ರಾಜ್ ಬಿ. ಶೆಟ್ಟಿ (Raj B Shetty) ಅವರು ಕನ್ನಡದಲ್ಲಿ ಅಪಾರ ಜನಪ್ರಿಯತೆ ಪಡೆದಿದ್ದಾರೆ. ಅವರಿಗೆ ಈಗ ಪರಭಾಷೆಯಿಂದ ಬೇಡಿಕೆ ಸೃಷ್ಟಿ ಆಗಿದೆ. ರಾಜ್ ಬಿ ಶೆಟ್ಟಿ ಅವರು ಮಮ್ಮೂಟಿ ನಟನೆಯ ‘ಟರ್ಬೋ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು ಗಮನ ಸೆಳೆದಿದೆ. ರಾಜ್ ಅವರು ಪವರ್ಫುಲ್ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಟ್ರೇಲರ್ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಗುತ್ತಿದೆ. ಮೇ 23ರಂದು ಸಿನಿಮಾ ಥಿಯೇಟರ್ನಲ್ಲಿ ರಿಲೀಸ್ ಆಗುತ್ತಿದೆ.
133 ಸೆಕೆಂಡ್ಗಳ ಟ್ರೇಲರ್ನಲ್ಲಿ ಆರಂಭದಲ್ಲಿ ಜೋಸ್ನ (ಮಮ್ಮೂಟಿ) ಪರಿಚಯ ಮಾಡಿಕೊಡುವ ಪ್ರಯತ್ನ ನಡೆದಿದೆ. ಆತ ಕೇವಲ ಜೋಸ್ ಅಲ್ಲ ಟರ್ಬೋ ಜೋಸ್. ಟ್ರೇಲರ್ನಲ್ಲಿ ಭರ್ಜರಿ ಆ್ಯಕ್ಷನ್ ತೋರಿಸಲಾಗಿದೆ. ಇದರ ಜೊತೆಗೆ ಕಾಮಿಡಿ ಕೂಡ ಇದೆ. ಟ್ರೇಲರ್ನಲ್ಲಿ ರಾಜ್ ಬಿ ಶೆಟ್ಟಿ ಅವರು ಕೂಡ ಕಾಣಿಸುತ್ತಾರೆ. ರಾಜ್ ಬಿ ಶೆಟ್ಟಿ ಓರ್ವ ಪವರ್ಫುಲ್ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಎಂಟ್ರಿ ಸಖತ್ ಆಗಿದೆ. ರಾಜ್ ಹಾಗೂ ಮಮ್ಮೂಟಿ ನಡುವಿನ ಮುಖಾಮುಖಿ ಗಮನ ಸೆಳೆದಿದೆ. ಮಲಯಾಳಂನಲ್ಲೂ ಅವರೇ ಡಬ್ ಮಾಡಿದ್ದಾರೆ ಅನ್ನೋದು ವಿಶೇಷ.
‘ಟರ್ಬೋ’ ಚಿತ್ರವನ್ನು ‘ಪುಲಿಮುರುಗನ್’ ಖ್ಯಾತಿಯ ವಿಶಾಕ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ‘ಅಬ್ರಾಮ್ ಓಜ್ಲರ್’ ನಿರ್ದೇಶಕ ಮುಥುನ್ ಮ್ಯಾನ್ಯುಯೆಲ್ ಅವರು ಕಥೆ ಬರೆದಿದ್ದಾರೆ. ಈ ಚಿತ್ರವನ್ನು ಸ್ವತಃ ಮಮ್ಮೂಟಿ ಅವರು ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ: ದುಲ್ಕರ್ ಸಲ್ಮಾನ್ಗೆ ಆಕ್ಷನ್ ಕಟ್ ಹೇಳಲಿದ್ದಾರೆ ರಾಜ್ ಬಿ ಶೆಟ್ಟಿ
ರಾಜ್ ಬಿ ಶೆಟ್ಟಿ ಜೊತೆ ತೆಲುಗು ನಟ ಸುನಿಲ್ ಕೂಡ ಇದ್ದಾರೆ. ಇಬ್ಬರಿಗೂ ಇದು ಮಲಯಾಳಂನಲ್ಲಿ ಮೊದಲ ಸಿನಿಮಾ. ಅಂಜನಾಜಯ ಪ್ರಕಾಶ್, ಕಬಿರ್ ದುಹಾನ್ ಸಿಂಗ್, ಸಿದ್ದಿಕಿ ಮೊದಲಾದವರು ಅತಿಥಿ ಪಾತ್ರ ಮಾಡಿದ್ದಾರೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.