AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ಐಪಿಎಲ್​ನ ಪ್ರಮುಖ ನಿಯಮ ಬದಲಿಸಿದ ಬಿಸಿಸಿಐ

IPL Phase 2: ಐಪಿಎಲ್​ ದ್ವಿತಿಯಾರ್ಧವು ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 15ರವರೆಗೆ ನಡೆಯಲಿದೆ. ಈ ವೇಳೆ ಒಟ್ಟು 31 ಪಂದ್ಯಗಳು ನಡೆಯಲಿದೆ. ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂ ಮೊದಲ ಕ್ವಾಲಿಫೈಯರ್ ಮತ್ತು ಫೈನಲ್ ಸೇರಿದಂತೆ 13 ಪಂದ್ಯಗಳು ಜರುಗಲಿದೆ.

IPL 2021: ಐಪಿಎಲ್​ನ ಪ್ರಮುಖ ನಿಯಮ ಬದಲಿಸಿದ ಬಿಸಿಸಿಐ
ಇಂಡಿಯನ್ ಪ್ರೀಮಿಯರ್ ಲೀಗ್ ದ್ವಿತಿಯಾರ್ಧ ಕಾವೇರುತ್ತಿದೆ. ಈಗಾಗಲೇ ಎಲ್ಲಾ ತಂಡಗಳು ಯುಎಇನಲ್ಲಿ ಅಭ್ಯಾಸವನ್ನೂ ಆರಂಭಿಸಿದೆ. ಸೆಪ್ಟೆಂಬರ್​ 19 ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ತಂಡ ಚೆನ್ನೈ ಸೂಪರ್ ಕಿಂಗ್ಸ್​ ಅನ್ನು ಎದುರಿಸಲಿದೆ. ಈ ಪಂದ್ಯದ ಮೂಲಕ ದ್ವಿತಿಯಾರ್ಧಕ್ಕೆ ಚಾಲನೆ ಸಿಗಲಿದೆ.
TV9 Web
| Edited By: |

Updated on: Aug 08, 2021 | 3:41 PM

Share

ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ಆರಂಭಕ್ಕೆ ಇನ್ನು ತಿಂಗಳುಗಳು ಮಾತ್ರ ಉಳಿದಿವೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ಟೂರ್ನಿಯ ಉಳಿದ ಪಂದ್ಯಗಳಿಗಾಗಿ ಭರ್ಜರಿ ತಯಾರಿ ಆರಂಭಿಸಿದೆ. ಸೆಪ್ಟೆಂಬರ್ 19 ರಿಂದ ಯುಎಇನಲ್ಲಿ ಐಪಿಎಲ್​ನ ದ್ವಿತಿಯಾರ್ಧ ಆರಂಭವಾಗಲಿದ್ದು, ಅದಕ್ಕೂ ಮುನ್ನ ಟೂರ್ನಿಯ ಕೆಲ ನಿಯಮಗಳಲ್ಲಿ ಬಿಸಿಸಿಐ ಪ್ರಮುಖ ಬದಲಾವಣೆ ಮಾಡಿಕೊಂಡಿದೆ. ಅದರಂತೆ ಐಪಿಎಲ್​ನ 2ನೇ ಹಂತದಲ್ಲಿ ಚೆಂಡು ಸ್ಡೇಡಿಯಂ ಸ್ಟ್ಯಾಂಡ್​ಗೆ ಹೋದರೆ ಅಥವಾ ಸ್ಟೇಡಿಯಂನಿಂದ ಹೊರ ಹೋದರೆ, ಚೆಂಡನ್ನು ಬದಲಿಸಲಾಗುತ್ತದೆ. ಈ ಹಿಂದೆ ಕ್ರೀಡಾಂಗಣದಿಂದ ಬಾಲ್ ಹೊರ ಹೋದಾಗ ಅಥವಾ ಸ್ಟ್ಯಾಂಡ್‌ನಲ್ಲಿ ಬಿದ್ದಾಗ ಅಂಪೈರ್‌ಗಳು ಚೆಂಡನ್ನು ಸ್ವಚ್ಛಗೊಳಿಸಿ ಅದೇ ಚೆಂಡಿನೊಂದಿಗೆ ಆಟವನ್ನು ಮುಂದುವರಿಸುತ್ತಿದ್ದರು. ಆದರೆ, ಈ ಬಾರಿ ನಿಯಮ ಬದಲಿಸಿದ್ದು, ಚೆಂಡು ಮೈದಾನದಿಂದ ಹೊರ ಹೋದರೆ ಹೊಸ ಚೆಂಡಿನ ಮೂಲಕ ಆಟವನ್ನು ಮುಂದುವರೆಸಲು ಬಿಸಿಸಿಐ ನಿರ್ಧರಿಸಿದೆ.

