IND vs ENG: ಇಂತಹ ಬೌಲಿಂಗ್ ವಿಭಾಗವನ್ನು ನಾನು ಮತ್ತೆಲ್ಲೂ ನೋಡಿಲ್ಲ! ಭಾರತದ ಬೌಲರ್‌ಗಳನ್ನು ಹೊಗಳಿದ ಇಂಜಮಾಮ್-ಉಲ್-ಹಕ್
IND vs ENG: ಟೀಮ್ ಇಂಡಿಯಾ ಈ ಹಿಂದೆ ಉತ್ತಮ ವೇಗದ ಬೌಲರ್‌ಗಳನ್ನು ಸೃಷ್ಟಿಸಿದೆ, ಆದರೆ ಪ್ರಸ್ತುತ ಭಾರತೀಯ ವೇಗದ ಬೌಲರ್‌ಗಳು ನಿಜವಾದ ವೇಗದ ಬೌಲರ್‌ಗಳ ಆಕ್ರಮಣವನ್ನು ಹೊಂದಿದ್ದಾರೆ.
ನಾಟಿಂಗ್ ಹ್ಯಾಮ್ನಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ನ ನಾಲ್ಕನೇ ದಿನದಂದು ಭಾರತದ ಬೌಲಿಂಗ್ ವಿಭಾಗ ಅದ್ಭುತವಾಗಿ ಬೌಲಿಂಗ್ ಮಾಡಿತು. ನಾಯಕ ಜೋ ರೂಟ್ 109 ರನ್ ಗಳ ಹೊರತಾಗಿಯೂ, ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 303 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಕಾರಣದಿಂದಾಗಿ ಭಾರತಕ್ಕೆ 209 ರನ್ಗಳ ಗುರಿ ಸಿಕ್ಕಿತು. ರೂಟ್ ಹೊರತುಪಡಿಸಿ, ಯಾವುದೇ ಬ್ಯಾಟ್ಸ್‌ಮನ್ ಭಾರತೀಯ ಬೌಲರ್‌ಗಳ ಮುಂದೆ ನಿಲ್ಲಲು ಸಾಧ್ಯವಾಗಲಿಲ್ಲ. ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್-ಉಲ್-ಹಕ್ ಜಸ್‌ಪ್ರೀತ್ ಬುಮ್ರಾ ಮತ್ತು ತಂಡ ಆತಿಥೇಯರ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಕಳುಹಿಸಿದ ರೀತಿಯಿಂದ ಬಹಳ ಪ್ರಭಾವಿತರಾಗಿದ್ದಾರೆ. ಜೊತೆಗೆ ಭಾರತೀಯ ಬೌಲರ್‌ಗಳನ್ನು ತೀವ್ರವಾಗಿ ಹೊಗಳಿದ್ದಾರೆ.
ತನ್ನ ಯುಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಇಂಜಮಾಮ್ ಟೀಮ್ ಇಂಡಿಯಾ ಮೊದಲ ದಿನದಂದಲೂ ವೇಗದ ಬೌಲಿಂಗ್ ಮೂಲಕ ಸರಣಿಗೆ ಲಯವನ್ನು ಪಡೆದುಕೊಂಡಿದೆ. ಇಂಗ್ಲೆಂಡ್‌ನಲ್ಲಿ ಬೌಲಿಂಗ್ ಲೈನ್‌ಗಳು ವಿಭಿನ್ನವಾಗಿರುವುದರಿಂದ ಉಪಖಂಡದ ಬೌಲರ್‌ಗಳಿಗೆ ಮೊದಲ ಟೆಸ್ಟ್ ಕಷ್ಟವಾಗಿರುತ್ತದೆ. ಆದರೆ ಟೀಂ ಇಂಡಿಯಾದ ಬೌಲರ್‌ಗಳು ಇದನ್ನು ಸುಳ್ಳು ಮಾಡಿದ್ದಾರೆ.
ಅಂತಹ ಭಾರತೀಯ ವೇಗದ ಬೌಲಿಂಗ್ ತಂಡವನ್ನು ನೋಡಿಲ್ಲ ಬುಮ್ರಾ ಮೊದಲ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಪಡೆದು ಇಂಗ್ಲೆಂಡ್ ಬ್ಯಾಟಿಂಗ್ ಬೆನ್ನೇಲುಬ್ಬನು ಮುರಿದರು ಎಂದು ಇಂಜಮಾಮ್ ಹೇಳಿದರು. ಮೊದಲ ಇನ್ನಿಂಗ್ಸ್‌ನಲ್ಲಿಯೂ ಜೋ ರೂಟ್ ಅರ್ಧಶತಕ ಗಳಿಸಿದರು, ಆದರೆ ಬುಮ್ರಾ ತಮ್ಮ ಬೌಲಿಂಗ್ ಮೂಲಕ ಪ್ರಭಾವ ಬೀರಿದರು. ಇತರ ವೇಗದ ಬೌಲರ್‌ಗಳಾದ ಮೊಹಮ್ಮದ್ ಶಮಿ ಮತ್ತು ಸಿರಾಜ್ ಕೂಡ ಅದ್ಭುತವಾಗಿ ಬೌಲ್ ಮಾಡಿದರು. ನಾನು ಅಂತಹ ಭಾರತೀಯ ವೇಗದ ಬೌಲಿಂಗ್ ತಂಡವನ್ನು ನಾನು ಮತ್ತೆಲ್ಲೂ ನೋಡಿಲ್ಲ ಎಂದು ಇಂಜಮಾಮ್ ಹೇಳಿದ್ದಾರೆ.
ಟೀಮ್ ಇಂಡಿಯಾ ಈ ಹಿಂದೆ ಉತ್ತಮ ವೇಗದ ಬೌಲರ್‌ಗಳನ್ನು ಸೃಷ್ಟಿಸಿದೆ, ಆದರೆ ಪ್ರಸ್ತುತ ಭಾರತೀಯ ವೇಗದ ಬೌಲರ್‌ಗಳು ನಿಜವಾದ ವೇಗದ ಬೌಲರ್‌ಗಳ ಆಕ್ರಮಣವನ್ನು ಹೊಂದಿದ್ದಾರೆ. ನೀವು ಆಕ್ರಮಣಕಾರಿ ವೇಗದ ಬೌಲರ್‌ಗಳನ್ನು ಹೊಂದಿರುವಾಗ, ಈ ರೀತಿಯ ಪ್ರದರ್ಶನವು ಖಂಡಿತವಾಗಿಯೂ ಬರುತ್ತದೆ ಎಂದಿದ್ದಾರೆ.
ಬುಮ್ರಾ ಪರಿಣಾಮಕಾರಿಯಾದರು ಮೊದಲ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಪಡೆದ ನಂತರ, ಬುಮ್ರಾ ಎರಡನೇ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದರು. ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ತಲಾ 2 ವಿಕೆಟ್ ಪಡೆದರು. 209 ರನ್ ಗಳ ಗುರಿಯನ್ನು ಬೆನ್ನಟ್ಟಿದ ಭಾರತೀಯರು ಕೆಎಲ್ ರಾಹುಲ್ (26) ಅವರ ವಿಕೆಟ್ ಕಳೆದುಕೊಂಡಿದ್ದಾರೆ. ಭಾರತದ ಗೆಲುವಿಗೆ 157 ರನ್ ಗಳ ಅಗತ್ಯವಿದೆ. ಮಳೆಯಿಂದಾಗಿ ಐದನೇ ದಿನದ ಆಟವು ಸರಿಯಾದ ಸಮಯಕ್ಕೆ ಆರಂಭವಾಗಿಲ್ಲ.