‘ಸಲಾರ್’ ಚಿತ್ರದ ಸೆಟ್​​ಗೆ ಹೊಸ ನಿಯಮ ಜಾರಿಗೆ ತಂದ ಪ್ರಶಾಂತ್ ನೀಲ್​; ಚಿಂತೆಗೊಳಗಾಯ್ತು ತಾಂತ್ರಿಕ ವರ್ಗ

ಈ ಮೊದಲು ರಾಜಮೌಳಿ ಕೂಡ ಇದೇ ತಂತ್ರ ಉಪಯೋಗಿಸಿದ್ದರು. ‘ಆರ್​ಆರ್​ಆರ್​’ ಸಿನಿಮಾದ ಸೆಟ್​ನ ಫೋಟೋಗಳು ಈ ಮೊದಲು ಲೀಕ್ ಆಗಿದ್ದವು. ಅದನ್ನು ತಡೆಯಲು ಮೊಬೈಲ್ ಬಳಕೆ ನಿರ್ಬಂಧ ನಿಯಮ ಜಾರಿಗೆ ತರಲಾಗಿತ್ತು.

 ‘ಸಲಾರ್’ ಚಿತ್ರದ ಸೆಟ್​​ಗೆ ಹೊಸ ನಿಯಮ ಜಾರಿಗೆ ತಂದ ಪ್ರಶಾಂತ್ ನೀಲ್​; ಚಿಂತೆಗೊಳಗಾಯ್ತು ತಾಂತ್ರಿಕ ವರ್ಗ
ಪ್ರಭಾಸ್​-ಪ್ರಶಾಂತ್ ನೀಲ್
TV9kannada Web Team

| Edited By: Rajesh Duggumane

Sep 26, 2022 | 3:00 PM

‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ (KGF Chapter 2) ತೆರೆಕಂಡ ನಂತರದಲ್ಲಿ ಪ್ರಶಾಂತ್ ನೀಲ್ (Prashanth Neel) ಅವರ ಬೇಡಿಕೆ ಹೆಚ್ಚಿದೆ. ಅವರ ಮುಂದಿನ ಸಿನಿಮಾ ಬಗ್ಗೆ ಪ್ರೇಕ್ಷಕರು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರು ಸದ್ಯ ‘ಸಲಾರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದು, ಈ ಚಿತ್ರದಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಮಧ್ಯೆ ಸಿನಿಮಾಗೆ ಸಾಕಷ್ಟು ಅಡೆತಡೆಗಳು ಕೂಡ ಎದುರಾಗುತ್ತಿವೆ. ಹಲವು ಕಾರಣಗಳಿಂದ ಸಿನಿಮಾದ ಕೆಲಸ ಮುಂದಕ್ಕೆ ಹೋಗಿದೆ. ಮುಂದಿನ ವರ್ಷ ಈ ಚಿತ್ರ ರಿಲೀಸ್ ಆಗಲಿದೆ. ಈ ಮಧ್ಯೆ ಪ್ರಶಾಂತ್ ನೀಲ್ ಅವರು ಹೊಸ ನಿಯಮ ಜಾರಿಗೆ ತಂದಿದ್ದಾರೆ. ಇದರಿಂದ ತಾಂತ್ರಿಕ ವರ್ಗಕ್ಕೆ ಚಿಂತೆ ಶುರುವಾಗಿದೆ.

‘ಸಲಾರ್’ ಸಿನಿಮಾದ ಶೂಟಿಂಗ್ ಆರಂಭಗೊಂಡು ಹಲವು ಸಮಯ ಕಳೆದಿದೆ. ಈ ಚಿತ್ರದ ಪೋಸ್ಟರ್ ಹೊರತುಪಡಿಸಿ ಮತ್ತಾವುದೇ ವಿಚಾರ ರಿವೀಲ್ ಆಗಿಲ್ಲ. ಈ ಮಧ್ಯೆ ಅನೇಕ ಬಾರಿ ಸಿನಿಮಾದ ಸೆಟ್​​ನಿಂದ ಫೋಟೋಗಳು ಲೀಕ್ ಆಗಿವೆ. ಸಿನಿಮಾದ ತಾಂತ್ರಿಕ ವರ್ಗದವರೇ ಈ ಸೆಟ್​ನ ಫೋಟೋಗಳನ್ನು ಲೀಕ್ ಮಾಡಿದ್ದಿದೆ. ಇದು ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿದೆ. ಎಷ್ಟೇ ಪ್ರಯತ್ನ ಮಾಡಿದರೂ ಸಿನಿಮಾ ಸೆಟ್​​ನ ಫೋಟೋಗಳು ಆನ್​ಲೈನ್​ನಲ್ಲಿ ವೈರಲ್ ಆಗುತ್ತಿರುವುದನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಪ್ರಶಾಂತ್ ನೀಲ್ ಕಠಿಣ ನಿಯಮ ತರಲು ನಿರ್ಧರಿಸಿದ್ದಾರೆ.