ಐಪಿಎಲ್​ನ ದ್ವಿತಿಯಾರ್ಧದಲ್ಲಿ ಪ್ರೇಕ್ಷಕರಿಗೆ ಅವಕಾಶ ನೀಡುವ ಸಲುವಾಗಿ ಬಿಸಿಸಿಐ ನಿಯಮ ಬದಲಾವಣೆಗೆ ಮುಂದಾಗಿದೆ. ಸದ್ಯದ ಮಾಹಿತಿ ಪ್ರಕಾರ ಯುಎಇ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸಲು ಪ್ರೇಕ್ಷಕರಿಗೆ ಅವಕಾಶ ಇರಲಿದ್ದು, ಒಂದು ವೇಳೆ ಚೆಂಡು ಸ್ಟೇಡಿಯಂಗೆ ಬಿದ್ದಾಗ ಪ್ರೇಕ್ಷಕರು ಸ್ಪರ್ಶಿಸುವ ಸಾಧ್ಯತೆಯಿದೆ. ಇಂತಹ ಸನ್ನಿವೇಶದಲ್ಲಿ ಯಾವುದಾದರೂ ಕೊರೋನಾ ಸೋಂಕಿತ ಪ್ರೇಕ್ಷಕರಿಂದ ಆಟಗಾರರಿಗೆ ಸೋಂಕು ಹರಡುವ ಭೀತಿಯಿದ್ದು, ಹೀಗಾಗಿ ಸ್ಟೇಡಿಯಂಗೆ ಚೆಂಡು ಬಿದ್ದರೆ, ಹೊಸ ಚೆಂಡಿನೊಂದಿಗೆ ಪಂದ್ಯವನ್ನು ಮುಂದುವರೆಸಲು ನಿರ್ಧರಿಸಲಾಗಿದೆ.

ಇನ್ನು ಕಳೆದ ಬಾರಿಯಂತೆ ಈ ಸಲ ಕೂಡ ಚೆಂಡಿಗೆ ಎಂಜಲು ಬಳಸುವುದನ್ನು ನಿಷೇಧಿಸಲಾಗಿದೆ. ಚೆಂಡನ್ನು ಹೊಳೆಯುವಂತೆ ಮಾಡಲು ಆಟಗಾರರಿಗೆ ಲಾಲಾರಸವನ್ನು ಬಳಸಲು ಅನುಮತಿಸಲಾಗುವುದಿಲ್ಲ. ಆಟಗಾರನು ಮೊದಲ ಬಾರಿಗೆ ಎಂಜಲು ಅನ್ವಯಿಸಿದರೆ, ಅಂಪೈರ್‌ಗಳು ಆಟಗಾರರಿಗೆ ಆರಂಭಿಕ ಎಚ್ಚರಿಕೆ ನೀಡಲಿದ್ದಾರೆ. ಇದಾಗ್ಯೂ ಅದೇ ತಪ್ಪು ಮರುಕಳಿಸಿದರೆ ಬ್ಯಾಟಿಂಗ್ ತಂಡಕ್ಕೆ 5-ರನ್ ಪೆನಾಲ್ಟಿ ನೀಡಲಾಗುತ್ತದೆ.

