‌ಗೆ ಇತಿಹಾಸ ತಿರುಚಿದ್ರಾ ಹನು ರಾಘವಪುಡಿ?
  • ಸಾರ್ವಜನಿಕವಾಗಿ ಕ್ಷಮೆ ಕೇಳಲು ನೇತಾಜಿ ಮೊಮ್ಮಗ ಚಂದ್ರ ಕುಮಾರ್ ಬೋಸ್ ಆಗ್ರಹ

ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಹೊಸ ಸಿನಿಮಾ ‘ಫೌಜಿ’ ಗ್ಲಿಂಪ್ಸ್ ಬಿಡುಗಡೆಯಾಗಿದೆ. ನಟನ ಹುಟ್ಟುಹಬ್ಬದ ಅಂಗವಾಗಿ ಈ ವೀಡಿಯೊ ಹಂಚಿಕೊಳ್ಳಲಾಗಿತ್ತು. ಆದರೆ, ಈಗ ಈ ವೀಡಿಯೊ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಸಿನಿಮಾದಲ್ಲಿ ನಾಯಕನ ಪಾತ್ರವನ್ನು ಎತ್ತಿಹಿಡಿಯಲು ಐತಿಹಾಸಿಕ ಸತ್ಯಗಳನ್ನು ತಿರುಚಲಾಗಿದೆ ಎಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕುಟುಂಬ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಚಿತ್ರದ ಗ್ಲಿಂಪ್ಸ್ ವೀಡಿಯೊ ಹಿಟ್ಲರ್ ಮತ್ತು ನೇತಾಜಿ ನಡುವಿನ ಸಂಭಾಷಣೆಯೊಂದಿಗೆ ಪ್ರಾರಂಭವಾಗುತ್ತದೆ. ಈ ದೃಶ್ಯದಲ್ಲಿ ನೇತಾಜಿ ಬೋಸ್ ಅವರು ಪ್ರಭಾಸ್ ಪಾತ್ರವನ್ನು ಹೊಗಳುವಂತೆ ತೋರಿಸಲಾಗಿದೆ. ಈ ದೃಶ್ಯವನ್ನು ಕಂಡ ನೆಟ್ಟಿಗರು ಮತ್ತು ಸಿನಿಮಾ ವಿಶ್ಲೇಷಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಘಟನೆಯ ನೈಜತೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆ ಆರಂಭವಾಗಿದೆ.

ಈ ವಿಷಯದ ಬಗ್ಗೆ ನೇತಾಜಿ ಅವರ ಮೊಮ್ಮಗ ಚಂದ್ರ ಕುಮಾರ್ ಬೋಸ್ ಪ್ರತಿಕ್ರಿಯಿಸಿದ್ದಾರೆ. ನಿರ್ದೇಶಕ ಹನು ರಾಘವಪುಡಿ ಅವರು ಐತಿಹಾಸಿಕ ಸತ್ಯಗಳನ್ನು ಮರೆತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ನಾಯಕ ನಟನ ಬಿಲ್ಡಪ್‌ಗಾಗಿ ಇತಿಹಾಸವನ್ನು ತಿರುಚುವುದು ಸರಿಯಲ್ಲ ಎಂದು ಅವರು ಗರಂ ಆಗಿದ್ದಾರೆ. ಸ್ವಾತಂತ್ರ್ಯ ಹೋರಾಟವನ್ನು ಸಿನಿಮಾದಲ್ಲಿ ತೋರಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಆದರೆ ಐತಿಹಾಸಿಕ ಸತ್ಯಗಳನ್ನು ಗೌರವಿಸುವುದು ಅತ್ಯಗತ್ಯ ಎಂದು ಅವರು ಹೇಳಿದ್ದಾರೆ.

ಮುಖ್ಯವಾಗಿ ಹಿಟ್ಲರ್ ಮತ್ತು ನೇತಾಜಿ ಭೇಟಿಯ ದೃಶ್ಯದ ಬಗ್ಗೆ ಅವರು ಮಾತನಾಡಿದ್ದಾರೆ. ಇಂತಹ ಸನ್ನಿವೇಶಗಳು ನೇತಾಜಿ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುತ್ತವೆ ಎಂದು ಅವರು ಕಿಡಿಕಾರಿದ್ದಾರೆ. ಐತಿಹಾಸಿಕ ಸತ್ಯಗಳನ್ನು ತಪ್ಪಾಗಿ ಬಿಂಬಿಸಿದ್ದಕ್ಕಾಗಿ ನಿರ್ದೇಶಕ ಹನು ರಾಘವಪುಡಿ ಭಾರತೀಯರ ಕ್ಷಮೆ ಕೇಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬ್ರಿಟೀಷರ ವಿರುದ್ಧ ಹೋರಾಡುವ ‘ಫೌಜಿ’; ಸ್ವತಂತ್ರ ಪೂರ್ವ ಕಥೆಯಲ್ಲಿ ಪ್ರಭಾಸ್

ಈ ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ನಿರ್ಮಿಸುತ್ತಿದೆ. ಮುಂದಿನ ವರ್ಷ ಮಾರ್ಚ್ 19ರಂದು ಚಿತ್ರ ಬಿಡುಗಡೆಯಾಗಲಿದೆ. ಆದರೆ ಈ ಚಿತ್ರ ಕಾಲ್ಪನಿಕವೋ ಅಥವಾ ನೈಜ ಘಟನೆಯೋ ಎಂಬುದನ್ನು ಚಿತ್ರತಂಡ ಸ್ಪಷ್ಟಪಡಿಸಿಲ್ಲ. ಈ ವಿವಾದ ಮುಂದುವರಿಯುವ ಮುನ್ನವೇ ನಿರ್ಮಾಪಕರು ಸೂಕ್ತ ಸ್ಪಷ್ಟನೆ ನೀಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:45 am, Tue, 27 October 26

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us