ಪ್ರಭಾಸ್ (Prabhas) ನಟನೆಯ ‘ಸಲಾರ್’ ಸಿನಿಮಾ ಘೋಷಣೆ ಆಗಿ ಬಹಳ ಸಮಯ ಕಳೆದಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ವರ್ಷ ಏಪ್ರಿಲ್ನಲ್ಲಿ ಸಿನಿಮಾ ರಿಲೀಸ್ ಆಗುತ್ತಿತ್ತು. ಆದರೆ, ಲೆಕ್ಕಾಚಾರ ಉಲ್ಟಾ ಆಗಿತ್ತು. ಕೊರೊನಾ ಅಲೆ ಹಾಗೂ ‘ಕೆಜಿಎಫ್ 2’ ಸಿನಿಮಾ ಕೆಲಸಗಳ ಕಾರಣದಿಂದ ಈ ಚಿತ್ರದ ಕೆಲಸಗಳು ವಿಳಂಬ ಆದವು. ಆದರೆ, ನಿರ್ದೇಶಕ ಪ್ರಶಾಂತ್ ನೀಲ್ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಅವರು ಸಾಕಷ್ಟು ಸಮಯ ತೆಗೆದುಕೊಂಡು ಅಚ್ಚುಕಟ್ಟಾಗಿ ‘ಸಲಾರ್’ ಸಿನಿಮಾ (Salaar Movie) ಕೆಲಸಗಳನ್ನು ಮಾಡಿ ಮುಗಿಸುತ್ತಿದ್ದಾರೆ. ಈ ಮಧ್ಯೆ ‘ಸಲಾರ್’ ಚಿತ್ರದ ಬಗ್ಗೆ ಹೊಸ ಅಪ್ಡೇಟ್ ಒಂದು ಸಿಕ್ಕಿದೆ.
‘ಸಲಾರ್’ ಚಿತ್ರಕ್ಕೆ ಸೀಕ್ವೆಲ್ ಸಿದ್ಧಗೊಳ್ಳಲಿದೆ ಎಂದು ಈ ಮೊದಲೇ ಹೇಳಲಾಗಿತ್ತು. ಆದರೆ, ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಕೆಲವರು ‘ಸಲಾರ್’ಗೆ ಸೀಕ್ವೆಲ್ ಬರಲಿದೆ ಎಂದು ಹೇಳಿದರೆ, ಇನ್ನೂ ಕೆಲವರು ‘ಸಲಾರ್’ಗೆ ಸೀಕ್ವೆಲ್ ಇಲ್ಲ ಎಂದು ಹೇಳುತ್ತಿದ್ದಾರೆ. ಈಗ ‘ಸಲಾರ್ 2’ ಬರುತ್ತದೆಯೋ ಅಥವಾ ಇಲ್ಲವೋ ಎಂಬುದನ್ನು ನಿರ್ಧರಿಸುವ ವಿಚಾರ ಯಾವುದು ಎಂಬುದಕ್ಕೆ ಉತ್ತರ ಸಿಕ್ಕಿದೆ.
‘ಸಲಾರ್’ ಸಿನಿಮಾದ ಶೇ.85 ಶೂಟಿಂಗ್ ಪೂರ್ಣಗೊಂಡಿದೆ. ಜನವರಿ ವೇಳೆಗೆ ಪೂರ್ಣ ಪ್ರಮಾಣದ ಚಿತ್ರೀಕರಣ ಮುಗಿಯಲಿದೆಯಂತೆ. ನಂತರ ಆರು ತಿಂಗಳುಗಳ ಕಾಲ ವಿಎಫ್ಎಕ್ಸ್ ಹಾಗೂ ಮೊದಲಾದ ಕೆಲಸಗಳಿಗಾಗಿ ಪ್ರಶಾಂತ್ ನೀಲ್ ಸಮಯ ಮೀಸಲಿಡಲಿದ್ದಾರೆ. ಕೊನೆಯ ಪ್ರತಿ ವೀಕ್ಷಿಸಿದ ಬಳಿಕವೇ ‘ಸಲಾರ್’ಗೆ ಸೀಕ್ವೆಲ್ ಬೇಕೋ ಅಥವಾ ಬೇಡವೋ ಎಂದು ತಂಡ ನಿರ್ಧಾರ ಮಾಡಲಿದೆ. ಸಿನಿಮಾ ರಿಲೀಸ್ ವೇಳೆ ಈ ವಿಚಾರವನ್ನು ಟೀಂ ಘೋಷಣೆ ಮಾಡಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ‘ಸಲಾರ್’ ಚಿತ್ರದ ಸೆಟ್ಗೆ ಹೊಸ ನಿಯಮ ಜಾರಿಗೆ ತಂದ ಪ್ರಶಾಂತ್ ನೀಲ್; ಚಿಂತೆಗೊಳಗಾಯ್ತು ತಾಂತ್ರಿಕ ವರ್ಗ
‘ಕೆಜಿಎಫ್ 2’ ರಿಲೀಸ್ ಆದ ನಂತರದಲ್ಲಿ ಪ್ರಶಾಂತ್ ನೀಲ್ ಕೆಲಸದ ಬಗ್ಗೆ ಎಲ್ಲರಿಗೂ ನಂಬಿಕೆ ಬಂದಿದೆ. ಹೀಗಾಗಿ, ಸಹಜವಾಗಿಯೇ ‘ಸಲಾರ್’ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ‘ಸಲಾರ್’ ಸಿನಿಮಾ ಕನ್ನಡದ ‘ಉಗ್ರಂ’ ಚಿತ್ರದ ರಿಮೇಕ್ ಎಂದು ಹೇಳಲಾಗಿತ್ತು. ಆದರೆ, ಇದನ್ನು ಪ್ರಶಾಂತ್ ನೀಲ್ ಒಪ್ಪಿಕೊಂಡಿಲ್ಲ. ಪ್ರಭಾಸ್ ಅವರು ‘ಸಲಾರ್’ ಮಾತ್ರವಲ್ಲದೆ ಇನ್ನೂ ಹಲವು ಪ್ರಾಜೆಕ್ಟ್ಗಳಲ್ಲಿ ಬ್ಯುಸಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