ಸಿನಿಮಾ ತಂಡದವರು ಇನ್ನುಮುಂದೆ ಶೂಟಿಂಗ್​ಗೆ ಬರುವುದಕ್ಕೂ ಮೊದಲು ತಮ್ಮ ಮೊಬೈಲ್​​ಗಳನ್ನು ಕ್ಯಾರವಾನ್​, ರೂಮ್ ಅಥವಾ ನಿಗದಿಪಡಿಸಿದ ಲಾಕರ್​ನಲ್ಲಿ ಇಟ್ಟು ಬರಬೇಕು. ಇದರಿಂದ ಸೆಟ್​ನಲ್ಲಿ ಮೊಬೈಲ್ ಬಳಕೆ ನಿಲ್ಲಲಿದೆ. ಈ ಬಗ್ಗೆ ಸೆಟ್​ನಲ್ಲಿ ಸಿಬ್ಬಂದಿಗೆ ಸೂಚನೆ ಹೋಗಿದೆ ಎನ್ನಲಾಗಿದೆ.  ಇದರಿಂದ ತಾಂತ್ರಿಕ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಎಮರ್ಜೆನ್ಸಿ ಕರೆ ಮಾಡುವುದಿದ್ದರೂ ನಿರ್ದೇಶಕರ ಒಪ್ಪಿಗೆ ಪಡೆದುಕೊಂಡೇ ಮೊಬೈಲ್ ಬಳಕೆ ಮಾಡಬೇಕಿದೆ.

ಈ ಮೊದಲು ರಾಜಮೌಳಿ ಕೂಡ ಇದೇ ತಂತ್ರ ಉಪಯೋಗಿಸಿದ್ದರು. ‘ಆರ್​ಆರ್​ಆರ್​’ ಸಿನಿಮಾದ ಸೆಟ್​ನ ಫೋಟೋಗಳು ಈ ಮೊದಲು ಲೀಕ್ ಆಗಿದ್ದವು. ಅದನ್ನು ತಡೆಯಲು ಮೊಬೈಲ್ ಬಳಕೆ ನಿರ್ಬಂಧ ನಿಯಮ ಜಾರಿಗೆ ತರಲಾಗಿತ್ತು.

ಇದನ್ನೂ ಓದಿ: Prabhas: ದೊಡ್ಡಪ್ಪನ ನಿಧನದ ನೋವಿಟ್ಟುಕೊಂಡು ಕೆಲಸಕ್ಕೆ ಬಂದ ಪ್ರಭಾಸ್​; ‘ಸಲಾರ್​’ ಶೂಟಿಂಗ್​ ಮತ್ತೆ ಶುರು

‘ಸಲಾರ್’ ಸಿನಿಮಾದಲ್ಲಿ ಪ್ರಭಾಸ್​ಗೆ ಜೋಡಿಯಾಗಿ ನಟಿ ಶ್ರುತಿ ಹಾಸನ್ ನಟಿಸುತ್ತಿದ್ದಾರೆ. ಈ ಸಿನಿಮಾಗೆ ಹೊಬಾಳೆ ಫಿಲ್ಮ್ಸ್ ಬಂಡವಾಳ ಹೂಡುತ್ತಿದೆ. ದೊಡ್ಡ ಬಜೆಟ್​ನಲ್ಲಿ ಈ ಚಿತ್ರ ಸಿದ್ಧಗೊಳ್ಳುತ್ತಿದೆ. ಈ ಚಿತ್ರದಲ್ಲಿ ಮಲಯಾಳಂನ ಪೃಥ್ವಿರಾಜ್​ ಕೂಡ ನಟಿಸುತ್ತಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada