ಮೊಟ್ಟ ಮೊದಲ ಬಾರಿಗೆ ಪ್ರಿಯಾಮಣಿಗೆ ಶಾರುಖ್​ ನೀಡಿದ್ರು 300 ರೂಪಾಯಿ; ಆ ಹಣದ ಪ್ರಾಮುಖ್ಯತೆ ವಿವರಿಸಿದ ನಟಿ

ಪ್ರಿಯಾಮಣಿ ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸೀರಿಸ್​ ಮೂಲಕ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದುಕೊಂಡಿದ್ದಾರೆ. ಈ ವೆಬ್​ ಸೀರಿಸ್​ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಮೊಟ್ಟ ಮೊದಲ ಬಾರಿಗೆ ಪ್ರಿಯಾಮಣಿಗೆ ಶಾರುಖ್​ ನೀಡಿದ್ರು 300 ರೂಪಾಯಿ; ಆ ಹಣದ ಪ್ರಾಮುಖ್ಯತೆ ವಿವರಿಸಿದ ನಟಿ

Updated on: Jun 18, 2021 | 2:55 PM

‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸೀರಿಸ್​ನಲ್ಲಿ ನಟಿಸುವ ಮೂಲಕ ಪ್ರಿಯಾಮಣಿ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ. ಅವರು ತಮ್ಮ ನಟನೆ ಮೂಲಕ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ. ಇತ್ತೀಚಿಗಿನ ಸಂದರ್ಶನವೊಂದರಲ್ಲಿ ಪ್ರಿಯಾಮಣಿ ಅಚ್ಚರಿಯ ವಿಚಾರ ಬಿಚ್ಚಿಟ್ಟಿದ್ದಾರೆ. ಶಾರುಖ್​ ಖಾನ್​ ಅವರು ಪ್ರಿಯಾಮಣಿಗೆ 300 ರೂಪಾಯಿ ನೀಡಿದ್ದರಂತೆ! ಈ ವಿಚಾರದ ಬಗ್ಗೆ ಪ್ರಿಯಾಮಣಿ ಹೇಳಿಕೊಂಡಿದ್ದಾರೆ.

2013ರಲ್ಲಿ ‘ಚೆನ್ನೈ ಎಕ್ಸ್​ಪ್ರೆಸ್’​ ಸಿನಿಮಾ ತೆರೆಗೆ ಬಂದು ದೊಡ್ಡಮಟ್ಟದಲ್ಲಿ ಹಿಟ್ ಆಗಿತ್ತು. ಈ ಸಿನಿಮಾದಲ್ಲಿ ಶಾರುಖ್​ ಹಾಗೂ ದೀಪಿಕಾ ಕಾಂಬಿನೇಷನ್​ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲೂ ದೊಡ್ಡಮಟ್ಟದಲ್ಲೇ ಗಳಿಕೆ ಮಾಡಿತ್ತು. ಈ ಚಿತ್ರದಲ್ಲಿ ‘ಒನ್​ ಟೂ ತ್ರೀ ಫೋರ್..’ ಸಾಂಗ್​ ಇದೆ. ಈ ಹಾಡಿನಲ್ಲಿ ಪ್ರಿಯಾಮಣಿ ಕೂಡ ಹೆಜ್ಜೆ ಹಾಕಿದ್ದಾರೆ. ಈ ವಿಶೇಷ ಹಾಡಿನ ಶೂಟಿಂಗ್​ ವೇಳೆ ಶಾರುಖ್​ ಅವರು ಪ್ರಿಯಾಮಣಿಗೆ 300 ರೂಪಾಯಿ ನೀಡಿದ್ದರು.

ಶಾರುಖ್​ ಈ ಹಣವನ್ನು ನೀಡೋಕೆ ಕಾರಣವೇನು? ಅದನ್ನು ಕೂಡ ಪ್ರಿಯಾಮಣಿ ವಿವರಿಸಿದ್ದಾರೆ. ​ ಐಪ್ಯಾಡ್​ನಲ್ಲಿ ಶಾರುಖ್​ ಖಾನ್ ಹಾಗೂ ಪ್ರಿಯಾಮಣಿ ಕೌನ್​ ಬನೇಗಾ ಕರೋಡ್​​​ಪತಿ ಆಡಿದ್ದರು. ಈ ಆಟದಲ್ಲಿ ಪ್ರಿಯಾಮಣಿ ಗೆದ್ದಿದ್ದರು. ಆಗ ಶಾರುಖ್​ 300 ರೂಪಾಯಿ ನೀಡಿದ್ದರು. ಇದನ್ನು, ಪ್ರಿಯಾಮಣಿ ಖರ್ಚು ಮಾಡಿಕೊಳ್ಳದೇ ಹಾಗೆಯೇ ಪರ್ಸ್​ನಲ್ಲಿ ಇಟ್ಟುಕೊಂಡಿದ್ದಾರೆ.

‘ಶಾರುಖ್​ ಖಾನ್​ ಬಾಲಿವುಡ್​ ಬಾದ್​ಶಾ. ಆದರೆ, ಅವರು ತಮ್ಮ ಯಶಸ್ಸನ್ನು ಎಂದಿಗೂ ತಲೆಗೆ ಹತ್ತಿಸಿಕೊಂಡಿಲ್ಲ. ಅವರ ಜತೆ ಕೆಲಸ ಮಾಡೋದು ತುಂಬಾನೇ ಖುಷಿಯ ವಿಚಾರ. ಅವರಿಂದ ಕಲಿಯೋದು ತುಂಬಾನೇ ಇದೆ, ಅವರು ನೀಡಿರೋ ಹಣ ತುಂಬಾನೇ ವಿಶೇಷವಾದುದು’ ಎಂದು ಪ್ರಿಯಾಮಣಿ ಹೇಳಿಕೊಂಡಿದ್ದಾರೆ.

ಪ್ರಿಯಾಮಣಿ ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸೀರಿಸ್​ ಮೂಲಕ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದುಕೊಂಡಿದ್ದಾರೆ. ಈ ವೆಬ್​ ಸೀರಿಸ್​ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಪ್ರಿಯಾಮಣಿ ತಮಗಾದ ಬಾಡಿ ಶೇಮಿಂಗ್​ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದರು.

ಇದನ್ನೂ ಓದಿ: ‘ಕಪ್ಪಗಿದ್ದೀಯ, ಆಂಟಿ ಥರ ಕಾಣ್ತೀಯ, ಡುಮ್ಮಿ ಆಗಿದೀಯ ಅಂದ್ರು’; ಬೇಸರದ ಸಂಗತಿ ಹೊರಹಾಕಿದ ಪ್ರಿಯಾಮಣಿ

 

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us