Raghava Lawrence: ಹೊಸ ಚಿತ್ರ ಘೋಷಿಸಿದ ‘ಕಾಂಚನಾ’ ಚಿತ್ರದ ನಿರ್ದೇಶಕ ರಾಘವ ಲಾರೆನ್ಸ್

Edited By:

Updated on: Aug 08, 2021 | 3:53 PM

Durga: ರಾಘವ ಲಾರೆನ್ಸ್ ತಮ್ಮ ಹೊಸ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಭಯಾನಕ ಲುಕ್​ನೊಂದಿಗೆ ಗಮನ ಸೆಳೆಯುತ್ತಿರುವ ಅವರ ಈ ಪೋಸ್ಟರ್​ನ ಕುರಿತ ವಿಡಿಯೊ ಸ್ಟೋರಿ ಇಲ್ಲಿದೆ.

ತೆಲುಗು, ತಮಿಳು ಚಿತ್ರರಂಗದಲ್ಲಿ ಹಾರರ್- ಕಾಮಿಡಿ, ಆಕ್ಷನ್ ಮೊಲದಲಾದ ಜಾನರ್​ಗಳಲ್ಲಿ ಹಿಟ್ ಚಿತ್ರಗಳನ್ನು ನೀಡಿರುವ ನಿರ್ದೇಶಕ ರಾಘವ ಲಾರೆನ್ಸ್ ಅಂಥದ್ದೇ ಮತ್ತೊಂದು ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಈ ಹಿಂದೆ ಮುನಿ, ಕಾಂಚನಾ, ಕಾಂಚನಾ 2, ಕಾಂಚನಾ 3 ಮೊದಲಾದ ಹಿಟ್ ಚಿತ್ರಗಳನ್ನು ರಾಘವ ನೀಡಿದ್ದರು. ಹಲವು ಮಾಸ್ ಸಿನಿಮಾಗಳನ್ನೂ ನಿರ್ದೇಶಿಸಿರುವ ರಾಘವ ಲಾರೆನ್ಸ್, ಕೇವಲ ನಿರ್ದೇಶನ, ನಟನೆಗೆ ಸೀಮಿತವಾಗಿಲ್ಲ. ನೃತ್ಯ ನಿರ್ದೇಶಕ, ಸಂಗೀತ ನಿರ್ದೇಶಕ, ಗಾಯಕನಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ‘ಕಾಂಚನಾ’ ಚಿತ್ರದ ಹಿಂದಿ ರಿಮೇಕನ್ನು ಸ್ವತಃ ಇವರೇ ನಿರ್ದೇಶಿಸುತ್ತಿದ್ದು ಅದರಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ರಾಘವ ಲಾರೆನ್ಸ್ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರುದ್ರನ್, ಅಧಿಕಾರನ್ ಮೊದಲಾದ ತಮಿಳು ಚಿತ್ರಗಳಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದು, ನಂತರ ದುರ್ಗಾ ಚಿತ್ರ ಸೆಟ್ಟೇರಲಿದೆ. ಈ ಚಿತ್ರವನ್ನು ಯಾರು ನಿರ್ದೇಶಿಸಲಿದ್ದಾರೆ ಎಂಬುದನ್ನು ಚಿತ್ರತಂಡ ಇನ್ನಷ್ಟೇ ತಿಳಿಸಬೇಕಿದ್ದು, ಸದ್ಯ ಮೊದಲ ಪೋಸ್ಟರ್ ಬಿಡುಗಡೆ ಮಾಡಿದೆ. ರಾಘವ ಲಾರೆನ್ಸ್ ಅವರು ಕನ್ನಡದ ಶಿವಲಿಂಗ ಚಿತ್ರವನ್ನು ಅದೇ ಹೆಸರಿನಲ್ಲಿ ರಿಮೇಕ್ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ನೋಡಿ:

IPL 2021: ಐಪಿಎಲ್​ನ ಪ್ರಮುಖ ನಿಯಮ ಬದಲಿಸಿದ ಬಿಸಿಸಿಐ

Bigg Boss Winner: ‘ನಾನು ಬಿಗ್​ ಬಾಸ್​ ವಿನ್ನರ್​’; ಎಲಿಮಿನೇಟ್​ ಆದ್ಮೇಲೂ ಸುದೀಪ್​ ಎದುರು ಪ್ರಶಾಂತ್​ ಸಂಬರಗಿ ಹೀಗೆ ಹೇಳಿದ್ದೇಕೆ?

(Raghava Lawrence releases a poster of his new movie Durga)

Published on: Aug 08, 2021 03:49 PM