ಐಪಿಎಲ್​ ದ್ವಿತಿಯಾರ್ಧವು ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 15ರವರೆಗೆ ನಡೆಯಲಿದೆ. ಈ ವೇಳೆ ಒಟ್ಟು 31 ಪಂದ್ಯಗಳು ನಡೆಯಲಿದೆ. ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂ ಮೊದಲ ಕ್ವಾಲಿಫೈಯರ್ ಮತ್ತು ಫೈನಲ್ ಸೇರಿದಂತೆ 13 ಪಂದ್ಯಗಳು ಜರುಗಲಿದೆ. ಅದೇ ರೀತಿ ಎಲಿಮಿನೇಟರ್ ಮತ್ತು ಎರಡನೇ ಕ್ವಾಲಿಫೈಯರ್ ಪಂದ್ಯ ಸೇರಿದಂತೆ ಶಾರ್ಜಾದಲ್ಲಿ ಒಟ್ಟು 10 ಪಂದ್ಯಗಳನ್ನು ಆಯೋಜಿಸಲಿದೆ. ಹಾಗೆಯೇ 8 ಪಂದ್ಯಗಳಿಗೆ ಅಬುಧಾಬಿ ಸ್ಟೇಡಿಯಂ ಆತಿಥ್ಯವಹಿಸಲಿದೆ. ಸೆಪ್ಟೆಂಬರ್​ 25ರಿಂದ ಡಬಲ್ ಹೆಡರ್​ಗಳು ಆರಂಭವಾಗಲಿದ್ದು, ಒಟ್ಟು ಏಳು ಡಬಲ್ ಹೆಡರ್​ಗಳು ಇರಲಿದೆ. ಭಾರತೀಯ ಕಾಲಮಾನ ರಾತ್ರಿ 7.30ಕ್ಕೆ ಪಂದ್ಯಗಳು ಶುರುವಾಗಲಿದ್ದು, ಎರಡು ಪಂದಗಳಿದ್ದಾಗ ಮೊದಲ ಪಂದ್ಯವು ಮಧ್ಯಾಹ್ನ 3.30ಕ್ಕೆ, 2ನೇ ಪಂದ್ಯವು 7.30 ಕ್ಕೆ ನಡೆಯಲಿದೆ.

ಇದನ್ನೂ ಓದಿ: Tokyo Olympics 2020: ಭಾರತ ಸೋಲುತ್ತಿದ್ದಂತೆ ರೆಫರಿಗೆ ಬಿತ್ತು ಏಟು..!

ಇದನ್ನೂ ಓದಿ: Neeraj Chopra: ಆಸ್ಪತ್ರೆಯ ಬೆಡ್​ನಿಂದ ಚಿನ್ನದ ಬೇಟೆ ತನಕ: ನೀರಜ್ ಚೋಪ್ರಾ ಎಂಬ ಗೋಲ್ಡನ್ ಸ್ಟಾರ್

ಇದನ್ನೂ ಓದಿ: ಬ್ಲೂಟೂತ್ ಹೆಡ್​ಫೋನ್ ಸ್ಪೋಟ, ಯುವಕ ಸಾವು..!

(IPL 2021: Big rule change to be introduced in IPL Phase 2)

ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
‘ಮದುವೆಯಾಗಿ ಒಂದು ತಿಂಗಳಾದ್ರೂ ಹೆಂಡ್ತಿ ಜತೆಗೆ ಮಲಗಿಲ್ಲ ಅವನು!'
‘ಮದುವೆಯಾಗಿ ಒಂದು ತಿಂಗಳಾದ್ರೂ ಹೆಂಡ್ತಿ ಜತೆಗೆ ಮಲಗಿಲ್ಲ ಅವನು!'
ಅಲಂಕಾರಕ್ಕೆಂದು ತಂದಿದ್ದ ಹೂವಿನ ಕುಂಡಗಳನ್ನು ಕದ್ದೊಯ್ದ ಜನ
ಅಲಂಕಾರಕ್ಕೆಂದು ತಂದಿದ್ದ ಹೂವಿನ ಕುಂಡಗಳನ್ನು ಕದ್ದೊಯ್ದ ಜನ
ನ್ಯಾಯಾಲಯದಲ್ಲಿ ವಿಚ್ಛೇದಿತ ಪತಿಯನ್ನು ಹಿಗ್ಗಾಮುಗ್ಗ ಥಳಿಸಿದ ಮಹಿಳೆ
ನ್ಯಾಯಾಲಯದಲ್ಲಿ ವಿಚ್ಛೇದಿತ ಪತಿಯನ್ನು ಹಿಗ್ಗಾಮುಗ್ಗ ಥಳಿಸಿದ ಮಹಿಳೆ